ಚಿನ್ನದ ದರ 30 ಸಾವಿರ ತಲುಪಲು ಕಾರಣವೇನು?

Subscribe to Oneindia Kannada

ನವದೆಹಲಿ, ಏಪ್ರಿಲ್, 30: ಚಿನ್ನ ಹೇಳು ಹೇಗಿರುವೆ? ಅಂದರೆ ಉತ್ತರ ಏರಿಕೆಯ ಹಾದಿಯಲ್ಲಿರುವೆ. ಕಳೆದ ಮೂರು ದಿನದಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ದರ ಶುಕ್ರವಾರದ ಅಂತ್ಯಕ್ಕೆ 30,000 ರು. ಗಡಿ ದಾಟಿದೆ.

ಎರಡು ವರ್ಷಗಳ ಹಿಂದಿನ ದರಕ್ಕೆ ಚಿನ್ನ ತಲುಪಿದೆ. 10 ಗ್ರಾಂ ಚಿನ್ನದ ದರ 350 ರೂ. ಏರಿಕೆಯಾಗಿದ್ದು 30,250 ರು. ಆಗಿದೆ. ಚಿನ್ನದ ವರ್ತಕರು ಆರಂಭಿಸಿರುವ ಪ್ರತಿಭಟನೆ ಸಹ ದರ ಏರಿಕೆಗೆ ಕಾರಣವಾಗಿ ಪರಿಣಮಿಸಿದೆ. [ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ಡಾಲರ್ ಎದುರು ರುಪಾಯಿ ದರವು ಕಳೆದ 10 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಷೇರುಪೇಟೆಯಲ್ಲಿ ಏರಿಳಿತಗಳು ಉಂಟಾಗುತ್ತಿದ್ದು ಜನರು ಪರ್ಯಾಯ ಹೂಡಿಕೆಯತ್ತ ಗಮನ ನೀಡುತ್ತಿದ್ದಾರೆ. ಚಿನ್ನ ದಿಢೀರ್ ಏರಿಕೆಗೆ ಕಾರಣವಾದ ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ

ವರ್ತಕರ ಪ್ರತಿಭಟನೆ

ವರ್ತಕರ ಪ್ರತಿಭಟನೆ

ಚಿನ್ನದ ವರ್ತಕರು ಆರಂಭಿಸಿದ ಪ್ರತಿಭಟನೆ ಪರಿಣಾಮ ಮಳಿಗೆಗಳು ಬಾಗಿಲು ಹಾಕಿದ್ದವು. ಮತ್ತೆ ಕೆಲ ದಿನಗಳ ನಂತರ ಮಳಿಗೆ ತೆರೆದ ಪರಿಣಾಮ ಒಮ್ಮೆಲೆ ಗ್ರಾಹಕರು ದೌಡಾಯಿಸಿದರು. ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ವರ್ತಕರ ಒಕ್ಕೂಟ ಹಾಗೂ ಭಾರತ ಚಿನಿವಾರ ಪೇಟೆ ಮತ್ತು ವರ್ತಕರ ಸಂಘ ಈ ಮುಷ್ಕರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿ ಮಳಿಗೆ ತೆರೆದಿದ್ದವು.

 ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ ನಿರಂತರವಾಗಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ. ಅತಂತ್ರ ಸ್ಥಿತಿಯ ಮಾರುಕಟ್ಟೆ ಪರಿಣಾಮ ಹೂಡಿಕೆದಾರರು ಪರ್ಯಾಯ ಹೂಡಿಕೆ ಅಂದರೆ ಚಿನ್ನ ಮತ್ತು ಆಭರಣಗಳತ್ತ ಗಮನ ಹರಿಸಿದ್ದು ಏರಿಕೆಗೆ ಕಾರಣವಾಯಿತು.

ಮದುವೆ ಸೀಸನ್

ಮದುವೆ ಸೀಸನ್

ಮದುವೆ ಮತ್ತಿತರ ಮಂಗಳ ಕಾರ್ಯಗಳ ಸೀಸನ್ ಆರಂಭವಾದ ಪರಿಣಾಮ ಗ್ರಾಹಕರು ಚಿನ್ನದ ಅಂಗಡಿಗೆ ಲಗ್ಗೆ ಇಟ್ಟರು. ಇದು ಸಹ ದಿಢೀರ್ ಏರಿಕೆಗೆ ಕಾರಣವಾಯಿತು.

ಅಂತಾರಾಷ್ಟ್ರೀಯ ಮಾರುಕಟ್ಟೆ

ಅಂತಾರಾಷ್ಟ್ರೀಯ ಮಾರುಕಟ್ಟೆ

ವಿದೇಶಿ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಬೆಳವಣಿಗೆ, ಹಿಂದಕ್ಕೆ ಸರಿದ ಮಧ್ಯಮ ಗಾತ್ರದ ಹೂಡಿಕೆದಾರರು, ಡಾಲರ್ ಎದುರು ಕುಸಿಯುತ್ತ ಸಾಗಿದ ರುಪಾಯಿ ಎಲ್ಲವೂ ಚಿನ್ನದ ದರ ಏರಿಕೆಗೆ ಕಾರಣವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rallying for the third straight day, gold climbed by Rs 350 to trade above the Rs 30,000-mark at Rs 30,250 per 10 grams, its highest level in almost two years at the bullion market today, largely in tandem with firming trend overseas.
Please Wait while comments are loading...