ಈ ಬ್ಯಾಂಕ್‌ನಲ್ಲಿ ಖಾತೆ ಇದ್ದರೆ ₹50,000 Minimum Balance ಇರಬೇಕು!, ಯಾರಿಗೆ ಅನ್ವಯ ಇಲ್ಲಿದೆ ಮಾಹಿತಿ!
₹50,000 Minimum Balance: ಬ್ಯಾಂಕ್ ಗ್ರಾಹಕರಿಗೆ ಹೊಸದೊಂದು ಶಾಕ್ ಎದುರಾಗಿದೆ. ಕನಿಷ್ಠ ಸರಾಸರಿ / Minimum Balance ಹೆಚ್ಚಳ ಮಾಡಿದ್ದು ಸಾಮಾನ್ಯ ಜನರಿಗೆ ಹೊಸ ತಲೆನೋವಾಗಿ ಬದಲಾಗಿದೆ. ವಿವಿಧ ಬ್ಯಾಂಕ್‌ಗಳು ಈಗಾಗಲೇ ಸರಾಸರಿ ಬ್ಯಾಲೆನ್ಸ್ ಮೊತ್ತವನ್ನು ಹೆಚ್ಚಳ ಮಾಡಿ ಶಾಕ್ ನೀಡಿದೆ. ಇದೀಗ ಪ್ರಮುಖ ಬ್ಯಾಂಕ್‌ವೊಂದು ಬ್ಯಾಂಕ್ ಗ್ರಹಕರಿಗೆ ಭಾರೀ ದೊಡ್ಡ ಶಾಕ್ ನೀಡಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಐಸಿಐಸಿಐ ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗೆ ದೊಡ್ಡದೊಂದು ಶಾಕ್ ನೀಡಿದೆ. ಬ್ಯಾಂಕ್‌ನ ಗ್ರಾಹಕರು ಇನ್ಮುಂದೆ ಅವರ ಖಾತೆಯಲ್ಲಿ 50,000 ಸಾವಿರ ರೂಪಾಯಿಯನ್ನು ಇರಿಸಬೇಕು ಇಲ್ಲವಾದರೆ ಅವರು ಶುಲ್ಕ ಪಾವತಿ ಮಾಡಬೇಕಾಗುತ್ತದೆ. 2025ನೇ ಸಾಲಿನ ಆಗಸ್ಟ್ 1ರಿಂದಲೇ ಈ ನಿಯಮ ಜಾರಿಯಾಗಿದ್ದು. ಗ್ರಾಹಕರಿಗೆ ಈ ವಿಚಾರವು ಭಾರೀ ಶಾಕ್ ನೀಡಿದೆ. ಸಾಮಾನ್ಯ ಜನರು ಹಾಗೂ ಬಡವರು ಇಷ್ಟುದೊಡ್ಡ ಮೊತ್ತವನ್ನು ಸೇವಿಂಗ್ಸ್ ಅಂತಾ ಇರಿಸಲು ಸಾಧ್ಯವೇ ಎಂದು ಗ್ರಾಹಕರು ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಬ್ಯಾಂಕ್‌ನಿಂದ ನೀಡಲಾಗಿರುವ ಶಾಕ್ ಏನು ಎಂದು ವಿವರವಾಗಿ ನೋಡೋಣ.

ಸೇವಿಂಗ್ಸ್ ಅಕೌಂಟ್ / ಉಳಿತಾಯ ಖಾತೆಗೆ ಕನಿಷ್ಠ ₹50,000 ಬ್ಯಾಲೆನ್ಸ್ ಇರಿಸುವುದು ಕಡ್ಡಾಯ ಎಂದು ಹೊಸ ಪ್ರಕಟಣೆಯೊಂದನ್ನು ಐಸಿಐಸಿ ಬ್ಯಾಂಕ್ ಕೊಟ್ಟಿದೆ. ಖಾಸಗಿ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಐಸಿಐಸಿಐ ಬ್ಯಾಂಕ್ ಒಂದಾಗಿದೆ. ಇದೀಗ ತನ್ನ ಎಲ್ಲಾ ಶಾಖೆಗಳ ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಉಳಿತಾಯ ಮೊತ್ತವನ್ನು ಭರ್ಜರಿ ಹೆಚ್ಚಳ ಮಾಡಿದೆ. ಈ ಹೊಸ ನಿಯಮವು ಆಗಸ್ಟ್ ಒಂದರಿಂದಲೇ ಜಾರಿಗೆ ಬರಲಿದೆ.
ಮೆಟ್ರೋ ಹಾಗೂ ನಗರ ಪ್ರದೇಶಗಳ ಗ್ರಾಹಕರಿಗೆ ಕನಿಷ್ಠ ಸರಾಸರಿ ಉಳಿತಾಯ ಮೊತ್ತವನ್ನು ಈಗ 10,000 ರೂಪಾಯಿ ಇದೆ. ಇದನ್ನು ಬರೋಬ್ಬರಿ 50,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅರೆ-ನಗರ ಪ್ರದೇಶಗಳಲ್ಲಿ ಈ ಮೊತ್ತವನ್ನು ಈಗಿನ 5,000 ರೂಪಾಯಿಯಿಂದ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇನ್ಮುಂದೆ 25,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಶಾಖೆಗಳಲ್ಲಿ ಈ ಮೊತ್ತವನ್ನು ಈಗ ಇರುವ 2,500 ರೂಪಾಯಿಯಿಂದ 10,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಇನ್ನು ಈ ಬದಲಾವಣೆಯು ಆಗಸ್ಟ್ 1, 2025ರ ನಂತರ ಹೊಸದಾಗಿ ಖಾತೆ ತೆರೆಯುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಬ್ಯಾಂಕ್ ಖಾತೆ ತೆರೆದಿರುವ ಗ್ರಾಹಕರಿಗೆ ಹಾಗೂ ಸಂಬಳದ ಖಾತೆಗಳಿಗೆ (Salary A/cs) ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.
ಕನಿಷ್ಠ ಉಳಿತಾಯ ಮೊತ್ತದಲ್ಲಿ ಮಾಡಿರುವ ಹೊಸ ಬದಲಾವಣೆಯು ಕಡಿಮೆ ಸಂಬಳ ಅಥವಾ ಆರ್ಥಿಕವಾಗಿ ಶಕ್ತರಲ್ಲದವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಇರುವ ಈ ಬ್ಯಾಂಕ್‌ನ ಗ್ರಾಹಕರ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಒಂದೊಮ್ಮೆ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿ ಹಣ ಇಲ್ಲದೆ ಇದ್ದರೆ ಅಥವಾ ಕನಿಷ್ಠ ಮೊತ್ತ ಇಲ್ಲದೆ ಇದ್ದರೆ, ಅವರು ದುಬಾರಿ ದಂಡ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಕೆಲವು ಬಳಕೆದಾರರು ಬ್ಯಾಂಕ್ ಖಾತೆ ಮುಚ್ಚುವ ಸಾಧ್ಯತೆಯೂ ಇದೆ.












Click it and Unblock the Notifications