ಡಿಸೆಂಬರ್ ಅಂತ್ಯಕ್ಕೆ ಸರಕು ಸೇವಾ ತೆರಿಗೆ(ಜಿಎಸ್ಟಿ) ಗಳಿಕೆ ಕುಸಿತ
ನವದೆಹಲಿ, ಜನವರಿ 02 : ಡಿಸೆಂಬರ್ 2018ರಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹ 94,726 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಕಳೆದ ತಿಂಗಳು 97,637 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.
ಡಿಸೆಂಬರ್ 30ರವರೆಗೆ ದಾಖಲಾಗಿರುವ ಸೇಲ್ಸ್ ರಿಟರ್ನ್ಸ್ ಅಥವಾ ಜಿಎಸ್‌ಟಿಆರ್ - 3ಬಿಗಳ ಸಂಖ್ಯೆ 72.44 ಲಕ್ಷಗಳಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಗಳಿಗೆ 11,922 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. 94,726 ಕೋಟಿ ರು ಸಂಗ್ರಹದಲ್ಲಿ ಕೇಂದ್ರದ ಜಿಎಸ್ಟಿ ಸಂಗ್ರಹ 16,442 ಕೋಟಿ ರುನಷ್ಟಿದ್ದರೆ, ರಾಜ್ಯದ ಜಿಎಸ್ಟಿ ಸಂಗ್ರಹ 22,459 ಕೋಟಿ ರು ಬಂದಿದೆ. ಒಟ್ಟುಗೂಡಿಸಿದರೆ ಜಿಎಸ್ಟಿ 47,936 ಕೋಟಿರು, ಸೆಸ್ 7,888 ಕೋಟಿ ಸಿಗಲಿದೆ.

ಜಿಎಸ್ಟಿ ಸಂಗ್ರಹ:
ಏಪ್ರಿಲ್ ತಿಂಗಳಿನಲ್ಲಿ 1.03 ಟ್ರಿಲಿಯನ್ ರು.
ಮೇ ತಿಂಗಳಿನಲ್ಲಿ 94,016 ಕೋಟಿ ರು
ಜೂನ್ ತಿಂಗಳಿನಲ್ಲಿ 95,610 ಕೋಟಿ ರು
ಜುಲೈ ತಿಂಗಳಿನಲ್ಲಿ 96, 483 ಕೋಟಿ ರು
ಆಗಸ್ಟ್ ತಿಂಗಳಿನಲ್ಲಿ 93,960 ಕೋಟಿ ರು
ಸೆಪ್ಟೆಂಬರ್ : 94,442 ಕೋಟಿ ರು
ಅಕ್ಟೋಬರ್ : 100,710 ಕೋಟಿ ರು
ನವೆಂಬರ್ : 97,637 ಕೋಟಿ ರು ಸಂಗ್ರಹವಾಗಿದೆ.












Click it and Unblock the Notifications