Gold Rate Today: ಬಂಗಾರದ ದರದಲ್ಲಿ ದಾಖಲೆಯ 33,000 ರೂಪಾಯಿ ಇಳಿಕೆ: ಯಾವ ನಗರದಲ್ಲಿ ಬೆಲೆ ಎಷ್ಟಿದೆ ತಿಳಿಯಿರಿ
Gold Price Cut: ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದ ಬಂಗಾರ, ಬೆಳ್ಳಿ ದರ ಇದೀಗ ದಿಢೀರ್ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಕುಸಿತವಾಗಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ರಿಲೀಫ್ ಸಿಕ್ಕಂತಾಗಿದೆ.
ಒಂದೇ ವಹಿವಾಟಿನ ದಿನದಲ್ಲಿ ಚಿನ್ನದ ದರ 10 ಗ್ರಾಂಗೆ 33,000 ರೂಪಾಯಿಗೂ ಹೆಚ್ಚು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ 10 ಗ್ರಾಂಗೆ 1 ಲಕ್ಷ ರೂಪಾಯಿಗೂ ಅಧಿಕವಾಗಿ ಕುಸಿದಿದೆ. ಇತ್ತೀಚೆಗೆ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಈ ಆಭರಣಗಳ ಬೆಲೆಗಳಲ್ಲಿ ಕಂಡ ಈ ಬದಲಾವಣೆಯಿಂದ ಮದುವೆ ಋತುವಿನ ಮುನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

33,000 ರೂಪಾಯಿಗೂ ಹೆಚ್ಚು ಇಳಿಕೆ: ಜನವರಿ 31ರಂದು ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ 10ಗ್ರಾಂಗೆ ₹1,79,010 ಮತ್ತು 22 ಕ್ಯಾರೆಟ್ ಚಿನ್ನ ₹1,64,110 ದರದಲ್ಲಿ ವಹಿವಾಟು ಇತ್ತು. ಮಲ್ಟಿ ಕಮೋಡಿಟಿ ಎಕ್ಸ್‌ಚೆಂಜ್ (ಎಂಸಿಎಕ್ಸ್)ನಲ್ಲಿ ಏಪ್ರಿಲ್ 2ಕ್ಕೆ ಮುಕ್ತಾಯಗೊಳ್ಳುವ ಚಿನ್ನದ ಫ್ಯೂಚರ್ಸ್‌ಗಳು ಜನವರಿ 29ರಂದು 10 ಗ್ರಾಂಗೆ ₹1,83,962ಕ್ಕೆ ಮುಕ್ತಾಯಗೊಂಡಿದ್ದು, ಮರುದಿನ ಅಂದರೆ, ಜನವರಿ 30ರಂದು 1,50,849 ರೂಪಾಯಿಗೆ ತೀವ್ರವಾಗಿ ಕುಸಿತ ಕಂಡಿತು. ಈ ಕುಸಿತವು ಹೂಡಿಕೆದಾರರನ್ನು ಅಚ್ಚರಿಗೊಳಿಸಿತ್ತು.
ತಜ್ಞರು ಹೇಳುವುದೇನು?: ಕಳೆದ ವಾರ ಚಿನ್ನದ ದರ 10 ಗ್ರಾಂಗೆ ₹1,93,096ಗೆ ಗರಿಷ್ಠ ಮಟ್ಟ ತಲುಪಿದ ಬಳಿಕ, ಈಗ ದಾಖಲೆ ಮಟ್ಟದಿಂದ ಸುಮಾರು ₹42,000ಕ್ಕೂ ಹೆಚ್ಚು ಇಳಿಕೆಯಾಗಿರುವುದು ಹೂಡಿಕೆದಾರರನ್ನು ಅಚ್ಚರಿಗೊಳಿಸಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಇದು ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ಬದಲಾವಣೆಯಾಗಿದ್ದು, ಚಿನ್ನದ ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿದೆ.
ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ದರ
* ದೆಹಲಿ: 24 ಕ್ಯಾರೆಟ್ ₹1,79,010, 22 ಕ್ಯಾರೆಟ್ ₹1,64,110, 18 ಕ್ಯಾರೆಟ್ ₹1,20,330
* ಮುಂಬೈ: 24 ಕ್ಯಾರೆಟ್ ₹1,78,860, 22 ಕ್ಯಾರೆಟ್ ₹1,63,960, 18 ಕ್ಯಾರೆಟ್ ₹1,19,930
* ಅಹಮದಾಬಾದ್: 24 ಕ್ಯಾರೆಟ್ ₹1,78,910, 22 ಕ್ಯಾರೆಟ್ ₹1,64,010, 18 ಕ್ಯಾರೆಟ್ ₹1,19,970
* ಚೆನ್ನೈ: 24 ಕ್ಯಾರೆಟ್ ₹1,78,860, 22 ಕ್ಯಾರೆಟ್ ₹1,63,960, 18 ಕ್ಯಾರೆಟ್ ₹1,19,930
* ಕೋಲ್ಕತ್ತಾ: 24 ಕ್ಯಾರೆಟ್ ₹1,78,860, 22 ಕ್ಯಾರೆಟ್ ₹1,63,960, 18 ಕ್ಯಾರೆಟ್ ₹1,19,930
* ಹೈದರಾಬಾದ್: 24 ಕ್ಯಾರೆಟ್ ₹1,78,860, 22 ಕ್ಯಾರೆಟ್ ₹1,63,960, 18 ಕ್ಯಾರೆಟ್ ₹1,19,930
* ಜೈಪುರ: 24 ಕ್ಯಾರೆಟ್ ₹1,79,010, 22 ಕ್ಯಾರೆಟ್ ₹1,64,110, 18 ಕ್ಯಾರೆಟ್ ₹1,20,330
* ಭೋಪಾಲ್: 24 ಕ್ಯಾರೆಟ್ ₹1,78,910, 22 ಕ್ಯಾರೆಟ್ ₹1,64,010, 18 ಕ್ಯಾರೆಟ್ ₹1,19,970
* ಲಖನೌ: 24 ಕ್ಯಾರೆಟ್ ₹1,79,010, 22 ಕ್ಯಾರೆಟ್ ₹1,64,110, 18 ಕ್ಯಾರೆಟ್ ₹1,20,330
* ಚಂಡೀಗಢ: 24 ಕ್ಯಾರೆಟ್ ₹1,79,010, 22 ಕ್ಯಾರೆಟ್ ₹1,64,110, 18 ಕ್ಯಾರೆಟ್ ₹1,20,330
ಇಷ್ಟು ದಿನಗಳ ಬಳಿಕ ಬಂಗಾರ ದರಲ್ಲಿ ಭಾರೀ ಕುಸಿತ ಕಂಡುಬಂದಿದ್ದಿದೆ. ಇದು ಹೂಡಿಕೆ ಮತ್ತು ಮದುವೆ ಶಾಪಿಂಗ್‌ಗೆ ಇದು ಒಳ್ಳೆಯ ಸಮಯವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಬೆಲೆಗಳಲ್ಲಿ ಮತ್ತಷ್ಟು ಏರಿಳಿತಗಳು ಆಗುವ ಸಾಧ್ಯತೆಯಿದೆ. ಆದ್ದರಿಂದ ಖರೀದಿ ನಿರ್ಧಾರ ಕೈಗೊಳ್ಳುವ ಮೊದಲು ದರಗಳ ಮೇಲೆ ಎಚ್ಚರಿಕೆಯಿಂದ ನಿಗಾ ಇಡುವುದು ಅಗತ್ಯ ಅಂತಲೂ ಗ್ರಾಹಕರಿಗೆ ಸಲಹೆ ನೀಡಿದ್ದಾರೆ.












Click it and Unblock the Notifications