GST collections in October : ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ 16.6 ಏರಿಕೆ

ನವದೆಹಲಿ, ನ. 01: ಅಕ್ಟೋಬರ್ 2022ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,51,718 ಕೋಟಿಗಳಷ್ಟು ಸಂಗ್ರಹವಾಗಿದೆ. ಅಂದರೆ, ಕಳೆದ ತಿಂಗಳು ಶೇಕಡಾ 16.6 ರಷ್ಟು ಹೆಚ್ಚಳವಾಗಿದೆ.

ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹವು ಏಪ್ರಿಲ್ 2022 ರ ಹೆಚ್ಚಿನ ಜಿಎಸ್‌ಟಿ ಸಂಗ್ರಹದ ಬಳಿಕೆ ಇದುವರೆಗಿನ ಎರಡನೇ ಅತಿ ಗರಿಷ್ಠ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.

ಹಬ್ಬದ ಮಾರಾಟ ಮತ್ತು ಉತ್ತಮ ತೆರಿಗೆ ಆಡಳಿತದಿಂದ ಈ ವರ್ಷ ಅಕ್ಟೋಬರ್​ನಲ್ಲಿ 1,51,718 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್​ಟಿ 26,039 ಕೋಟಿ ರೂ. ಹಾಗೂ ರಾಜ್ಯ ಜಿಎಸ್​ಟಿ 33,396 ಕೋಟಿ ರೂಪಾಯಿಯಾಗಿದೆ.

GST collections in October cross 1.5 lakh crore

ಜುಲೈ 2017 ರಲ್ಲಿ ಹೊಸ ಪರೋಕ್ಷ ತೆರಿಗೆ ಪದ್ಧತಿಯನ್ನು ಪ್ರಾರಂಭಿಸಿದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ 1,67,540 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅದಾದ ಬಳಿಕ ಕಳೆದ ತಿಂಗಳಿನಲ್ಲಿ 1,51,718 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಧಿಕೃತ ಡೇಟಾ ತಿಳಿಸಿದೆ.

ಅಕ್ಟೋಬರ್ 2022 ರ ಜಿಎಸ್‌ಟಿ ಸಂಗ್ರಹದ ಕುರಿತು ಪ್ರತಿಕ್ರಿಯಿಸುತ್ತಾ, ಹಣಕಾಸು ಸಚಿವಾಲಯ, "ಸತತ ಎಂಟು ತಿಂಗಳಿನಿಂದ, ಮಾಸಿಕ ಜಿಎಸ್‌ಟಿ ಆದಾಯವು 1.4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಸೆಪ್ಟೆಂಬರ್ 2022 ರಲ್ಲಿ, 8.3 ಕೋಟಿ ಇ-ವೇ ಬಿಲ್‌ಗಳನ್ನು ಜನರೆಟ್ ಮಾಡಲಾಗಿದೆ. ಇದು ಆಗಸ್ಟ್ 2022 ರಲ್ಲಿ ಜನರೆಟ್ ಮಾಡಲಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಕ್ಟೋಬರ್‌ನಲ್ಲಿ ಸಂಗ್ರಹವಾಗಿರುವ ಮೊತ್ತವು ಸೆಪ್ಟೆಂಬರ್‌ನಲ್ಲಿ ಕೈಗೊಂಡ ವ್ಯಾಪಾರ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ" ಎಂದಿದೆ.

GST collections in October cross 1.5 lakh crore

ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿ ಹೆಚ್ಚಿನ ಪ್ರಮುಖ ರಾಜ್ಯಗಳು ಜಿಎಸ್‌ಟಿ ಸಂಗ್ರಹಗಳಲ್ಲಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಛತ್ತೀಸ್‌ಗಢ ಮತ್ತು ಬಿಹಾರಗಳಲ್ಲಿ ಆದಾಯವು ಸ್ವಲ್ಪ ಕುಸಿತವನ್ನು ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+