ಸ್ಥಳೀಯರಿಂದ ಹೆಚ್ಚಿದ ಬೇಡಿಕೆ, ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆ

ಬೆಂಗಳೂರು, ಜುಲೈ 22: ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾಗಿದ್ದು, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಸೋಮವಾರ(ಜುಲೈ 22)ದಂದು ಮತ್ತೆ ಏರಿಕೆ ಕಂಡಿದೆ.

"ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ, ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಗಳಿಗಿಂತ ಚಿನ್ನದ ಮೇಲೆ ಹೆಚ್ಚಿನ ನಂಬಿಕೆ ಇರಿಸಿ ಹೂಡಿಕೆ ಮಾಡುತ್ತಿದ್ದಾರೆ. ಸೋಮವಾರದಂದು 100 ರೂ. ಗಳ ಹೆಚ್ಚಳವಾಗಿದ್ದು, ಚಿನಿವಾರ ಪೇಟೆಯಲ್ಲಿ 10 ಗ್ರಾಂಗೆ 35,970 ರೂ ನಂತೆ ವ್ಯಾಪಾರ ನಡೆಸಿದೆ. ಬೆಳ್ಳಿ ದರದಲ್ಲಿ 260 ರು ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 41,960 ರೂ.ಗಳಷ್ಟಿದೆ, ಇದು ಸಾರ್ವಕಾಲಿಕ ದಾಖಲೆ" ಎಂದು ಅಖಿಲ ಭಾರತ ಸರಫಾ ಅಸೋಸಿಯೇಷನ್ ಉಪಾಧ್ಯಕ್ಷ ಸುರೇಂದ್ರ ಜೈನ್ ಹೇಳಿದ್ದಾರೆ.

Gold touches all-time high of Rs 35,970 per 10 gram

ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,425.60 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 16.40 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಬೆಲೆ 100 ರು ಏರಿಕೆ ಕಂಡು, ಕ್ರಮವಾಗಿ 35,970 ಪ್ರತಿ 10 ಗ್ರಾಂ ಹಾಗೂ 35,800 ರು ಪ್ರತಿ 10 ಗ್ರಾಂನಂತೆ ದೆಹಲಿ ಚಿನಿವಾರ ಪೇಟೆಯಲ್ಲಿ ವ್ಯಾಪಾರ ಕಂಡಿದೆ.

ಸವರನ್ ಚಿನ್ನ 100 ರು ಏರಿಕೆ ಕಂಡು 8 ಗ್ರಾಂಗೆ 27,500 ರು ನಂತೆ ಮಾರಾಟವಾಗುತ್ತಿದೆ. ಬೆಳ್ಳಿ ಬೆಲೆ 260 ರು ಏರಿಕೆ ಕಂಡು ಪ್ರತಿ 1 ಕೆಜಿಗೆ 41,960 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 84,000 ರು ಖರೀದಿಗೆ ಹಾಗೂ 85,000ರು ಮಾರಾಟದ ಬೆಲೆ ಪಡೆದುಕೊಂಡಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+