ದಾಖಲೆ ಮುರಿದ ಜಿಎಸ್‌ಟಿ ಸಂಗ್ರಹ: ಒಂದು ತಿಂಗಳಲ್ಲಿ 1.68 ಲಕ್ಷ ಕೋಟಿ ಆದಾಯ

ನವದೆಹಲಿ, ಮೇ 1: ದೇಶದಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಸಂಗ್ರಹವು ದಾಖಲೆಯನ್ನು ಮುರಿದಿದೆ. ಸುಧಾರಿತ ಕ್ರಮದ ಅನುಸರಣೆಯಿಂದಾಗಿ ಏಪ್ರಿಲ್‌ನಲ್ಲಿ ಜಿಎಸ್‌ಟಿ ಆದಾಯವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 20 ಪ್ರತಿಶತದಷ್ಟು ಏರಿಕೆ ಕಂಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಸುಮಾರು 1.68 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಈ ಮೂಲಕ ಜಿಎಸ್‌ಟಿ ಸಂಗ್ರಹವು ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಏಪ್ರಿಲ್ 2022 ರಲ್ಲಿ, ಜಿಎಸ್‌ಟಿಆರ್‌-3ಬಿನಲ್ಲಿ 1.06 ಕೋಟಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲಾಗಿದೆ.

ಏಪ್ರಿಲ್ 2022 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠವಾಗಿದೆ ಮತ್ತು ಮಾರ್ಚ್‌ನಲ್ಲಿ ದಾಖಲಾದ 1.42 ಲಕ್ಷ ಕೋಟಿ ರೂಪಾಯಿಗಳ ಹಿಂದಿನ ಅತ್ಯಧಿಕ ಸಂಗ್ರಹಕ್ಕಿಂತ 25,000 ಕೋಟಿ ರೂ. ಹೆಚ್ಚು ಆಧಾಯ ಸಂಗ್ರಹವಾಗಿದೆ.

 GST collection hit all-time high in April

ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಎಷ್ಟು?

ಏಪ್ರಿಲ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,67,540 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ ರೂ.33,159 ಕೋಟಿ, ಎಸ್‌ಜಿಎಸ್‌ಟಿ ರೂ.41,793 ಕೋಟಿ, ಐಜಿಎಸ್‌ಟಿ ರೂ.81,939 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ.36,705 ಕೋಟಿ ಸೇರಿದಂತೆ) ಮತ್ತು ಸೆಸ್ ರೂ.69 ಕೋಟಿ. ಸಂಗ್ರಹವಾಗಿದೆ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 857 ಕೋಟಿ ರೂ. ಸೇರಿದಂತೆ) ಸಚಿವಾಲಯ ಹೇಳಿದೆ.

ತಿಂಗಳಿನಲ್ಲಿ, ಸರಕುಗಳ ಆಮದು ಆದಾಯವು ಶೇಕಡ 30 ಹೆಚ್ಚಾಗಿದೆ. ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 17% ಹೆಚ್ಚಾಗಿದೆ.

"ಮಾರ್ಚ್ 2022ರಲ್ಲಿ ಸೃಷ್ಟಿಸಿದ ಒಟ್ಟು ಇ-ವೇ ಬಿಲ್‌ಗಳು 7.7 ಕೋಟಿ ರೂ ಇದ್ದು, 2022ರ ಫೆಬ್ರವರಿ ತಿಂಗಳಲ್ಲಿ ಸೃಷ್ಟಿಯಾದ 6.8 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇ 13ರಷ್ಟು ಅಧಿಕವಾಗಿದೆ. ಇದು ಉದ್ಯಮ ಚಟುವಟಿಕೆಗಳು ತ್ವರಿತ ವೇಗದಲ್ಲಿ ಚೇತರಿಕೆ ಕಾಣುತ್ತಿರುವುದನ್ನು ಪ್ರತಿಫಲಿಸುತ್ತದೆ," ಎಂದು ಹೇಳಿಕೆ ನೀಡಿದೆ. "ಕಳೆದ ವರ್ಷ ಇದೇ (ಏಪ್ರಿಲ್) ತಿಂಗಳಿಗೆ ಹೋಲಿಕೆ ಮಾಡಿದರೆ, ಈ ತಿಂಗಳಲ್ಲಿ ಆಮದು ಸರಕುಗಳಿಂದ ಬರುವ ಆದಾಯವು ಶೇ 30ರಷ್ಟು ಅಧಿಕ ಮತ್ತು ಆಂತರಿಕ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಬಂದ ಆದಾಯವು ಶೇ 17ರಷ್ಟು ಹೆಚ್ಚಿದೆ," ಎಂದು ಹಣಕಾಸು ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+