Gold Prices Today: ಬಂದೇ ಬಿಡ್ತು ಅಕ್ಷಯ ತೃತೀಯಾ, ಹೇಗಿದೆ ಇಂದಿನ ಚಿನ್ನ- ಬೆಳ್ಳಿ ಬೆಲೆ?

ನವದೆಹಲಿ, ಮೇ. 06 : ಹಿಂದೂ ಸಮುದಾಯ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾದ ಅಕ್ಷಯ ತೃತೀಯಾ ಇನ್ನೇನು ಮೂರು ದಿನಗಳಲ್ಲಿ ಬರುತ್ತಿದ್ದು, ಜನ ಚಿನ್ನ - ಬೆಳ್ಳಿ ತೆಗೆದುಕೊಳ್ಳಲು ಬೆಲೆ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಈ ಶುಭ ದಿನದಂದು ಚಿನ್ನ ಕೊಳ್ಳುವುದರಿಂದ ಮನೆಯಲ್ಲಿ ಮಂಗಳಕರವಾಗಲಿದೆ ಎಂಬ ನಂಬಿಕೆಯಿದೆ.

ಆದರೆ, ಆಕ್ಷಯ ತೃತೀಯಾ ಹತ್ತಿರ ಬರುತ್ತಿದ್ದಂತೆ ಚಿನ್ನದ ಬೆಲೆ ಮತ್ತೆ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಮೇ 6, 2024 ರ ಸೋಮವಾರದಂದು ಚಿನ್ನದ ಬೆಲೆ ಹೆಚ್ಚಾಗಿದೆ.ದೇಶದ ಹೆಚ್ಚಿನ ನಗರಗಳಲ್ಲಿ 24 ಮತ್ತು 22 ಕ್ಯಾರೆಟ್ ಚಿನ್ನದ ದರಗಳು 100 ರೂಪಾಯಿಯಷ್ಟು ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 71,700 ರೂಪಾಯಿಯಿದೆ.

Gold Rates Today Gold price increased Check Top City Wise Gold Prices In India On May 6th

ಆಕ್ಷಯ ತೃತೀಯಾ ಸಮಯದಲ್ಲಿ ಚಿನ್ನದ ಬೆಲೆ 75,000 ರೂಪಾಯಿಗೆ ಏರಿಕೆಯಾಗುತ್ತದೆ ಎನ್ನಲಾಗಿತ್ತು. ಆದರೆ, ಬೆಲೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಸ್ಥಿರತೆ ಇರುವುದು ಕೂಡ ಆಭರಣ ಪ್ರಿಯರಿಗೆ ಮತ್ತು ಭಕ್ತರಿಗೆ ನೆಮ್ಮದಿ ತಂದಿದೆ. ಇತ್ತೀಚೆಗೆ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಗಳು ಕಡಿಎಮಯಾಗಿದ್ದು, ಬೆಲೆಗಳು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಇನ್ನು, ದೇಶದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 82,900 ರೂಪಾಯಿಯಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಿಂದೆಂದಿಗಿಂತಲೂ ಇಂದು ಗಮನಾರ್ಹ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ವರ್ಷದ ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ಬೆಂಗಳೂರಿನಲ್ಲಿ ದೈನಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 6,605 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,205 ರೂಪಾಯಿಯಿದೆ. ಇದನ್ನು 999 ಚಿನ್ನ ಎಂದೂ ಕರೆಯಲಾಗುತ್ತದೆ.

ಇಂದು ದೇಶದಲ್ಲಿ ಚಿನ್ನದ ಬೆಲೆ

* ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,584 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,182 ರೂಪಾಯಿ ಆಗಿದೆ.

* ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,599 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7, 199 ರೂಪಾಯಿಯಿದೆ.

* ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 6, 599 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,197 ರೂಪಾಯಿಯಾಗಿದೆ.

Gold Rates Today Gold price increased Check Top City Wise Gold Prices In India On May 6th

*ಅಹಮದಾಬಾದ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,589 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,187 ರೂಪಾಯಿಯಿದೆ.

* ಮುಂಬೈನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,584 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,182 ರೂಪಾಯಿ ಇದೆ.

* ಕೋಲ್ಕತ್ತಾದಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,584 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,182 ರೂಪಾಯಿ ಆಗಿದೆ.

*ಹೈದರಾಬಾದ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,584 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,182 ರೂಪಾಯಿ ಆಗಿದೆ.

* ಗುರುಗ್ರಾಮ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,599 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,197 ರೂಪಾಯಿಯಿದೆ.

* ಸೂರತ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,589 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,187 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+