Get Updates
Get notified of breaking news, exclusive insights, and must-see stories!

Gold Rate Today Nov 28: ಚಿನ್ನ ಖರೀದಿಗೆ ಈ ದಿನ ಒಳ್ಳೆಯದೇ? ಎಷ್ಟಿದೆ ಇಂದಿನ ದರ?

ಚಿನ್ನದ ದರಗಳು ಹಾವು ಏಣಿ ಆಟ ಆಡುತ್ತಿದೆ. ಎರಡು ದಿನಗಳ ಹಿಂದೆ ಚಿನ್ನದ ದರವು ಭಾರೀ ಏರಿಕೆ ಕಾಣುವ ಮೂಲಕ ಖರೀದಿದಾರರಿಗೆ ಶಾಕ್‌ ನೀಡಿತ್ತು. ಆದರೆ ಗುರುವಾರದಂದು ದರಗಳು ತುಸು ಇಳಿಕೆ ಕಂಡಿದ್ದರಿಂದ ನಿರಾಳರಾಗಿದ್ದರು. ಶುಕ್ರವಾರ ಕೂಡ ಚಿನ್ನದ ದರಗಳು ಎಷ್ಟಿದೆ ಎಂಬ ಕುತೂಹಲ ಜನಸಾಮಾನ್ಯರಲ್ಲಿದೆ. ಅನೇಕರು ಶುಭ ಸಂದರ್ಭಗಳಿಗಾಗಿ ಶುಕ್ರವಾರದಂದೇ ಚಿನ್ನಾಭರಣ ಖರೀದಿಸುವವರೂ ಇದ್ದಾರೆ. ಹೀಗಾಗಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿ ತಿಳಿಯಬಹುದು.

ಚಿನ್ನದ ದರವು ಮತ್ತೆ ದಿಢೀರ್‌ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ನೋಡುವುದಾದರೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,846, 22 ಕ್ಯಾರೆಟ್ ಚಿನ್ನಕ್ಕೆ ₹11,775 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,634 ಇದೆ. ನಿನ್ನೆಗಿಂತ ಗ್ರಾಂ ಮೇಲೆ 71 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹12,846, 8 ಗ್ರಾಂ ಚಿನ್ನದ ದರ ₹1,02,768, 10 ಗ್ರಾಂ ಚಿನ್ನದ ದರ ₹1,28,460 ಹಾಗೂ 100 ಗ್ರಾಂ ಚಿನ್ನದ ದರವು ₹12,84,600 ಆಗಿದ್ದು, ನಿನ್ನೆಗಿಂತ ₹7,100 ಹೆಚ್ಚಾಗಿದೆ.

Gold Rate Today November 28 Latest Gold Silver Prices Bengaluru India

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,775 ಆಗಿದ್ದು, ನಿನ್ನೆಗಿಂತ ₹65 ರೂಪಾಯಿವರೆಗೆ ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರವು ₹94,200, 10 ಗ್ರಾಂ.ಚಿನ್ನದ ದರ ₹1,17,750 ಹಾಗೂ 100 ಗ್ರಾಂ ಚಿನ್ನದ ದರ ₹11,77,500 ಆಗಿದ್ದು, ₹6,500ವರೆಗೆ ಏರಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 1 ₹9,634 ಆಗಿದ್ದು, ಒಂದೇ ದಿನದಲ್ಲಿ ಗ್ರಾಂ ಮೇಲೆ ₹53 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರ ₹77,072, 10 ಗ್ರಾಂ ಚಿನ್ನದ ದರ ₹96,340 ಹಾಗೂ 100 ಗ್ರಾಂ.ಚಿನ್ನದ ದರ ₹9,63,400 ಇದೆ. ನಿನ್ನೆಗಿಂತ ದರ ₹5,300 ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ನವೆಂಬರ್‌ 28, ₹12,846 ; ₹11,775

ನವೆಂಬರ್‌ 27, ₹12,775 ; ₹11,710

ನವೆಂಬರ್‌ 26, ₹12,791 ; ₹11,725

ನವೆಂಬರ್‌ 25, ₹12,704 ; ₹11,645

ನವೆಂಬರ್‌ 24, ₹12,513 ; ₹11,470

ನವೆಂಬರ್‌ 23, ₹12,584 ; ₹11,535

ನವೆಂಬರ್‌ 22, ₹12,584 ; ₹11,535

ನವೆಂಬರ್‌ 21, ₹12,398 ; ₹11,365

ನವೆಂಬರ್‌ 20, ₹12,426 ; ₹11,390

ನವೆಂಬರ್‌ 19, ₹12,486 ; ₹11,445

ನವೆಂಬರ್‌ 18, ₹12,366 ; ₹11,335

ನವೆಂಬರ್‌ 17, ₹12,540 ; ₹11,495

ನವೆಂಬರ್‌ 16, ₹12,508 ; ₹11,465

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಕೂಡ ಹೆಚ್ಚಾಗಿದ್ದು, ಪ್ರತಿ ಗ್ರಾಂಗೆ ₹176 ಮತ್ತು ಪ್ರತಿ ಕಿಲೋಗ್ರಾಂಗೆ ₹1,76,000 ಆಗಿದೆ. ನಿನ್ನೆಗಿಂತ ದರ ಗ್ರಾಂ ಮೇಲೆ 3 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,720 ಮತ್ತು 10 ಗ್ರಾಂಗೆ ₹47,200 ಆಗಿದೆ. ನಿನ್ನೆಗಿಂತ ಗ್ರಾಂ ಮೇಲೆ 98 ರೂಪಾಯಿ ಹೆಚ್ಚಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+