ಅ.24ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 24: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 24 ರಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಳಿತ ಕಂಡಿದೆ. ದೆಹಲಿ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ 100 ರು ನಂತೆ ಏರಿಕೆ ಕಂಡಿದೆ.
ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,910 ರೂ ಆಗಿದ್ದು, 10 ರೂ. ಏರಿಕೆಯಾಗಿದೆ. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 51,170 ರೂ. ಆಗಿದ್ದು 10 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44, 760ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,830 ರೂ. ಇದೆ.
ಜಾಗತಿಕ ರಾಜಕೀಯ ವಿದ್ಯಮಾನ, ಕಲ್ಲಿದ್ದಲು ಕೊರತೆ, ಜಾಗತಿಕ ವಿದ್ಯುತ್ ಪೂರೈಕೆ ವ್ಯತ್ಯಯ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್ ತೆರವು, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 5 ದಿನಗಳಲ್ಲಿ ನಿಮ್ಮ ನಗರದಲ್ಲಿ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟಾಗಿತ್ತು ಎಂಬುದರ ವಿವರ ಮುಂದಿದೆ..

ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ
ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಬೆಂಗಳೂರಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 24: 44, 760 ರೂ (10 ರೂ ಏರಿಕೆ)-- 48,830 ರೂ(10 ರೂ ಏರಿಕೆ)
ಅಕ್ಟೋಬರ್ 23: 44, 750 ರೂ---48,820 ರೂ
ಅಕ್ಟೋಬರ್ 22: 44, 550 ರೂ--- 48,600 ರೂ
ಅಕ್ಟೋಬರ್ 21: 44, 550 ರೂ---48,600ರೂ
ಅಕ್ಟೋಬರ್ 20: 44, 300 ರೂ---48,330 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ದೆಹಲಿ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 24: 46,910ರೂ(10 ರೂ ಏರಿಕೆ)-- 51,170 ರೂ (10 ರೂ ಏರಿಕೆ)
ಅಕ್ಟೋಬರ್ 23: 46,900ರೂ, --51,160ರೂ
ಅಕ್ಟೋಬರ್ 22: 46,700ರೂ,-- 50,950ರೂ
ಅಕ್ಟೋಬರ್ 21: 46,610 ರೂ,-- 50,850ರೂ
ಅಕ್ಟೋಬರ್ 20: 46,600 ರೂ,-- 50,840ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600 ರೂಪಾಯಿ

ಮುಂಬೈ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 24: 46,660ರೂ,(10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಅಕ್ಟೋಬರ್ 23: 46,650ರೂ,(190 ರೂ ಏರಿಕೆ) 47,650 ರೂ(190 ರೂ ಏರಿಕೆ)
ಅಕ್ಟೋಬರ್ 22: 46,460ರೂ, --47,460 ರೂ -
ಅಕ್ಟೋಬರ್ 21: 46,470ರೂ-- 47,470 ರೂ
ಅಕ್ಟೋಬರ್ 20: 46,490 ರೂ--- 47,490 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 24: 44,760 ರೂ,(10 ರೂ ಏರಿಕೆ) --48, 830 ರೂ (10 ರೂ ಏರಿಕೆ)
ಅಕ್ಟೋಬರ್ 23: 44,750 ರೂ,--- 47,450 ರೂ
ಅಕ್ಟೋಬರ್ 22: 44,550 ರೂ, ---48,600ರೂ
ಅಕ್ಟೋಬರ್ 21: 44,550 ರೂ,---- 48,600ರೂ
ಅಕ್ಟೋಬರ್ 20: 44,450 ರೂ,--- 48,490 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,900 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 24: 47, 010 ರೂ,(10 ರೂ ಏರಿಕೆ) -- 49,710 ರೂ (10 ರೂ ಏರಿಕೆ)
ಅಕ್ಟೋಬರ್ 23: 47,000 ರೂ--- 49,700 ರೂ
ಅಕ್ಟೋಬರ್ 22: 46,950 ರೂ----49,650 ರೂ
ಅಕ್ಟೋಬರ್ 21: 46,900 ರೂ, ---49,600 ರೂ
ಅಕ್ಟೋಬರ್ 20: 46,900 ರೂ, ---49,600 ರೂ
ಬೆಳ್ಳಿ: 1 ಕೆ.ಜಿಗೆ 65,600 ರೂಪಾಯಿ












Click it and Unblock the Notifications