ಎಸ್ ಬಿಐ, ಎಚ್ ಡಿಎಫ್ ಸಿ ಸಾಲ ದರ ಏರಿಕೆ

ಬೆಂಗಳೂರು, ನ.6: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ಜಿ ರಾಜನ್ ಪ್ರಕಟಿಸಿರುವ ಎರಡು ಹಣಕಾಸು ನೀತಿಯ ತನ್ನ ಪರಿಣಾಮ ಬೀರುತ್ತಿದೆ. ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಮತ್ತಷ್ಟು ದುಬಾರಿಯಾಗಿದೆ.

ಆರ್ ಬಿಐ ಇತ್ತೀಚೆಗೆ ರೆಪೊ ದರವನ್ನು ಶೇ.7.50 ರಿಂದ ಶೇ.7.75ಕ್ಕೆ ಏರಿಕೆ ಮಾಡಿತ್ತು. ಅದರೆ, ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ತ್ರೈಮಾಸಿಕ ವರದಿ ವಿವರ ಇಲ್ಲಿ ಓದ್ಕೊಳ್ಳಿ

ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಕಟಣೆಯತ್ತ ಗಮನ ಹರಿಸಿದರೆ, ಮನೆ ಮತ್ತು ವಾಹನ ಸಾಲ ಬಡ್ಡಿದರ ಏರಿಕೆ ಕಣ್ಣಿಗೆ ರಾಚುತ್ತದೆ. ಮೂಲಾಂಶದಲ್ಲಿ 20 ಅಂಶಗಳನ್ನು ಏರಿಸಿ ಮೂಲ ದರದಲ್ಲಿ ಶೇ 9.8 ರಿಂದ ಶೇ 10ಕ್ಕೆ ಎರಡು ಬ್ಯಾಂಕ್ ಏರಿಸಿವೆ.

Home, Auto Loans dearer as SBI, HDFC Bank hike rates

ಇದರ ಪರಿಣಾಮವಾಗಿ ಎಸ್ ಬಿಐನಲ್ಲಿ 30 ಲಕ್ಷ ರು ತನಕದ ಸಾಲಕ್ಕೆ ಶೇ 10.3 ರಷ್ಟು ಬಡ್ಡಿ ತೆರಬೇಕಾಗುತ್ತದೆ. 30 ಲಕ್ಷ ರು ಗೂ ಅಧಿಕ ಸಾಲಕ್ಕೆ ಶೇ 10.5 ಕ್ಕೂ ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. ಇದನ್ನು EMI ಗೆ ಅನ್ವಯಿಸಿದರೆ ತಿಂಗಳಿಗೆ 30 ಲಕ್ಷ ರು ಸಾಲಕ್ಕೆ 368 ರು ಪಾವತಿಸಬೇಕಾಗುತ್ತದೆ.

ಎಸ್ ಬಿಐ ವಾಹನ ಸಾಲದ ಬಡ್ಡಿದರ ಶೇ 10.75 ಕ್ಕೆ ಏರಿದೆ. ಪ್ರೈಮ್ ಲೆಂಡಿಂಗ್ ರೇಟ್(ಬಿಪಿಎಲ್‌ಆರ್) ಕೂಡ ಶೇ.14.55ರಿಂದ ಶೇ.14.75ಕ್ಕೆ ಏರಿಕೆಯಾಗಿದೆ.ಎಸ್ ಬಿಐ ಬಡ್ಡಿದರ ದಲ್ಲಿ ಬದಲಾವಣೆ ಸೂಚಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಎಸ್ ಬಿಐ ಷೇರುಗಳು ಏರಿಳಿತ ಕಂಡಿವೆ.

ಎಚ್ ಡಿಎಎಫ್ ಸಿ ಗೃಹಸಾಲ ಬಡ್ಡಿದರ 30 ಲಕ್ಷ ರು ತನಕ ಶೇ 10.4 ರಷ್ಟಿದ್ದರೆ, 30 ಲಕ್ಷ ರು ಮೇಲ್ಪಟ್ಟ ಗೃಹಸಾಲಕ್ಕೆ ಶೇ 10.65 ಬಡ್ಡಿ ನೀಡಬೇಕಾಗುತ್ತದೆ. ಎಸ್ ಬಿಐ ನೂತನ ದರ ಪಟ್ಟಿ ಗುರುವಾರ(ನ.7) ದಿಂದ ಜಾರಿಗೆ ಬಂದಿದೆಯಾದರೆ. ಎಚ್ ಡಿಎಫ್ ಸಿ ದರ ಪಟ್ಟಿ ನ.15 ರನಕ ಬದಲಾವಣೆ ಕಾಣುವುದಿಲ್ಲ. ಸದ್ಯಕ್ಕೆ ಹಬ್ಬದ ಆಫರ್ ಇರುವುದರಿಂದ ಶೆ 10.25 ರ ಬಡ್ಡಿದರದಂತೆ ಸಾಲ ಪಡೆದುಕೊಳ್ಳಬಹುದಾಗಿದೆ.

ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಹಾದಿಯಲ್ಲೇ ದೇಶದ ಇತರೆ ಪ್ರಮುಖ ಸರ್ಕಾರಿ ಬ್ಯಾಂಕ್ ‌ಗಳೂ ಬಡ್ಡಿದರವನ್ನು ಹೆಚ್ಚಿಸುವ ನಿರೀಕ್ಷೆ ಇದ್ದು, ಗೃಹ, ಅಟೋ ಮತ್ತು ಗ್ರಾಹಕ ಸಾಲಗಳು ಇನ್ನು ಮೇಲೆ ದುಬಾರಿಯಾಗುವ ಸಾಧ್ಯತೆ ಇದೆ. ಆಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಸದ್ಯಕ್ಕೆ ಬಡ್ಡಿದರದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+