ಪೆಟ್ರೋಲ್ ದರ ಏರಿಕೆ ತಡೆದ ಬಿಹಾರ ಚುನಾವಣೆ

ನವದೆಹಲಿ. ಸೆಪ್ಟೆಂಬರ್. 18: ಬಿಹಾರ ವಿಧಾನ ಸಭಾ ಚುನಾವಣೆ ಮುಗಿಯುವವರೆಗೆ ಗ್ರಾಹಕರು ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ತಲೆ ಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಪ್ರತಿ 15 ದಿನಗಳಿಗೊಮ್ಮೆ ಸರ್ಕಾರ ಇಂಧನ ದರದಲ್ಲಿ ಪರಿಷ್ಕರಣೆ ಮಾಡುತ್ತಿತ್ತು. ಆದರೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯನ್ನು ಮುಂದಕ್ಕೆ ಹಾಕಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾದ್ದರಿಂದ ಪೆಟ್ರೋಲ್‌ ದರವನ್ನು ಲೀಟರ್‌ಗೆ 1 ರು ಮತ್ತು ಡೀಸೆಲ್ ನ್ನು 2.28 ರು. ಏರಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ತನ್ನ ಹೆಜ್ಜೆಯನ್ನು ಹಿಂದಕ್ಕೆ ಇಟ್ಟಿದೆ.[ಆಗಸ್ಟ್ ಅಂತ್ಯಕ್ಕೆ ಬಂಪರ್ : ಪೆಟ್ರೋಲ್ 2 ರು. ಕಡಿಮೆ]

petrol

ದರ ಏರಿಕೆಗೆ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಧಾರವನ್ನು ದಿಢಿರ್ ಎಂದು ಹಿಂದಕ್ಕೆ ಪಡೆಯಲಾಗಿದೆ.

ಬೆಂಗಳೂರಲ್ಲಿ ಎಷ್ಟಿದೆ?
ಬೆಂಗಳೂರಿಗರು ಪೆಟ್ರೋಲ್ ಗೆ 65 ರು., ಡೀಸೆಲ್ ಗೆ 47.32ರು. ನೀಡಿದರೆ ಸಾಕು. ಕಳೆದ ಸೆಪ್ಟೆಂಬರ್ 1 ರಂದು ಪ್ರತಿ ಲೀಟರ್ ಪೆಟ್ರೋಲ್ ದರ 2 ರೂಪಾಯಿ ಇಳಿಕೆ ಮಾಡಲಾಗಿತ್ತು. ಡೀಸೆಲ್ ದರವನ್ನು 50 ಪೈಸೆ ಕಡಿಮೆ ಮಾಡಲಾಗಿತ್ತು.

ಜಾರ್ಖಂಡ್ ನಲ್ಲಿ ದುಬಾರಿ
ಜಾರ್ಖಂಡ್ ರಾಜ್ಯ ಸರ್ಕಾರ ಏಕಾಏಕಿ ಇಂಧನ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದರಿಂದ ಪೆಟ್ರೋಲ್ ಲೀಟರ್ ಗೆ 4.54 ಮತ್ತು ಡೀಸೆಲ್ 4.21 ರು. ಹೆಚ್ಚಳವಾಗಿದೆ. ಸಚಿವರಿಗೆ ಓಡಾಡಲು ಐಷಾರಾಮಿ ಕಾರುಗಳನ್ನು ಕೊಳ್ಳಲು ನಿಮ್ಮ ಬಳಿ ಹಣವಿರುತ್ತದೆ, ಆದರೆ ಬೊಕ್ಕಸ ಖಾಲಿ ಎಂದು ನಾಗರಿಕರ ಮೇಲೆ ಯಾಕೆ ತೆರಿಗೆ ಹೆಚ್ಚಳ ಮಾಡುತ್ತೀರಿ ಎಂದು ವಿರೋಧ ಪಕ್ಷಗಳು ಜಾರ್ಖಂಡ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+