ಚಿನ್ನ, ಬೆಳ್ಳಿ ಏರಿಕೆ, ಯಾವ ನಗರಗಳಲ್ಲಿ ಎಷ್ಟು ದರ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡಿದೆ. ಮಂಗಳವಾರ (ಮೇ.11) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 179ರು ನಂತೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಪ್ರತಿ 1 ಕೆ.ಜಿಗೆ 826 ರು ಏರಿಕೆಯಾಗಿದೆ. ಆದರೆ, ಅಕ್ಷಯ ತೃತೀಯ ವೇಳೆ ಏರಿಳಿತ ಹೆಚ್ಚಾಗುವ ಸೂಚನೆ ಸಿಕ್ಕಿದೆ.
ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳ ಮೊದಲ ವಾರ ಹೆಚ್ಚಿನ ಬದಲಾವಣೆ ಕಂಡಿಲ್ಲ. ಆರಂಭಿಕ ವಹಿವಾಟಿನಲ್ಲಿ ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0,15%ರು ನಷ್ಟು ಏರಿಕೆಯಾಗಿ 47, 997ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 71,530 ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.12ರಷ್ಟು ಏರಿಕೆಯಾಗಿ 1,833.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಏರಿಕೆಯಾಗಿ 27.30ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 44,700 (90 ರು ಏರಿಕೆ) 48,670(100 ರು ಏರಿಕೆ)
ಮೇ 10: 44,610 (---) 48,670(---)
ಮೇ 9: 44,610 (10 ರು ಏರಿಕೆ) 48,670(10ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 46,100 (100 ರು ಏರಿಕೆ) 50,100 (100 ರು ಏರಿಕೆ)
ಮೇ 10: 46,000 (--) 50,000 (---)
ಮೇ 9: 46,000 (10 ರು ಏರಿಕೆ) 50,000 (+10)
ಮೇ 8: 45,990 (+80 ರು) 49,990 (+40ರು)
ಮೇ 7: 45,910 (+ 310 ರು ಏರಿಕೆ) 49,950 (+210ರು)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 45,200 (150 ರು ಏರಿಕೆ) 49,310 (160 ರು ಏರಿಕೆ)
ಮೇ 10: 45,050 (-60 ರು) 49,150 (-60 ರು)
ಮೇ 9: 45,110 (+10 ರು) 49,210 (+10 ರು)
ಮೇ 8: 45,100 (+130 ರು) 49,200 (+140ರು)
ಮೇ 7: 44,970 (+470 ರು) 49,060 (+570 ರು)
ಬೆಳ್ಳಿ: 1 ಕೆ.ಜಿಗೆ 76,000ರುಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 44,910 (---) 45,910 (---)
ಮೇ 10: 44,910 (---) 45,910 (---)
ಮೇ 9: 44,910 (10 ರು ಏರಿಕೆ) 45,910 (10 ರು ಏರಿಕೆ)
ಮೇ 8: 44,900 (+100 ರು) 49,900 (+100ರು)
ಮೇ 7: 44,800 (+510 ರು) 45,800 (+510ರು)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 44,700 (90 ರು ಏರಿಕೆ) 48,770 (100 ರು ಏರಿಕೆ)
ಮೇ 10: 44,610 (---) 48,670 (-510)
ಮೇ 9: 44,610 (10 ರು ಏರಿಕೆ) 49,180 (10 ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಬೆಳ್ಳಿ: 1 ಕೆ.ಜಿಗೆ 76,000ರುಪಾಯಿ

ಕೋಲ್ಕತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 46,000 (10 ರು ಏರಿಕೆ) 49,750 (100 ರು ಏರಿಕೆ)
ಮೇ 10: 45,990 (-10 ರು) 49,650 (-10)
ಮೇ 9: 46,000 (+10 ರು) 49,660 (+10 ರು)
ಮೇ 8: 45,990 (+10 ರು) 49,650 (+10 ರು)
ಮೇ 7: 46,850 (+510 ರು) 49,640 (+510ರು)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ












Click it and Unblock the Notifications