ಚೀನಾ ಹೂಡಿಕೆ ಮೇಲಿನ ನಿರ್ಬಂಧ ತೆರವುಗೊಳಿಸಲು ಸಮಿತಿ ಶಿಫಾರಸು
ನವದೆಹಲಿ, ನವೆಂಬರ್ 13: ಆರ್ಥಿಕತೆಯ ಪುನಶ್ಚೇತನಕ್ಕೆ ಚೀನಾ ಹೂಡಿಕೆಯ ಮೇಲಿನ ನಿರ್ಬಂಧಗಳನ್ನು ಶೇ 15ರವರೆಗೂ ತೆರವುಗೊಳಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಎಂಟು ಸದಸ್ಯರ ಸಚಿವರ ಸಮಿತಿ ಶಿಫಾರಸು ಮಾಡಿದೆ. ಭೂರಾಜಕೀಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಕಾಪಾಡುವುದರ ಜತೆಗೆ ಹೂಡಿಕೆಯ ಅವಕಾಶವನ್ನು ನೀಡಬೇಕು ಎಂದು ಅದು ಹೇಳಿದೆ.
ಹಾಗೆಯೇ, ಚೀನಾ ಮೂಲದ ಮಾಲೀಕತ್ವದಲ್ಲಿ ಶೇ 50ಕ್ಕಿಂತ ಕಡಿಮೆ ಇರುವ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಕೂಡ ಪೂರ್ವಾನುಮತಿ ನಿರ್ಬಂಧಗಳಲ್ಲಿ ವಿನಾಯಿತಿ ನೀಡಬಹುದಾಗಿದೆ ಎಂದು ಕೂಡ ಸಮಿತಿ ಹೇಳಿದೆ.
ಸಾಮಾಜಿಕ ನ್ಯಾಯ ಸಚಿವ ಥಾವರ್ ಚಾಂದ್ ಗೆಹ್ಲೋಟ್ ನೇತೃತ್ವದ ಸಚಿವರ ಸಮೂಹದ ಸಮಿತಿಯು ಭಾರತೀಯ ಕಂಪೆನಿಗಳ ಅವಕಾಶವಾದಿ ಸ್ವಾಧೀನ ಅಥವಾ ಅತಿಕ್ರಮಣದ ಸಂಗತಿಗಳನ್ನು ಗಮನಿಸಲು ಪ್ರೆಸ್ ನೋಟ್ 3ರಲ್ಲಿ ಸ್ಪಷ್ಟನೆ ಮತ್ತು ಬದಲಾವಣೆಗಳನ್ನು ಕೇಳಿದೆ. ಏಪ್ರಿಲ್ ತಿಂಗಳಲ್ಲಿ ಲಡಾಖ್ನಲ್ಲಿ ಭಾರತ-ಚೀನಾ ಸೇನಾ ಬಿಕ್ಕಟ್ಟು ಶುರುವಾದ ಬಳಿಕ ಕೋವಿಡ್ 19 ಸೋಂಕನ್ನು ಪರಿಗಣಿಸಿ ಪ್ರೆಸ್ ನೋಟ್ 3 ಹೊರಡಿಸಲಾಗಿತ್ತು.

ಭಾರತೀಯ ಕಂಪೆನಿಗಳಲ್ಲಿ ಶೇ 15ಕ್ಕಿಂತ ಕಡಿಮೆ ಇರುವ ಚೀನಾ ಹೂಡಿಕೆ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು, ಶೇ 50ಕ್ಕಿಂತ ಕಡಿಮೆ ಚೀನಾ ಮಾಲೀಕತ್ವದ ಪ್ರಯೋಜನವಿರುವ ಅಂತಾರಾಷ್ಟ್ರೀಯ ಹೂಡಿಕೆದಾರರ ಪೂರ್ವಾನುಮತಿ ಅಗತ್ಯವನ್ನು ತೆಗೆದುಹಾಕುವುದು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ನಿಯಂತ್ರಣ ಅಥವಾ ಪ್ರಮುಖ ಮಾಲೀಕತ್ವವಲ್ಲದೆ ಇರುವ ತೈವಾನ್ ಹಾಗೂ ಹಾಂಕಾಂಗ್ ಕಂಪೆನಿಗಳ ಹೂಡಿಕೆಗೆ ವಿನಾಯಿತಿ ನೀಡುವುದನ್ನು ಈ ಸಮಿತಿ ಶಿಫಾರಸು ಮಾಡಿದೆ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications