ಭಾರತದಲ್ಲಿ ಮುಂದಿನ 5-7 ವರ್ಷದಲ್ಲಿ 75,000 ಕೋಟಿ ಹೂಡಿಕೆ: ಗೂಗಲ್ ಸಿಇಒ ಸುಂದರ್ ಪಿಚೈ
ನವದೆಹಲಿ, ಜುಲೈ 13: ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ ಗೂಗಲ್ ಕಂಪನಿಯು 75,000 ಕೋಟಿ ರುಪಾಯಿ ಅಥವಾ ಅಂದಾಜು 10 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
Recommended Video
Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada
ಪಿಚೈ, ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್ ಘೋಷಿಸಲು ಉತ್ಸುಕರಾಗಿದ್ದಾರೆ. ಅದರ ಮೂಲಕ, ಮುಂದಿನ 5-7 ವರ್ಷಗಳಲ್ಲಿ ಬೃಹತ್ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸಲು ಈ ಹೂಡಿಕೆ ಮಾಡುತ್ತಿರುವುದಾಗಿ ಸುಂದರ್ ಪಿಚೈ ಘೋಷಿಸಿದ್ದಾರೆ.
''ಡಿಜಿಟಲ್ ವ್ಯವಸ್ಥೆಯ ಹೂಡಿಕೆಗಳಲ್ಲಿ ಈಕ್ವಿಟಿ ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಕಾರ್ಯಾಚರಣೆಯ ಮೂಲಸೌಕರ್ಯಗಳ ಮಿಶ್ರಣದಿಂದ ನಾವು ಇದನ್ನು ಮಾಡುತ್ತೇವೆ'' ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ ಸುಂದರ್ ಪಿಚೈ ಭಾರತದಲ್ಲಿ ಈ ಬೃಹತ್ ಹೂಡಿಕೆಯನ್ನು ಈ ಘೋಷಣೆ ಮಾಡಿದ್ದಾರೆ.












Click it and Unblock the Notifications