Gold Rate Sep 10: ಚಿನ್ನದ ಬೆಲೆ ದಿಢೀರ್ ಏರಿಕೆ, ಕಾರಣವೇನು ? ಇಂದಿನ ಚಿನ್ನ & ಬೆಳ್ಳಿ ಬೆಲೆ ವಿವರ
ಚಿನ್ನ ಪ್ರಿಯರಿಗೆ ಮತ್ತೆ ಶಾಕ್ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಚಿನ್ನದ ಬೆಲೆಯು ಭರ್ಜರಿ ಇಳಿಕೆ ಕಂಡಿತ್ತು. ಇದೀಗ ಮತ್ತೆ ಚಿನ್ನದ ಬೆಲೆ ಹೆಚ್ಚಳ ಶುರುವಾಗಿದೆ. ನೇಪಾಳದಲ್ಲಿ ಗಲಭೆ ಹಾಗೂ ಅಮೆರಿಕಾ ಮತ್ತು ಭಾರತದ ನಡುವೆ ಸುಧಾರಿಸದ ಪರಿಸ್ಥಿತಿ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆಯು ಹೆಚ್ಚಳವಾಗುತ್ತಲ್ಲೇ ಇದೆ. ಇದೀಗ ಚಿನ್ನದ ಬೆಲೆಯು ಬುಧವಾರ ಸೆಪ್ಟೆಂಬರ್ 10ರಂದು ಹೊಸ ದಾಖಲೆ ಬರೆದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಯು ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಈ ತಿಂಗಳು ಪ್ರಾರಂಭದಿಂದಲೂ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಸಾಗಿದೆ. ಇದೀಗ ಭೋಗೊಳಿಕವಾಗಿ ವಿವಿಧ ದೇಶಗಳಲ್ಲಿ ಏರ್ಪಡುತ್ತಿರುವ ಅಸ್ಥಿರತೆಯು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವುದು ಅಲ್ಲಿನ ಸರ್ಕಾರವೇ ಬೀಳುವಂತೆ ಮಾಡಿದೆ. ಇನ್ನು ಅಮೆರಿಕಾ ಮತ್ತು ಭಾರತದ ನಡುವೆ ತೆರಿಗೆ ಸಮರ ಮುಂದುವರಿದಿದೆ. ಈ ಹಂತದಲ್ಲಿ ಭಾರತ ಮತ್ತು ಅಮೆರಿಕಾದ ನಡುವೆ ರಾಜಿಸಂಧಾನವಾಗುವ ಲಕ್ಷಣಗಳು ಕಾಣಿಸುತ್ತಿವೆಯಾದರೂ ಟ್ರಂಪ್ ಹುಚ್ಚಾಟದಿಂದ ಏನು ಬೇಕಾದರೂ ಬದಲಾಗುವ ಸಾಧ್ಯತೆ ಇದೆ.

ಭಾರತದಲ್ಲೂ ಜಿಎಸ್‌ಟಿ ಬದಲಾವಣೆ ಈ ತಿಂಗಳ ಮೂರನೇ ವಾರದಿಂದ ಜಾರಿಗೆ ಬರಲಿದೆ. ಮಹತ್ವದ ಬೆಳವಣಿಗೆಗಳು ಹಾಗೂ ಕೆಲವೊಂದು ಗೊಂದಲಗಳ ಕಾರಣಕ್ಕಾಗಿ ಜನ ಚಿನ್ನದ ಮೇಲೆ ಹೂಡಿಕೆ ಹಾಗೂ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಈ ಕಾರಣದಿಂದ ಸಹಜವಾಗಿಯೇ ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದೆ. ಸೆಪ್ಟೆಂಬರ್ 10ರ 18, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಬುಧವಾರ ಪ್ರತಿ ಗ್ರಾಂಗೆ 8,288 ರೂಪಾಯಿ ಆಗಿದೆ. 10 ಗ್ರಾಂಗೆ 82,880 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯು 16 ರೂಪಾಯಿ ಹಾಗೂ 10 ಗ್ರಾಂಗೆ 160 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂನ ಚಿನ್ನದ ಬೆಲೆಯು 10,130 ರೂಪಾಯಿ ಹಾಗೂ 10 ಗ್ರಾಂಗೆ 1,01,300 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 20 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಒಂದು ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 11,051 ರೂಪಾಯಿ ಹಾಗೂ 10 ಗ್ರಾಂಗೆ 1,10,509 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 21.90 ರೂಪಾಯಿ ಹಾಗೂ 10 ಗ್ರಾಂಗೆ 219 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ: ಬೆಳ್ಳಿಯ ಬೆಲೆಯಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ. ಬೆಳ್ಳಿಯ ಬೆಲೆಯು ಪ್ರತಿ ಗ್ರಾಂಗೆ 130 ರೂಪಾಯಿ ಹಾಗೂ ಒಂದು ಕೆ.ಜಿಗೆ 1,30,000 ಸಾವಿರ ರೂಪಾಯಿ ಆಗಿದೆ.












Click it and Unblock the Notifications