Gold Price Today: ಭಾರೀ ಇಳಿಕೆ ಕಂಡ ಚಿನ್ನದ ದರ, ಆಭರಣ ಪ್ರಿಯರು ಫುಲ್‌ ಖುಷ್‌

ಕಳೆದ ವಾರ ಚಿನ್ನದ ದರ ಭಾರಿ ಏರಿಕೆಯಿಂದ ಕಂಗಾಲಾಗಿದ್ದ ಚಿನ್ನಾಭರಣಪ್ರಿಯರಿಗೆ ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ. ಈ ವಾರದ ಆರಂಭದಲ್ಲೇ ಚಿನ್ನದ ದರ ಭಾರಿ ಇಳಿಕೆ ಕಂಡಿದೆ. ಅಕ್ಷಯ ತೃತೀಯದ ಹಿನ್ನೆಲೆ ಕಳೆದ ವಾರದ ಚಿನ್ನದ ದರವು ನಿರಂತರವಾಗಿ ಏರಿಕೆ ಕಂಡಿತ್ತು. ಹಾಗಾಗಿ ಚಿನ್ನ ದುಬಾರಿ ಎಂದು ಜನ ಬೆಚ್ಚಿಬಿದ್ದಿದ್ದರು. ಇದೀಗ ಮತ್ತೆ ಚಿನ್ನದ ದರ ಕಡಿಮೆಯಾಗಿದೆ. ಚಿನ್ನದ ಬೆಲೆಯಲ್ಲಿ ಸುಮಾರು 100 ರೂಪಾಯಿವರೆಗೆ ಇಳಿಕೆ ಕಂಡಿದೆ. ಇನ್ನು ಇಂದಿನ ಚಿನ್ನ ಹಾಗೂ ಬೆಳ್ಳಿಯ ದರದ ಮಾಹಿತಿ ಇಲ್ಲಿ ತಿಳಿಯಿರಿ..

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆಯು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,550 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನಕ್ಕೆ 8,754 ರೂಪಾಯಿ ಹಾಗೂ 999 ಚಿನ್ನ ಎಂದೂ ಕರೆಯುವ 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,163 ರೂಪಾಯಿ ಇದೆ. ಬೆಂಗಳೂರಿನಲ್ಲಿ ನಿನ್ನೆವರೆಗೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,755 ರೂಪಾಯಿ ಇತ್ತು. ಇಂದು ಗ್ರಾಂ.ಗೆ ಒಂದು ರೂಪಾಯಿ ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರವು 70,032 ರೂಪಾಯಿ ಇದ್ದು, 8 ರೂಪಾಯಿವರೆಗೆ ಕಡಿಮೆಯಾಗಿದೆ. 10 ಗ್ರಾಂಗೆ 87,540 ರೂಪಾಯಿ ಇದ್ದು, 100 ಗ್ರಾಂ ಚಿನ್ನದ ದರ 8,75,400 ರೂಪಾಯಿ ಆಗಿದೆ. ಸುಮಾರು 100 ರೂಪಾಯಿವರೆಗೆ ಚಿನ್ನದ ದರ ತಗ್ಗಿದೆ.

Gold Silver Prices Drop Sharply On May 5 Check Today Rates

ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 9,550 ರೂಪಾಯಿ ಇದೆ, 8 ಗ್ರಾಂಗೆ 76,400 ರೂಪಾಯಿ, 10 ಗ್ರಾಂಗೆ 95,500 ರೂಪಾಯಿ, 100 ಗ್ರಾಂಗೆ 9,55,000 ರೂಪಾಯಿ ಇದೆ. ಇದು ಕೂಡ ಗ್ರಾಂ.ಗೆ ತಲಾ ಒಂದು ರೂಪಾಯಿ ದರ ಇಳಿಕೆ ಕಂಡಿದೆ. 18 ಕ್ಯಾರೆಟ್ ಚಿನ್ನದ ದರವು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 7,163 ರೂಪಾಯಿಗೆ ತಗ್ಗಿದೆ. 8 ಗ್ರಾಂಗೆ 57,304 ರೂ., 10 ಗ್ರಾಂಗೆ 71,630 ರೂಪಾಯಿ ಹಾಗೂ 100 ಗ್ರಾಂ.ಗೆ 7,16,300 ರೂಪಾಯಿ ಕಡಿಮೆಯಾಗಿದೆ.

Take a Poll

ಕಳೆದ ಹತ್ತು ದಿನಗಳ ಚಿನ್ನದ ದರ

ದಿನಾಂಕ; 22 ಕ್ಯಾರೆಟ್‌ ಚಿನ್ನದ ದರ; 24 ಕ್ಯಾರೆಟ್‌ ಚಿನ್ನದ ದರ (ಪ್ರತಿ ಗ್ರಾಂ.ಗೆ)

ಮೇ 5: ₹8,754 ; ₹9,550
ಮೇ 4: ₹8,755 ; ₹9,551
ಮೇ 3: ₹8,755 ; ₹9,551
ಮೇ 2: ₹8,755 ; ₹9,551
ಮೇ 1: ₹8,775 ; ₹9,573
ಏಪ್ರಿಲ್‌ 30: ₹8,975 ; ₹9,791
ಏಪ್ರಿಲ್‌ 29: ₹8,980 ; ₹9,797
ಏಪ್ರಿಲ್‌ 28, ₹8,940 ; ₹9,753
ಏಪ್ರಿಲ್‌ 27: ₹9,002 ; ₹9,821
ಏಪ್ರಿಲ್‌ 26: ₹9,002 ; ₹9,821

Gold Silver Prices Drop Sharply On May 5 Check Today Rates

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹97.90 ಮತ್ತು ಪ್ರತಿ ಕಿಲೋಗ್ರಾಂಗೆ ₹97,900ರಷ್ಟಿದೆ. ಇದು ಕೂಡ ಕೆ.ಜಿಗೆ 100 ರೂಪಾಯಿ ಇಳಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+