Gold Rate: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ!
Gold and silver Rate on July 9: ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಬುಧವಾರ ಭರ್ಜರಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಇಂದು ಇಳಿಕೆ ಆಗಿರುವುದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಇನ್ನೊಂದು ಮುಖ್ಯ ಅಂಶವೆಂದರೆ ಚಿನ್ನದ ಬೆಲೆಯು ಒಂದು ಲಕ್ಷದ ಸಮೀಪದಲ್ಲಿ ಇದೆಯಾದರೂ ಒಂದು ಲಕ್ಷ ರೂಪಾಯಿ ಗಡಿ ಮುಟ್ಟಿಲ್ಲ. ಇದೀಗ ಜುಲೈ 09ರಂದು ಚಿನ್ನದ ಬೆಲೆಯು ಇನ್ನಷ್ಟು ಇಳಿಕೆಯಾಗಿದೆ.
ಚಿನ್ನದ ಬೆಲೆಯು ಇಳಿಕೆ ಆಗುತ್ತಿರುವುದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಕಡಿಮೆ ಆಗಬಹುದು ಅಂತಲೇ ಹೇಳಲಾಗುತ್ತಿದೆ. ಭಾರತದಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಜನ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಹೆಚ್ಚು ಖರೀದಿ ಮಾಡುತ್ತಾರೆ. ಇದರೊಂದಿಗೆ ಕಷ್ಟದ ಸಮಯದಲ್ಲಿ ಚಿನ್ನ ಸಹಾಯಕ್ಕೆ ಬರುತ್ತದೆ ಎನ್ನುವ ಲೆಕ್ಕಾಚಾರವೂ ಇದೆ. ಇಂದು (ಜುಲೈ 09) ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ಇಲ್ಲಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಜುಲೈ 09 ರಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 9,818 ರೂಪಾಯಿ ಆಗಿದೆ. 10 ಗ್ರಾಂನ ಬಂಗಾರದ ಬೆಲೆಯು 98,180 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 1 ಗ್ರಾಂಗೆ 66 ರೂಪಾಯಿ ಹಾಗೂ 10 ಗ್ರಾಂಗೆ 660 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಜುಲೈ 09ರಂದು 22 ಕ್ಯಾರೆಟ್‌ನ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 9,000 ಸಾವಿರ ರೂಪಾಯಿ ಆಗಿದೆ. 10 ಗ್ರಾಂಗೆ 90,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂಗೆ 60 ರೂಪಾಯಿ ಹಾಗೂ 10 ಗ್ರಾಂಗೆ 600 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 22 & 24 ಕ್ಯಾರೆಟ್‌ನೊಂದಿಗೆ 18 ಕ್ಯಾರೆಟ್ ಚಿನ್ನದ ಬೆಲೆಯೂ ಕಡಿಮೆಯಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 7,364 ರೂಪಾಯಿ ಹಾಗೂ 10 ಗ್ರಾಂಗೆ 73,640 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂನ ಮೇಲೆ 49 ರೂಪಾಯಿ ಹಾಗೂ 10 ಗ್ರಾಂನ ಮೇಲೆ 490 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ: ಇನ್ನು ಸತತ ಮೂರನೇ ದಿನವೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 110 ರೂಪಾಯಿ ಹಾಗೂ ಒಂದು ಕೆ.ಜಿಗೆ 1,10,000 ರೂಪಾಯಿ ಆಗಿದೆ.












Click it and Unblock the Notifications