ಇದು ಬದಲಾದ ಜಗತ್ತು!ಒಂದು ಕಾಲ್‌ ಸಾಕು ಬಟಾಣಿ ಸಿಪ್ಪೆ ಸುಲಿಯೋದ್ರಿಂದ ಬಟ್ಟೆ ಇಸ್ತ್ರಿ ಮಾಡೋವರೆಗೂ ಹತ್ತೇ ನಿಮಿಷದಲ್ಲಿ ಸಿಗ್ತಾರೆ ಜ

ಪ್ರಪಂಚ ಈಗ ಸಂಪೂರ್ಣ ಬದಲಾಗಿದೆ. ಒಂದು ಹತ್ತು ವರ್ಷದ ಕೆಳಗೆ ನಾವು ಊಹಿಸಲೂ ಅಸಾಧ್ಯವಾಗಿದ್ದ ಬೆಳವಣಿಗೆಗಳು ಈಗ ಸಾಮಾನ್ಯವಾಗುತ್ತಿದೆ. ಅಷ್ಟೇ ಏಕೆ, ಬದುಕಿನ ಅನಿವಾರ್ಯತೆಗಳಲ್ಲಿ ಒಂದಾಗುತ್ತಿವೆ. ಆನ್‌ಲೈನ್‌ನಲ್ಲಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಬುಕ್‌ ಮಾಡೋದು ಈಗ ತೀರಾ ಸಾಮಾನ್ಯ. ಹತ್ತು ನಿಮಿಷಗಳಲ್ಲಿ ಆಂಬುಲೆನ್ಸ್‌ ಬರುತ್ತೋ ಇಲ್ವೋ, ಆದ್ರೆ, ಹತ್ತು ನಿಮಿಷಗಳಲ್ಲಿ ಗ್ರೋಸರಿ ಸಪ್ಲೈ ಮಾಡುವ‌ಗಳು ತೀರಾ ಜನಪ್ರಿಯವಾಗುತ್ತಿವೆ. ನಗರಗಳಲ್ಲಿ ಈ ಸೇವೆಗಳು ಜೀವನದ ಅಗತ್ಯತೆಗಳಲ್ಲಿ ಸೇರಿ ಹೋಗಿವೆ.

Hiring House Help Is More Easier Huge Demand For Micro Task Helpers In Cities Changing Lifestyle Today

ಈಗ ನಾವು ಹೇಳುತ್ತಿರುವುದು ಆನ್‌ಲೈನ್‌ ಸೇವೆಗಳು ಹೇಗೆ ಜನರ ಬದುಕನ್ನು ಸರಳಗೊಳಿಸುತ್ತಿವೆ ಅನ್ನುವುದರ ಬಗ್ಗೆ. ಮನೆಯಲ್ಲಿ ಬಟಾಣಿ ಸುಲಿಯುವುದರಿಂದ ಹಿಡಿದು, ಬಟ್ಟೆ ಒಗೆದು ಇಸ್ತ್ರಿ ಹಾಕುವಂತ ಸಣ್ಣ ಪುಟ್ಟ ಕೆಲಸಗಳಿಗೂ ಈಗ ಆನ್‌ಲೈನ್‌ನಲ್ಲಿ ಜನ ಸಿಗುತ್ತಾರೆ. ನೀವು ಕಾಫಿ ಮಾಡಿ, ಕುಡಿಯುವಷ್ಟರಲ್ಲಿ ನಿಮ್ಮ ಮನೆಯ ಸಣ್ಣಪುಟ್ಟ ಕೆಲಸ ಮುಗಿದು ನಿಮ್ಮ ಮನೆ ಮನಸ್ಸು ಎರಡೂ ಖುಷ್‌ ಆಗಿರುತ್ತೆ.

15 ನಿಮಿಷಗಳಲ್ಲಿ ಸಿಗ್ತಾರೆ instant House Help :

ನಿಮ್ಮ ಮನೆಯ ಬಾತ್‌ರೂಮ್‌ ಗಲೀಜಾಗಿರಬಹುದು. ಸಿಂಕ್‌ ತುಂಬಾ ಪಾತ್ರೆಗಳು ತೊಳೆಯಲು ಬಾಕಿ ಇರಬಹುದು. ಸೀಲಿಂಗ್‌ ಫ್ಯಾನ್‌ನಲ್ಲಿ ಕೊಳೆ ಸಿಕ್ಕಾಪಟ್ಟೆ ತುಂಬಿಕೊಂಡಿರಬಹುದು. ಅಷ್ಟೇ ಏಕೆ, ಮನೆಯ ಗಾರ್ಡನ್‌ನಲ್ಲಿ (garden) ಗಿಡಗಳಿಗೆ ನೀರುಣಿಸುವ ಕೆಲಸ ಬಾಕಿ ಇರಬಹುದು. ಬಟ್ಟೆ ಒಗೆದು ನೀಟಾಗಿ ಇಡೋದು ನಿಮಗೆ ಕಷ್ಟ ಆಗುತ್ತಿರುಬಹುದು. ಒಂದು ಆ್ಯಪ್ ಓಪನ್‌ ಮಾಡಿ, ಕಾಲ್‌ ಮಾಡಿದ್ರೆ, 15 ನಿಮಿಷಗಳಲ್ಲಿ ಈ ಕೆಲಸಗಳಲ್ಲಿ ಪರಿಣಿತ ವ್ಯಕ್ತಿಗಳೇ ಬಂದು ನಿಮ್ಮ ಮನೆಯ ಕಾಲಿಂಗ್‌ ಬೆಲ್‌ ಒತ್ತುತ್ತಿರುತ್ತಾರೆ. 15 ನಿಮಿಷದಿಂದ ಒಂದು ಗಂಟೆಯೊಳಗೆ ನಿಮ್ಮ ಎಲ್ಲಾ ಕೆಲಸಗಳು ಫಿನಿಶ್‌. ನೀವು ಮನೆಯಲ್ಲಿ ರಿಲ್ಯಾಕ್ಸ್‌ ಆಗಿ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುತ್ತಿರಬಹುದು.

Hiring House Help ಆ್ಯಪ್‌ನಲ್ಲೇ ಕೆಲಸ ಬುಕ್‌ ಅಲ್ಲೇ ಪೇಮೆಂಟ್‌ :

ಈ ಸೇವೆಯಲ್ಲೂ ಒಂದು ರೀತಿಯ ಶಿಸ್ತಿದೆ. ಈ ಸಣ್ಣಪುಟ್ಟ ಸೇವೆ ನೀಡುವ ಕಂಪನಿಗಳು, ಇದಕ್ಕಾಗಿ ಯಾರನ್ನೋ ಆವಲಂಬಿಸುವುದಿಲ್ಲ. ಆ ಕೆಲಸದಲ್ಲಿ ಪಳಗಿದ ವ್ಯಕ್ತಿಗಳನ್ನೇ ಅದಕ್ಕೆ ನೇಮಕ ಮಾಡುತ್ತಾರೆ. ಉದಾಹರಣೆಗೆ ಇಸ್ತ್ರಿ ಹಾಕುವ ಕೆಲಸಕ್ಕೆ ಪರಿಣಿತ ಇಸ್ತ್ರಿಯವರನ್ನೇ, ಕಳುಹಿಸುತ್ತಾರೆ. ಬಾತ್‌ ರೂಮ್‌ ಕ್ಲೀನ್‌ ಮಾಡೋಕೂ ಎಕ್ಸ್‌ಪರ್ಟ್‌ಗಳು ಸಿಕ್ತಾರೆ. ಪಾತ್ರೆ ತೊಳೆಯುವವರೂ ಕೂಡಾ ಪಕ್ಕಾ ಇರ್ತಾರೆ. ಇವ್ರು ಟಿಪ್ಸ್‌ ಅದೂ ಇದು ಕೇಳಲ್ಲ. ಆ್ಯಪ್‌ನಲ್ಲೇ ಕೆಲಸ ಬುಕ್‌ ಮಾಡಿ, ಆ್ಯಪ್‌ನಲ್ಲೇ ಪಾವತಿ ಮಾಡಿದ್ರೆ ಸಾಕು. ನಿಮ್ಮ ಕೆಲಸ ತುಂಬಾ ಅಚ್ಚುಕಟ್ಟಾಗಿ ಮುಗಿದಿರುತ್ತೆ. ಯಾವುದೇ ಟೆನ್ಶನ್‌ ಇರೋದಿಲ್ಲ

ಗಂಟೆಯೊಳಗೆ ಮುಗಿಯುವುದು ಎಲ್ಲಾ ಕೆಲಸ :

ದೆಹಲಿ, ಬೆಂಗಳೂರು (bengaluru) ಮುಂತಾದ ಮಹಾನಗರಗಳಲ್ಲಿ ಈ ಸೇವೆಗಳು ತುಂಬಾ ಜನಪ್ರಿಯವಾಗುತ್ತಿವೆ. ಸಣ್ಣಪುಟ್ಟ ಮನೆಕೆಲಸಗಳಿಗೆ ತಲೆ ಹಾಕಲೂ ಸಾಧ್ಯವಿಲ್ಲದಿರುವ ವ್ಯಸ್ತ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಈ ಸೇವೆ ತುಂಬಾ ಇಷ್ಟವಾಗಿದೆ. ಇದೇ ಸೇವೆ ನೀಡುವ ಹಲವು ಕಂಪನಿಗಳು ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮನೆಯ ಧೂಳು ತೆಗೆಯುವುದರಿಂದ ಹಿಡಿದು ಡೀಪ್‌ ಕ್ಲೀನಿಂಗ್‌ ತನಕ ಪರಿಣಿತ ವ್ಯಕ್ತಿಗಳೇ ಈ ಕೆಲಸಕ್ಕೆ ಸಿಗುತ್ತಾರೆ. ಫುಡ್‌ ಡೆಲಿವರಿ ಆ್ಯಪ್‌ಗಳು ನಿಮಗೆ ಫುಡ್‌ ತಂದು ಕೊಡುವಷ್ಟರಲ್ಲಿ, ಮನೆಯಲ್ಲಿ ಒಂದು ಹೊತ್ತು ಅಡುಗೆ ಮಾಡೋಕೆ ಅಡುಗೆಯವರು ಸಿಕ್ಕಿ ಬಿಡ್ತಾರೆ. ಹದಿನೈದು ನಿಮಿಷದಿಂದ ಒಂದು ಗಂಟೆಯೊಳಗೆ ನಿಮ್ಮ ಎಲ್ಲಾ ಕೆಲಸವೂ ಫಿನಿಶ್‌.

ಐದು ವರ್ಷಗಳ ಹಿಂದೆ ಇಂಥಹ ಕೆಲಸಗಳನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಸಣ್ಣಪುಟ್ಟ ಕೆಲಸಗಳನ್ನೂ ಎಲ್ಲಾ ಜಂಜಾಟಗಳ ಮಧ್ಯೆ ನಾವೇ ಮುಗಿಸಬೇಕಿತ್ತು. ಈಗ ಕೈಯಲ್ಲಿ ದುಡ್ಡು ಇದ್ದು, ತಂತ್ರಜಾನ ಗೊತ್ತಿದ್ದರೆ ಸಾಕು. ಬೆರಳ ತುದಿಯಲ್ಲೇ ಎಲ್ಲಾ ಕೆಲಸಗಳೂ ಮುಗಿದಿರುತ್ತವೆ. ಎಲ್ಲದಕ್ಕೂ ಆನ್‌ಲೈನ್‌ನಲ್ಲಿ ಜನ ಸಿಗುತ್ತಾರೆ. ನಮ್ಮ, ನಿಮ್ಮ ಲೈಫ್‌ ತುಂಬಾ ಸರಳವಾಗುತ್ತಿವೆ. ಮತ್ತು ಜಗತ್ತು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಬದಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+