ಚುನಾವಣೆ ಸಂದರ್ಭದಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿದಾರರಿಗೆ ಸುದ್ದಿ
ನವದೆಹಲಿ, ಮಾರ್ಚ್ 20: ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೇಡಿಕೆಗೆ ಮೋದಿ ಸರ್ಕಾರ ಅಸ್ತು ಎಂದಿದ್ದು, ಹೊಸ ಅಪಾರ್ಟ್ವೆುಂಟ್ಗಳು ಏಪ್ರಿಲ್ 01 ರಿಂದ ಪರಿಷ್ಕೃತ ಜಿಎಸ್ಟಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಂದಾಯ ಕಾರ್ಯದರ್ಶಿ ಎ.ಬಿ.ಪಾಂಡೆ ತಿಳಿಸಿದ್ದಾರೆ.
33ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಮನೆಗಳ ಖರೀದಿ ಮೇಲೆ ಶೇ 5 ರಷ್ಟು ಜಿಎಸ್ಟಿ ಕಡಿತ ಮಾಡುವ ನಿರ್ಧಾರ ಪ್ರಕಟಿಸಲಾಗಿದೆ. ಹೀಗಾಗಿ, ಫ್ಲಾಟ್ ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.
ಮಂಗಳವಾರದಂದು ನಡೆದ ರಿಯಲ್ ಎಸ್ಟೇಟ್ ವಲಯದ ಪರಿಷ್ಕೃತ ತೆರಿಗೆ ಜಾರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 34ನೇ ಸಭೆಯ ನಂತರ ಮಾತನಾಡಿದ ಕಂದಾಯ ಕಾರ್ಯದರ್ಶಿ ಎ.ಬಿ.ಪಾಂಡೆ, ಬಿಲ್ಡರ್ ಗಳು ಎರಡು ಹಂತದಲ್ಲಿ ತೆರಿಗೆ ದರ ಕಟ್ಟಬಹುದು, ಮಾರ್ಚ್ 31ರೊಳಗೆ ನಿರ್ಮಾಣ ಹಂತದ ಕಟ್ಟಡಕ್ಕೆ ಶೇ12ರಂತೆ ಜಿಎಸ್ಟಿ ಬಳಸಬಹುದು ಅಥವಾ ಏಪ್ರಿಲ್ 01ರಿಂದ ಶೇ 5ರಂತೆ ದರ ವಿಧಿಸಬಹುದು ಎಂದರು.

45 ಲಕ್ಷ ರು ಕಡಿಮೆ ದರದ ವಸತಿ ನಿವೇಶನಗಳನ್ನು ಕೈಗೆಟಕುವ ವಸತಿ ಎಂದು ಪರಿಗಣಿಸಿ ಶೇ 1ರಷ್ಟು ಜಿ ಎಸ್ಟಿ ಹಾಕಲಾಗಿದೆ. ಈ ಮುಂಚೆ ಶೇ 8ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, 45 ಲಕ್ಷ ರು ಮಿತಿಯ ನಿರ್ಮಾಣ ಹಂತದ ಕಟ್ಟಡವಾದರೆ ಶೇ 5ರಷ್ಟು ಜಿಎಸ್ಟಿ ಕಟ್ಟಬೇಕಾಗುತ್ತದೆ
ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ. ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ.












Click it and Unblock the Notifications