ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್!

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 29: ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯು ಮತ್ತೊಂದು ದೈತ್ಯ ಮೊಬೈಲ್ ಸಂಸ್ಥೆ ಆಪಲ್‌ಗೆ ಈ ವರ್ಷ 68000 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.

ಹೌದು, ಎರಡೂ ಸಂಸ್ಥೆಗಳು ಪರಸ್ಪರ ಮೊಬೈಲ್ ಸೇರಿದಂತೆ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು ಹಾಗಿದ್ದರೂ ಗೂಗಲ್‌ ಏಕೆ ಆಪಲ್‌ಗೆ ಅಷ್ಟು ದೊಡ್ಡ ಮೊತ್ತವನ್ನು ನೀಡುತ್ತಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಹಿಂದೆ ಶುದ್ಧ ವ್ಯಾಪಾರವಿದೆ.

ಆಪಲ್‌ ಸಂಸ್ಥೆ ತನ್ನದೇ ಆದ ಆಪರೇಟಿಂಗ್ ಸಿಸ್ಟಂ (ಐಓಎಸ್‌) ಬಳಸುವುದು ಗೊತ್ತೇ ಇದೆ. ಅದರಲ್ಲಿ ವೆಬ್‌ ಬ್ರೌಸರ್‌ ಸಹ ಆಪಲ್‌ ಸಂಸ್ಥೆಯದ್ದೇ ಆದ ಸಫಾರಿ ಇದೆ. ಅದು ಗೂಗಲ್‌ ಅನ್ನು ಡೀಫಾಲ್ಟ್‌ ಆಗಿ ಬಳಸವುದಿಲ್ಲ.

Google paying Apple company 68000 crore rupees this year

ಆದರೆ ಗೂಗಲ್‌ ಸಂಸ್ಥೆಯು ಆಪಲ್‌ನ ವೆಬ್‌ ಬ್ರೌಸರ್‌ ಸಫಾರಿಯಲ್ಲಿ ಗೂಗಲ್‌ ಅನ್ನು ಡಿಫಾಲ್ಟ್‌ ವೆಬ್‌ಬ್ರೌಸರ್ ಆಗಿ ಬಳಸಲೆಂದು ಆಪಲ್‌ ಕಂಪೆನಿಗೆ ವರ್ಷದ ಶುಲ್ಕವಾಗಿ 68000 ಕೋಟಿ ನೀಡುತ್ತಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.

ಆಪಲ್‌ ಸಂಸ್ಥೆಯು ಗೂಗಲ್‌ ಜೊತೆಗೆ ಬಿಂಗ್ ಎನ್ನುವ ವೆಬ್‌ ಬ್ರೌಸರ್‌ ಅನ್ನು 'ಸಿರಿ' ( ಆಪಲ್‌ನ ಧ್ವನಿ ಆದೇಶ ) ಮೂಲಕ ಮಾಹಿತಿ ಹುಡುಕಲು ಬಳಸುತ್ತಿತ್ತು. ಆದರೆ ಇನ್ನು ಮುಂದೆ ಕೇಲವ ಗೂಗಲ್‌ ಅನ್ನೇ ಡಿಫಾಲ್ಟ್‌ ಬ್ರೌಸರ್ ಆಗಿ ಬಳಸಲಿದೆ.

ನಿನ್ನೆಯಷ್ಟೆ ಭಾರತದಲ್ಲಿ ಏಪಲ್‌ನ ಹೊಸ ಮಾದರಿ ಎಕ್ಸ್‌ ಮ್ಯಾಕ್ಸ್‌ ಮೊಬೈಲ್ ಫೋನ್‌ ಮಾರುಕಟ್ಟೆಗೆ ಬಂದಿವೆ. 64 ಜಿಬಿ, 224 ಜಿಬಿ, 512 ಜಿಬಿ ಸಾಮರ್ಥ್ಯದ ಫೋನುಗಳು ಕ್ರಮವಾಗಿ 1.10 ಲಕ್ಷ, 1.25 ಲಕ್ಷ, 1.45 ಲಕ್ಷ ಬೆಲೆಯುಳ್ಳದ್ದಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+