Gold Price Today: ಸತತ 4ನೇ ದಿನವು ಬಂಗಾರದ ದರ ಹೆಚ್ಚಳ: ಶೀಘ್ರವೇ ₹1 ಲಕ್ಷಕ್ಕೆ ಏರಿಕೆ ಸಾಧ್ಯತೆ

ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ ಆಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನಾಭರಣಗಳ ಬೆಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಿದೆ. ಬೆಳ್ಳಿ ದರದಲ್ಲಿ ಕೊಂಚವು ಬದಲಾವಣೆ ಆಗಿಲ್ಲ. ಸ್ಥಿರವಾಗಿದೆ. ಇದಕ್ಕೆ ವಿರುದ್ಧ ಎಂಬಂತೆ ಬಂಗಾರದ ದರವು ಈ ವಾರ ಏರುಗತಿಯಲ್ಲಿ ಸಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ 01 ಲಕ್ಷ ರೂಪಾಯಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಎಂಥದ್ದೇ ಸಮಾರಂಭಗಳು ಇದ್ದರೂ ಚಿನ್ನ ಬೇಕೇ ಬೇಕು. ಚಿನ್ನ ಖರೀದಿಗೆ ಮಹಿಳೆಯರು, ಉದ್ಯಮಿಗಳು, ಶ್ರೀಮಂತರು, ಬಡವರು, ಮಧ್ಯಮ ವರ್ಗದವರು ಎಂಬುದಿಲ್ಲ. ವರ್ಷಪೂರ್ತಿ ಚಿನ್ನ ಖರೀದಿ ನಡೆಯುತ್ತಲೇ ಇರುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಒಂದೆಡೆಯಾದರೆ, ಚಿನ್ನ ಖರೀದಿಸಲೆಂದೇ ಚೀಟಿ ಹಾಕುವವರು, ಹಣ ಕೂಡಿಡುವವರು ಇದ್ದಾರೆ. ಅಷ್ಟರ ಮಟ್ಟಿಗೆ ಭಾರತದಲ್ಲಿ ಚಿನ್ನದ ಮೇಲೆ ಮೋಹ, ಆಸೆ ಇದೆ. ಹೀಗಾಗಿಯೇ ಬೇಡಿಕೆ ತಗ್ಗುತ್ತಿಲ್ಲ ಎನ್ನಬಹುದು.

Gold Rate Today Gold Price Increased on Feb 20th Silver Price details Here

ಬದಲಾದ ಚಿನ್ನದ ದರ: ನಿರಂತರ ಹೆಚ್ಚಳ-ಅಂಕಿಸಂಖ್ಯೆ

ಸದ್ಯ ಕರ್ನಾಟಕ ಸೇರಿದಂತೆ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆಯು ಹೆಚ್ಚಾಗುತ್ತಿದೆ. ಚಿನ್ನದ ಬೆಲೆಯಲ್ಲಿ 3900 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 87, 650 ರೂಪಾಯಿ ಇದ್ದದ್ದು, ಇಂದು ಗುರುವಾರ 88,040 ರೂಪಾಯಿಗೆ ಏರಿಕೆ ಆಗಿದೆ. ಇನ್ನೂ 100 ಗ್ರಾಂ ಇದೇ ಬಂಗಾರಕ್ಕೆ 8,76,500 ರೂ.ನಿಂದ 8,80,400 ರೂಪಾಯಿಗೆ ಏರಿಕೆ ಆಗಿದ್ದು, ಒಟ್ಟು 3900 ರೂ. ಹೆಚ್ಚಾಗಿದೆ.

ಇನ್ನೂ 22 ಕ್ಯಾರಟ್ ಚಿನ್ನವು 10 ಗ್ರಾಂ ಗೆ 80,350 ರೂ.ರಿಂದ 80,700 ರೂಪಾಯಿಗೆ ಏರಿಕೆ ಆಗಿದ್ದು, 350 ರೂ. ಹೆಚ್ಚಾಗಿದೆ. ಇದೇ ಚಿನ್ನಕ್ಕೆ 100 ಗ್ರಾಂ ಬೆಲೆ 8,03,500 ರೂ.ನಿಂದ 8,07,000 ರೂಪಾಯಿ ಹೆಚ್ಚಾಗಿದೆ. ಇದರಿಂದ ಬರೋಬ್ಬರಿ 3500 ರೂಪಾಯಿ ಹೆಚ್ಚಾದಂತಾಗಿದೆ.

ಬೆಂಗಳೂರಿನಲ್ಲಿ ಇಂದು ಬೆಳ್ಳಿ ಪ್ರತಿ ಗ್ರಾಂಗೆ 100.50 ರೂಪಾಯಿ ಇದೆ. ಪ್ರತಿ ಕೆ.ಜಿ ಬೆಳ್ಳಿಗೆ 1,00,500 ರೂಪಾಯಿ ಇದೆ. ಕಳೆದ ಮೂರು ದಿನಗಳಿಂದ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗಾಗ ಬದಲಾವಣೆ ಆಗಿತ್ತು. ಈಗ ಆಗಿಲ್ಲ. ಭವಿಷ್ಯದಲ್ಲಿ ಚಿನ್ನ ಬೆಳ್ಳಿ ದರ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

Gold Rate Today Gold Price Increased on Feb 20th Silver Price details Here

ಈ ದರವು ಆಯ ನಗರ, ರಾಜ್ಯಗಳಲ್ಲಿ ವೇಸ್ಟೇಜ್, ಇತರ ಶುಲ್ಕ ಸೇರಿ ದರದಲ್ಲಿ ಕೊಂಚ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ.

ಚಿನ್ನದ ಬೆಲೆ ಒಂದು ಲಕ್ಷಕ್ಕೆ ಏರಿಕೆ ಆಗುತ್ತಾ?

ಬಂಗಾರದ ಬೇಡಿಕೆಯಂತೆ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಸದ್ಯ ಚಿನ್ನದ ಬೆಲೆಯು 10 ಗ್ರಾಂಗೆ 90,000 ರೂಪಾಯಿ ಆಸುಪಾಸಿನಲ್ಲಿದೆ. ಬೇಡಿಕೆ ಹೀಗೆ ಹೆಚ್ಚಾಗುತ್ತಾ ಹೋದಲ್ಲಿ, ಮುಂದಿನ ಕೆಲವು ತಿಂಗಳಲ್ಲಿ ಒಂದು ಲಕ್ಷ ಗಡಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಈಗಾಗಲೇ ಕಳೆದ ವರ್ಷದಿಂದ ಚಿನ್ನದಲ್ಲಿ ದಿಢೀರನೇ 7000 ರೂಪಾಯಿವರೆಗೆ ಏರಿಕೆ ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಒಮ್ಮೆ ಇದೇ ಪ್ರಮಾಣದಲ್ಲಿ ದರ ಹೆಚ್ಚಾದರೆ, ಚಿನ್ನದ ಬೆಲೆ ಒಂದು ಲಕ್ಷ ಸಮೀಪುತ್ತದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+