ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಸೆನ್ಸೆಕ್ಸ್ 732 ಅಂಶ ಏರಿಕೆ

ಮುಂಬೈ, ಅಕ್ಟೋಬರ್ 12: ಮಾಹಿತಿ ತಂತ್ರಜ್ಞಾನದ ಕಂಪನಿಯ ಷೇರುಗಳನ್ನು ಹೊರತುಪಡಿಸಿ ಉಳಿದ ವಲಯದ ಕಂಪನಿಗಳ ಷೇರುಗಳಲ್ಲಿ ಶುಕ್ರವಾರ ಭರ್ಜರಿ ಖರೀದಿಯಾಗಿ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 732 ಅಂಶಗಳಷ್ಟು ಏರಿಕೆ ಕಂಡು, 34,733 ಅಂಶಗಳಿಗೆ ದಿನದ ಹಾಗೂ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು. ಇನ್ನು ಎನ್ಎಸ್ಇ ನಿಫ್ಟಿ ಸೂಚ್ಯಂಕವು 237 ಅಂಶ ಏರಿಕೆಯಾಗಿ, 10,472ಕ್ಕೆ ದಿನಾಂತ್ಯ ಕಂಡಿದೆ.

ಇದೇ ವೇಳೆ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಚೇತರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿ ದರದ ವಿಚಾರವಾಗಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಪರಿಣತರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರಿಂದ ಆರ್ಥಿಕತೆ ಮೇಲೂ ಪರಿಣಾಮ ಆಗಲಿದೆ.

ನಿಫ್ಟಿ- 50 ಸೂಚ್ಯಂಕದಲ್ಲಿರುವ ಐವತ್ತು ಷೇರುಗಳ ಪೈಕಿ 46 ಷೇರುಗಳು ಏರಿಕೆ ಕಂಡವು. ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಐಷರ್ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಜೆಎಸ್ ಡಬ್ಲ್ಯು ಸ್ಟೀಲ್ 5ರಿಂದ 6 ಪರ್ಸೆಂಟ್ ಏರಿಕೆ ಕಂಡವು.

Good day for investors: Sensex Jumps 732 Points, Nifty Reclaims 10,450

ಇನ್ನು ಬ್ಯಾಂಕಿಂಗ್ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೊಟಕ್ ಬ್ಯಾಂಕ್, ಐಡಿಎಫ್ ಸಿ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಗಳು ಸಹ ಉತ್ತಮ ಏರಿಕೆ ದಾಖಲಿಸಿದವು.

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಗುರುವಾರದ ಕೊನೆಗೆ 74.14ಕ್ಕೆ ಅಂತ್ಯವಾಗಿತ್ತು. ಶುಕ್ರವಾರದಂದು ಒಳ್ಳೆ ಚೇತರಿಕೆ ಕಂಡ ರುಪಾಯಿ 73.62ಕ್ಕೆ ತಲುಪಿತು. ಆ ಕಾರಣಕ್ಕೆ ಐಟಿ (ಮಾಹಿತಿ ತಂತ್ರಜ್ಞಾನ ಕಂಪನಿ) ಷೇರುಗಳು ಇಳಿಕೆ ಕಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಂಡರೂ ಮಾರುಕಟ್ಟೆ ಏರಿಕೆಗೆ ಯಾವುದೇ ತಡೆ ಆಗಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+