Gold Rate Oct 02: ದಸರಾ ಸಂಭ್ರಮ: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಎಷ್ಟಿದೆ ಇಂದಿನ ಚಿನ್ನ & ಬೆಳ್ಳಿ ಬೆಲೆ!
Gold Rate Oct 02: ತುಂಬಾ ದಿನಗಳ ನಂತರ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ದಸರಾ ಸಂಭ್ರಮದಲ್ಲಿರುವ ಜನರಿಗೆ ಚಿನ್ನದ ಬೆಲೆಯೂ ಸಹ ಅಕ್ಟೋಬರ್ 02ರಂದು ಸಂತೋಷವನ್ನುಂಟು ಮಾಡಿದೆ. ಚಿನ್ನದ ಬೆಲೆಯು ತುಂಬಾ ದಿನಗಳ ನಂತರ ಭರ್ಜರಿ ಇಳಿಕೆ ಆಗಿದೆ. ಕಳೆದ ತಿಂಗಳು ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತಗಳು ಆಗಿತ್ತು. ಅಲ್ಲದೇ ಬುಧವಾರ (ಅಕ್ಟೋಬರ್ 01)ರಂದು ಸಹ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಅಚ್ಚರಿಯ ಬೆಳವಣಿಗೆಯಂತೆ ಗುರುವಾರ ಚಿನ್ನದ ಬೆಲೆ ಭಾರೀ ಇಳಿಕೆ ಆಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರವಾದ ಬೆಲೆ ನೋಡೋಣ.
ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬಂಗಾರದ ಬೆಲೆಯು ಮೋಡಿ ಮಾಡಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯನ್ನೇ ಕಂಡಿದ್ದ ಬಂಗಾರ ಪ್ರಿಯರು ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ಕಂಡಿದ್ದಾರೆ. ಆದರೆ ಬೆಳ್ಳಿಯ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿಗೂ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ದೇಶದಲ್ಲಿ ಹಣದುಬ್ಬರ ಹಾಗೂ ಆರ್ಥಿಕ ಅನಿಶ್ಚಿತತೆ ಕಾರಣ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಜನ ಚಿನ್ನ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿತ್ತು. ಮುಖ್ಯವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಡವಟ್ಟಿನ ಆರ್ಥಿಕ ನೀತಿಗಳು ಸಹ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುವುದಕ್ಕೆ ಕಾರಣವಾಗಿತ್ತು. ಇದೀಗ ಕೊನೆಗೂ ಚಿನ್ನದ ಬೆಲೆ ಇಳಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,869 ರೂಪಾಯಿ ಇದೆ. ಇನ್ನು 10 ಗ್ರಾಂನ ಬೆಲೆಯು 1,18,690 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ, 24 ಕ್ಯಾರೆಟ್‌ನ ಒಂದು ಗ್ರಾಂ ಬಂಗಾರದ ಬೆಲೆಯು 55 ರೂಪಾಯಿ ಹಾಗೂ 10 ಗ್ರಾಂಗೆ 550 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,880 ರೂಪಾಯಿ ಹಾಗೂ ಹತ್ತು ಗ್ರಾಂಗೆ 1,08,800 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಮೇಲೆ 50 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 500 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಚಿನ್ನದ ಬೆಲೆಯು ಒಂದು ಗ್ರಾಂಗೆ 8,902 ರೂಪಾಯಿ ಹಾಗೂ ಹತ್ತು ಗ್ರಾಂಗೆ 89,020 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂಗೆ 38 ರೂಪಾಯಿ ಹಾಗೂ ಹತ್ತು ಗ್ರಾಂಗೆ 380 ರೂಪಾಯಿ ಕಡಿಮೆ ಆಗಿದೆ.
ಬೆಳ್ಳಿ ಬೆಲೆ: ಬಂಗಾರದ ಬೆಲೆ ಹೆಚ್ಚಾದರೂ ಬೆಳ್ಳಿಯ ಬೆಲೆ ಅಪರೂಪಕ್ಕೆ ಹೆಚ್ಚಳವಾಗುತ್ತಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ಬೆಳ್ಳಿ ಬೆಲೆಯೂ ಭರ್ಜರಿ ಹೆಚ್ಚಳ ಕಂಡಿದೆ. ಅಕ್ಟೋಬರ್ 02 ರಂದು ಒಂದು ಗ್ರಾಂ ಬೆಳ್ಳಿ ಬೆಲೆಯು 153 ರೂಪಾಯಿ ಹಾಗೂ ಒಂದು ಕೆ.ಜಿಗೆ 1,53,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು 2 ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications