Gold Price Today: ಚಿನ್ನದ ಬೆಲೆ ಭರ್ಜರಿ 7500 ರೂ. ಏರಿಕೆ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ
ಬೆಂಗಳೂರು, ಡಿಸೆಂಬರ್ 10: ಚಿನ್ನಾಭರಗಳ ದರದಲ್ಲಿ ಏರಿಕೆ ಮುಂದುವರಿದಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಹಾಗೂ ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಆಗಿದೆ. ಸದ್ಯ ಮದುವೆಯ ಸೀಸನ್ ಆಗಿದ್ದರಿಂದ ಬಂಗಾರಕ್ಕೆ ಬೇಡಿಕೆ ಏರುಗತಿಯಲ್ಲಿದೆ. ಗರಿಷ್ಠ ಮಟ್ಟದಲ್ಲಿ ಬೆಲೆ ಏರಿಕೆ ಆದರೂ ಸಹಿತ ಚಿನ್ನ ಖರೀದಿಯಲ್ಲಿ ಗ್ರಾಹಕರ ನಿರತರಾಗಿದ್ದಾರೆ. ಹಾಗದರೆ ಹೊಸ ವರ್ಷ ಎದುರು ನೋಡುತ್ತಿರುವ ಗ್ರಾಹಕರಿಗಾಗಿ ಇಂದಿನ ಚಿನ್ನ-ಬೆಳ್ಳಿ ದರ ಮಾಹಿತಿ, ಪಟ್ಟಿ ಇಲ್ಲಿ ನೀಡಲಾಗಿದೆ.
ಬೆಳ್ಳಿಯ 100 ಗ್ರಾಂಗೆ 450 ರೂಪಾಯಿಯಂತೆ 1ಕೆಜಿ ಬೆಳ್ಳಿಗೆ 4500 ರೂಪಾಯಿ ಏರಿಕೆ ಆಗಿದೆ. ಇತ್ತ ಬಂಗಾರದ ದರವು ಹತ್ತು ಗ್ರಾಂಗೆ 750 ರೂಪಾಯಿಯಂತೆ 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 7500 ರೂಪಾಯಿ ಒಂದೇ ದಿನದಲ್ಲಿ ಏರಿಕೆ ಕಂಡಿದೆ. ಚಿನ್ನವು ವರ್ಷಾಂತ್ಯದ ಹೊತ್ತಿಗೆ ಗ್ರಾಹಕ ಕೈ ಸುಡುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆದರೂ ಅಚ್ಚರಿ ಪಡಬೇಕಿಲ್ಲ.

ಇತ್ತೀಚೆಗೆ ಇರಾನ್, ಇರಾಕ್, ಉಕ್ರೇನ್, ರಷ್ಯಾದಂತಹ ಕೆಲ ದೇಶಗಳ ಮಧ್ಯದ ವಾರ್ ಏರ್ಪಟ್ಟು ನಿರಂತರವಾಗಿ ಮುಂದುವರಿದ ಪರಿಣಾಮ ಅಂತಾರಾಷ್ಟ್ರೀಯ ಚಿನ್ನದ ಮಾರುಕಟ್ಟೆ, ದರಗಳ ಮೇಲೆ ಪ್ರಭಾವ ಉಂಟಾಗಿದೆ ಎಂದು ತಿಳಿದು ಬಂದಿದೆ.
ವಾರಗಳ ಹಿಂದೆ ಚಿನ್ನದ ಬೆಲೆಯಲ್ಲಿ 10 ಗ್ರಾಂ ಸಾವಿರ ಲೆಕ್ಕದಲ್ಲಿ ಏರಿಕೆ ಆಗಿತ್ತಾದರೂ ನಂತರ ಕೊಂಚ ಇಳಿಕೆ ಆಯಿತು. ಭವಿಷ್ಯದಲ್ಲಿ ಚಿನ್ನದ ಬೆಲೆಯು 01 ಲಕ್ಷ ರೂಪಾಯಿ ದಾಟುವ ಸಂಭವವಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದಕ್ಕೆ ಅನೇಕ ಕಾರಣಗಳನ್ನು ಅವರು ಉಲ್ಲೇಖಿಸಿದ್ದಾರೆ.
ದೇಶ ಮತ್ತು ನಗರವಾರು ಚಿನ್ನ-ಬೆಳ್ಳಿ ದರಪಟ್ಟಿ
ಭಾರತದಲ್ಲಿ ಇಂದು ಡಿಸೆಂಬರ್ 10ರಂದು ಚಿನ್ನದ ಬೆಲೆಯು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 72,050 ರೂಪಾಯಿ, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 78600 ರೂಪಾಯಿ ಇದೆ. ಇನ್ನು ಬೆಳ್ಳಿಯ ದರ 10 ಗ್ರಾಂ 965 ರೂಪಾಯಿ ಇದೆ. ಚಿನ್ನದ ದರ ಬೆಂಗಳೂರಿನಲ್ಲಿ ಇದೇ ಮೇಲಿನ ದರದಲ್ಲಿ ಮಾರಾಟವಾಗುತ್ತಿದೆ.

ದೇಶದ ವಿವಿಧ ನಗರವಾರು 10 ಗ್ರಾಂ ಚಿನ್ನದ (22 ಕ್ಯಾರಟ್) ದರ
ಬೆಂಗಳೂರು - 72,050 ರೂಪಾಯಿ
ನದೆದೆಹಲಿ: 72,200 ರೂಪಾಯಿ
ಕೋಲ್ಕತ್ತಾ: 72,050 ರೂಪಾಯಿ
ಅಹ್ಮದಾಬಾದ್: 72,100 ರೂಪಾಯಿ
ಚೆನ್ನೈ: 72,050 ರೂಪಾಯಿ
ಮುಂಬೈ: 72,050 ರೂಪಾಯಿ
ಕೇರಳ: 72,050 ರೂಪಾಯಿ
ಭುವನೇಶ್ವರ್: 72,050 ರೂಪಾಯಿ
ಜೈಪುರ್: 72,200 ರೂಪಾಯಿ
ಇನ್ನೂ ವಿದೇಶಗಳ ಮಾಹಿತಿ ನೋಡುವುದಾದರೆ, 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಓಮನ್ ನಲ್ಲಿ 70,270 ರೂ.,
ಮಲೇಷಿಯಾದಲ್ಲಿ 69,520 ರೂ. ದುಬೈನಲ್ಲಿ 68,970 ರೂ., ಅಮೆರಿಕದಲ್ಲಿ 66,150 ರೂಪಾಯಿ ಹಾಗೂ ಸಿಂಗಾಪುರ ದೇಶದಲ್ಲಿ 68,760 ರೂಪಾಯಿ ಇದೆ.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಸಹಿತ ಖರೀದಿದಾರ ಸಂಖ್ಯೆಯಲ್ಲಿ ಇಳಿಕೆ ಆಗುತ್ತಿಲ್ಲ. ಭಾರತದಂತಹ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಚಿನ್ನಕ್ಕೆ ಭರ್ಜರಿ ಬೇಡಿಕೆ ಇದೆ.












Click it and Unblock the Notifications