ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರದ ಭರ್ಜರಿ ಗಿಫ್ಟ್
ನವದೆಹಲಿ, ಫೆ. 8: ದೇಶದ 9 ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರ 6,990 ಕೋಟಿ ರೂ. ಹೆಚ್ಚುವರಿ ಬಂಡವಾಳ ನೀಡಲು ನಿರ್ಧರಿಸಿದೆ.
ವಿವಿಧ ಬ್ಯಾಂಕ್ ಗಳ ಸಾಧನೆ ಆಧರಿಸಿ ಕೇಂದ್ರ ಸರ್ಕಾರ ಕೊಡುಗೆ ನೀಡಿದ್ದು ಬಜೆಟ್ ನಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಕ್ಕಿಂತ 6,990 ಕೋಟಿ ರೂ. ನೀಡಲಿದೆ. ಎಸ್ ಬಿಐ, ಬ್ಯಾಂಕ್ ಆಫ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ 9 ಬ್ಯಾಂಕ್ ಗಳಿಗೆ ಕೊಡುಗೆ ದೊರೆಯಲಿದೆ.[ಪಿಪಿಎಫ್ ಅವಧಿ 2 ವರ್ಷ ಹೆಚ್ಚಳಕ್ಕೆ ಮುಂದಾದ ಕೇಂದ್ರ]

ಎಸ್ ಬಿಐ ಗೆ ಅತಿ ಹೆಚ್ಚು ಅಂದರೆ 2,970ಕೋಟಿ ರೂ. ಲಭ್ಯವಾಗಲಿದೆ. ಬ್ಯಾಂಕ್ ಆಫ್ ಬರೋಡಾಗೆ 1,260 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕಗೆ 870 ಕೋಟಿ ರೂ., ಕೆನರಾ ಬ್ಯಾಂಕ್ ಗೆ 570 ಕೋಟಿ ರೂ., ಸಿಂಡಿಕೇಟ್ ಬ್ಯಾಂಕ್ ಗೆ 460 ಕೋಟಿ ರೂ., ಅಲಹಾಬಾದ್ ಬ್ಯಾಂಕ್ ಗೆ 320 ಕೋಟಿ, ಮತ್ತು ದೇನಾ ಬ್ಯಾಂಕ್ ಗೆ 140 ಕೋಟಿ ರೂ. ಲಭ್ಯವಾಗಲಿದೆ.[ಬ್ಯಾಂಕ್ ಎಟಿಎಂನಲ್ಲಿ ವಂಚನೆ ನಡೆದಾಗ ಹೀಗೆ ಮಾಡಿ...]
ಬ್ಯಾಂಕ್ ಗಳ ಸಾಧನೆ ಆಧರಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಸ್ವತ್ತುಗಳ ಮೇಲಿನ ಮರುಪಾವತಿ, ಈಕ್ವಿಟಿ ಮೇಲಿನ ಮರುಪಾವತಿಯನ್ನು ಪರಿಗಣಿಸಿ ಅನುದಾನ ನೀಡಲಾಗಿದೆ. ಇದು ಹೆಚ್ಚಿನ ಸಾಲ ನೀಡಿಕೆಗೂ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications