ಜಿಎಸ್ಟಿ 'ಕ್ರಾಂತಿಕಾರಿ ಮೈಲಿಗಲ್ಲು' ಎಂದು ಕರೆದ ಐಎಂಎಫ್

ನವದೆಹಲಿ, ಆಗಸ್ಟ್ 08: ಸರಕು ಸೇವಾ ತೆರಿಗೆ(ಜಿಎಸ್ಟಿ) ಒಂದು ಕ್ರಾಂತಿಕಾರಿ ಮೈಲಿಗಲ್ಲು ಎಂದು ನರೇಂದ್ರ ಮೋದಿ ಸರ್ಕಾರದ ತೆರಿಗೆ ಯೋಜನೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೊಗಳಿದೆ.

ಕಳೆದ ವರ್ಷ ಜುಲೈ 1 ದೇಶದೆಲ್ಲೆಡೆ ಜಾರಿಗೆ ಬಂದ ಏಕರೂಪ ತೆರಿಗೆ ವಿಧಾನ ಜಿಎಸ್ಟಿ ಇನ್ನಷ್ಟು ಸರಳ ಹಾಗೂ ಕಡಿಮೆ ಸ್ತರದ ತೆರಿಗೆ ವಿಭಾಗಗಳನ್ನು ಹೊಂದಿದ್ದರೆ ಆಡಳಿತ, ಅನುಷ್ಠಾನ ಸುಗಮವಾಗಲಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಜಿಸ್​ಟಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ, ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

GST ‘milestone reform’ but India should consider simpler rate structure: IMF

ಹತ್ತಾರು ತೆರಿಗೆಗಳಿಂದ ಜನ ಸಾಮಾನ್ಯರಿಗೆ ಹೊರೆಯಾಗಿತ್ತು. ಜಿಎಸ್​ಟಿಯಿಂದಾಗಿ ಸರಳಗೊಂಡಿದೆ.ಭಾರತದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಐಎಂಎಫ್ ತನ್ನ ವರದಿಯಲ್ಲಿ ಹೇಳಿದೆ.

ಜಿಎಸ್ಟಿಯಲ್ಲಿ ಸದ್ಯ ಶೇ05ರ ತನಕ, ಶೇ 12, ಶೇ 18 ಹಾಗೂ ಶೇ 28ರ ಸ್ತರದ ತೆರಿಗೆ ವಿಭಾಗಗಳಿವೆ. ಇದನ್ನು ಮೂರು ಸ್ತರಕ್ಕೆ ತರಲು ಯತ್ನಿಸಲಾಗುತ್ತಿದೆ. ಶೇ 12 ಹಾಗೂ ಶೇ 18ರನ್ನು ಒಗ್ಗೂಡಿಸಿ, ಶೇ 15ರ ಸ್ತರ ಉಳಿಸಿಕೊಳ್ಳುವ ಸಾಧ್ಯತೆಯಿದೆ.

115ಕ್ಕೂ ಅಧಿಕ ದೇಶಗಳಲ್ಲಿ ವ್ಯಾಟ್ ಜಾರಿಯಲ್ಲಿದ್ದು, 49 ದೇಶಗಳಲ್ಲಿ ಏಕರೂಪ ಏಕ ಸ್ತರದ ತೆರಿಗೆ ಇದೆ. ಇನ್ನು 28ರಲ್ಲಿ ಎರಡು ಸ್ತರದಲ್ಲಿ ತೆರಿಗೆ ಇವೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+