ಪಿಯುಸಿ ಫೇಲ್ ಆಗಿದ್ದ ವ್ಯಕ್ತಿ ಈಗ 97,476 ಕೋಟಿ ಗಳಿಸಿ ಹೈದರಾಬಾದ್‌ನಲ್ಲೇ ದೊಡ್ಡ ಶ್ರೀಮಂತ!
ಬೆಂಗಳೂರು, ಆಗಸ್ಟ್ 2: ಸೋತು ಗೆದ್ದವರಿಗೆ ಈ ಸಮಾಜದಲ್ಲಿ ಬೆಲೆ ಹೆಚ್ಚು. ಅವರ ಜೀವನ ಒಂದು ಪಾಠದಂತೆ ಇರುತ್ತದೆ. ಏನೂ ಇಲ್ಲದೆ ಮುಂದೆ ಬಂದವರು ಅನೇಕ. ಹಾಗೆಯೇ ಓದಿದ ಮಾತ್ರಕ್ಕೆ ಇಲ್ಲಿ ಯಶಸ್ಸು ಸಾಧ್ಯವಾಗುವುದಿಲ್ಲ ಎಂಬುದು ಕಟ್ಟಿಟ್ಟ ಬುತ್ತಿ. ವ್ಯವಹಾರದಲ್ಲಿ ಅದು ಕಂಪ್ಲೀಟ್ ನೂರಕ್ಕೆ ನೂರು ಸತ್ಯ.
ದಿವಿಸ್ ಲ್ಯಾಬ್ಸ್ ಸಂಸ್ಥಾಪಕ ಮುರಳಿ ದಿವಿ ಹೈದರಾಬಾದ್‌ನ ಅತ್ಯಂತ ಶ್ರೀಮಂತ ವ್ಯಕ್ತಿ. ಅಲ್ಲದೆ ಅವರು ವಿಶ್ವದ ಶ್ರೀಮಂತ ವಿಜ್ಞಾನಿಗಳಲ್ಲಿ ಒಬ್ಬರು. ಫೋರ್ಬ್ಸ್ ಪ್ರಕಾರ ಮುರಳಿ ದಿವಿ ಅವರ ನಿವ್ವಳ ಮೌಲ್ಯವು ಸುಮಾರು 53,000 ಕೋಟಿ ರೂ (USD 6.4 ಬಿಲಿಯನ್) ಆಗಿದೆ.

ಔಷಧೀಯ ಪದಾರ್ಥಗಳ (API) ಪ್ರಮುಖ ಮೂರು ತಯಾರಕರಲ್ಲಿ ಒಂದಾಗಿರುವ ದಿವಿಸ್ ಲ್ಯಾಬ್ಸ್‌ನ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 97,476 ಕೋಟಿ ರೂಪಾಯಿ ಆಗಿದೆ. ಮುರಳಿ ದಿವಿ ಆಂಧ್ರಪ್ರದೇಶದ ಸಣ್ಣ ಪಟ್ಟಣದಿಂದ ಬಂದವರು. ಅವರ ತಂದೆ ಸರ್ಕಾರಿ ಉದ್ಯೋಗಿ. ಮುರಳಿ ದಿವಿ ಅವರ ತಂದೆ ಮಾಸಿಕ 10,000 ರೂಪಾಯಿಗಳ ಪಿಂಚಣಿಯಲ್ಲಿ ತನ್ನ ಕುಟುಂಬವನ್ನು ನಡೆಸುತ್ತಿದ್ದರು.
ಮುರಳಿ ದಿವಿ ತನ್ನ 12ನೇ ತರಗತಿ ಪರೀಕ್ಷೆಯಲ್ಲಿ ಎರಡು ಬಾರಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಭರವಸೆ ಕಳೆದುಕೊಳ್ಳಲಿಲ್ಲ. ಅವರ ಭವಿಷ್ಯವನ್ನು ನಿರ್ಮಿಸಲು ಶ್ರಮಿಸಿದರು. 1976ರಲ್ಲಿ ಮುರಳಿ ದಿವಿ ಅವರು ಕೇವಲ 25 ವರ್ಷದವರಾಗಿದ್ದಾಗ ಅಮೆರಿಕಾಕ್ಕೆ ಹೋಗಿ ಔಷಧಿಕಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಮುರಳಿ ದಿವಿ ಅಮೆರಿಕಕ್ಕೆ ತೆರಳಿದಾಗ ಅವರ ಕೈಯಲ್ಲಿ ಕೇವಲ 500 ರೂಪಾಯಿ ಇತ್ತು ಎಂದು ಫೋರ್ಬ್ಸ್ ಇಂಡಿಯಾ ವರದಿ ಮಾಡಿದೆ.
ಅಮೆರಿಕಾದ ಟ್ರಿನಿಟಿ ಕೆಮಿಕಲ್ ಮತ್ತು ಫೈಕ್ ಕೆಮಿಕಲ್ಸ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದರು. ಅಲ್ಲಿ ವರ್ಷಕ್ಕೆ 65,000 ಡಾಲರ್ ಸಂಪಾದಿಸುತ್ತಿದ್ದರು. ಕೆಲವು ವರ್ಷಗಳ ಕೆಲಸ ಮಾಡಿದ ನಂತರ ಮುರಳಿ ದಿವಿ ತನ್ನ ಕೈಯಲ್ಲಿ USD 40,000 ನೊಂದಿಗೆ ಭಾರತಕ್ಕೆ ಮರಳಲು ನಿರ್ಧರಿಸಿದರು. ಆದರೆ ಮುರಳಿ ದಿವಿ ಅವರಿಗೆ ಭವಿಷ್ಯದ ಯೋಜನೆಗಳಿರಲಿಲ್ಲ. 1984 ರಲ್ಲಿ ಮುರಳಿ ದಿವಿ ಕಲ್ಲಮ್ ಅಂಜಿ ರೆಡ್ಡಿ ಅವರೊಂದಿಗೆ ಕೆಮಿನರ್ ನಿರ್ಮಿಸಲು ಕೈಜೋಡಿಸಿದರು. ಇದನ್ನು 2000 ರಲ್ಲಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್‌ನೊಂದಿಗೆ ವಿಲೀನಗೊಳಿಸಲಾಯಿತು.
ಮುರಳಿ ದಿವಿ ಅವರು 1990ರಲ್ಲಿ ಡಿವಿಸ್ ಲ್ಯಾಬೋರೇಟರೀಸ್ ಅನ್ನು ಪ್ರಾರಂಭಿಸಲು ನಿರ್ಧರಿಸುವ ಮೊದಲು 6 ವರ್ಷಗಳ ಕಾಲ ಡಾ ರೆಡ್ಡೀಸ್ ಲ್ಯಾಬ್ಸ್‌ನಲ್ಲಿ ಕೆಲಸ ಮಾಡಿದರು. ಆರಂಭದಲ್ಲಿ ಡಿವಿಸ್ ಲ್ಯಾಬ್ಸ್ API ಗಳು ಮತ್ತು ಮಧ್ಯವರ್ತಿಗಳ ತಯಾರಿಕೆಗಾಗಿ ವಾಣಿಜ್ಯ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವ ವ್ಯವಹಾರವನ್ನು ಪ್ರವೇಶಿಸಿತು.
1995 ರಲ್ಲಿ ಮುರಳಿ ದಿವಿ ತನ್ನ ಮೊದಲ ಉತ್ಪಾದನಾ ಘಟಕವನ್ನು ತೆಲಂಗಾಣದ ಚೌಟುಪ್ಪಲ್‌ನಲ್ಲಿ ಸ್ಥಾಪಿಸಲಾಯಿತು. 2002ರಲ್ಲಿ ಅವರು ವಿಶಾಖಪಟ್ಟಣಂ ಬಳಿ ಕಂಪನಿಯ ಎರಡನೇ ಉತ್ಪಾದನಾ ಸೌಲಭ್ಯವನ್ನು ಪ್ರಾರಂಭಿಸಿದರು. ಹೈದರಾಬಾದ್ ಮೂಲದ ಡಿವಿಸ್ ಲ್ಯಾಬೊರೇಟರೀಸ್ ಮಾರ್ಚ್ 2022 ರಲ್ಲಿ 88 ಬಿಲಿಯನ್ ಆದಾಯ ಗಳಿಸಿತು. ಅಲ್ಲಿಂದ ಅವರು ಬೆಳವಣಿಗೆಯಲ್ಲಿ ವೃದ್ಧಿ ಕಾಣುತ್ತಾ ಬಂದರು.
ಅಂದ ಹಾಗೆ ಮುರಳಿ ದಿವಿ ಅವರು MIT, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಮುರಳಿ ದಿವಿ ಅವರು ಫಾರ್ಮಾಸ್ಯುಟಿಕಲ್ ಸೈನ್ಸಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಫಾರ್ಮಸಿ ಕೋರ್ಸ್ ಮುಗಿಸಿದ್ದಾರೆ.












Click it and Unblock the Notifications