ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಸ್ ಸುಳಿಗೆ ಸಿಕ್ಕ ಷೇರು ಮಾರುಕಟ್ಟೆ ಪಾತಾಳಕ್ಕೆ

|
Google Oneindia Kannada News

ಮುಂಬೈ, ಜೂ. 29 : ದೂರದ ಗ್ರೀಸ್ ನಲ್ಲಿ ಉಂಟಾಗಿರುವ ಆರ್ಥಿಕ ಪತನ ಭಾರತದ ಷೇರು ಮರುಕಟ್ಟೆ ಮೇಲೂ ವ್ಯಾಪಕ ಪರಿಣಾಮ ಬೀರಿದೆ. ವಿಶ್ವ ಆರ್ಥಿಕತೆಯೇ ಆತಂಕಕ್ಕೆ ಗುರಿಯಾಗಿದ್ದು ಸೋಮವಾರ ಷೇರು ಪೇಟೆ ಸೂಚ್ಯಂಕ 535 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿತು.

ಕಳೆದ ಒಂದು ವಾರದಿಂದಲೇ ಗ್ರೀಸ್ ಆರ್ಥಿಕ ಕುಸಿತ ಬಹುಚರ್ಚಿತ ಸಂಗತಿಯಾಗಿತ್ತು. ಶುಕ್ರವಾರದ ಅಂತ್ಯಕ್ಕೆ ಸೆನ್ಸೆಕ್ಸ್ 84.13 ಅಂಕಗಳ ಕುಸಿತ ಕಂಡಿತ್ತು. ಸೋಮವಾರ ಆರಂಭದಲ್ಲೇ 535.87 ಅಂಕ ನಷ್ಟಕ್ಕೆ ಕಾರಣವಾಗಿದ್ದು ಬಂಡವಾಳ ಹೂಡಿಕೆದಾರರ ಆತಂಕಕಕ್ಕೆ ಕಾರಣವಾಗಿದೆ. ಸದ್ಯ ಸೆನ್ಸೆಕ್ಸ್ 27,275.97 ಅಂಕಗಳಲ್ಲಿ ವ್ಯವಹಾರ ನಡೆಯುತ್ತಿದೆ.[ಪ್ಯೂಚರ್ ಮಾರುಕಟ್ಟೆಯಿಂದ ಚಿನ್ನ ಖರೀದಿ ಹೇಗೆ?]

| ಷೇರು ಮಾರುಕಟ್ಟೆ ಲೈವ್ ನೋಡಿ

share

ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸಹ166.45 ಅಂಕ (ಶೇಕಡಾ 1.99)ಗಳ ನಷ್ಟಕ್ಕೆ ಗುರಿಯಾಗಿ 8,214.65 ಅಂಕಕ್ಕೆ ಬಂದು ತಲುಪಿದೆ. ಇತ್ತ ಡಾಲರ್ ವಿನಿಮಯ ದರದಲ್ಲೂ ಬದಲಾವಣೆ ಕಂಡುಬಂದಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ 24 ಪೈಸೆ ಕಳೆದುಕೊಂಡಿದೆ.[ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]

ಷೇರು ಮಾರುಕಟ್ಟೆಯ ಪ್ರಮುಖ ವಹಿವಾಟುದಾರರಾದ ಟಾಟಾ ಮೋಟಾರ್ಸ್, ಎಸ್ ಬಿಐ, ಏಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಸೇರಿದಂತೆ ಅನೇಕ ಷೇರುಗಳು ಕುಸಿತಕ್ಕೆ ಗುರಿಯಾಗಿವೆ. ಅಪಾರ ಪ್ರಮಾಣದ ಸಾಲ ಪಡೆದಿರುವ ಗ್ರೀಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸಾಲ ತೀರಿಸುವುದು ಅಸಾಧ್ಯ ಎಂದೇ ವಿಶ್ಲೇಷಣೆ ಮಾಡಲಾಗಿದೆ.

English summary
Mumbai: Key domestic equity benchmark indices came down crashing in the opening trade Monday, June 29, with benchmark Sensex tumbling over 500 points amid knee-jerk reaction by investors over Greece inching closer towards a likely expulsion from the Euro zone after weekend talks between the country and its creditors failed to arrive at any solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X