Gold Rate Today: ಇತಿಹಾಸದಲ್ಲೇ ಚಿನ್ನದ ಬೆಲೆ ಹೊಸ ದಾಖಲೆ!

Gold Rate Today: ಇತಿಹಾಸದಲ್ಲೇ ಚಿನ್ನದ ಬೆಲೆಯು ಹೊಸ ದಾಖಲೆ ಬರೆದಿದೆ. ಇಷ್ಟು ವರ್ಷಗಳ ಕಾಲ ಕಾಣದಷ್ಟು ಬೆಲೆ ಚಿನ್ನಕ್ಕೆ ಬಂದಿದೆ. ಚಿನ್ನ ಪ್ರಿಯರು ಚಿನ್ನ ಖರೀದಿ ಮಾಡುವುದರಿಂದ ದೂರವೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಚಿನ್ನದ ಬೆಲೆಯು ಕಳೆದ ವಾರವಷ್ಟೇ ಇಳಿಕೆಯ ಹಾದಿಯಲ್ಲಿ ಇತ್ತು. ಆದರೆ, ಮೂರು ದಿನಗಳ ಹಿಂದೆ ಏಕಾಏಕಿ 3,000 ಸಾವಿರ ರೂಪಾಯಿ ಏರಿಕೆಯಾಗುವ ಮೂಲಕ ಶಾಕ್‌ ಕೊಟ್ಟಿತ್ತು. ಇದೀಗ ಮತ್ತೆ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದ್ದು. ಚಿನ್ನ ಪ್ರಿಯರು ಚಿನ್ನ ಖರೀದಿಗೆ ಒಂದಕ್ಕೆ ಎರಡು ಬಾರಿ ವಿಚಾರ ಮಾಡುವಂತೆ ಆಗಿದೆ.

ಚಿನ್ನದ ಬೆಲೆಯು 1 ಲಕ್ಷದ ಸಮೀಪಕ್ಕೆ ಬಂದಿದೆ. ಇನ್ನು ಚಿನ್ನದ ಬೆಲೆಯು ವಾರಾಂತ್ಯದಲ್ಲಿ 95,670 ರೂಪಾಯಿ ಆಗಿದೆ. 1 ಲಕ್ಷ ರೂಪಾಯಿಗೆ 3,500 ಸಾವಿರ ಮಾತ್ರ ಬಾಕಿ ಇದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ರಿಟರ್ನ್‌ ಟ್ಯಾಕ್ಸ್ ಪಾಲಿಸಿ ಜಾರಿ ಮಾಡಿದ ಮೇಲೆ ಚಿನ್ನದ ಬೆಲೆಯು ಏರುಪೇರಾಗುತ್ತಿತ್ತು. ಇದೀಗ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಏಪ್ರಿಲ್‌ 13ರ (ವಾರಾಂತ್ಯ ಭಾನುವಾರ) ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

Gold Rate Today Gold Price Hits New Record in History

18 ಕ್ಯಾರೆಟ್‌ ಚಿನ್ನದ ಬೆಲೆ: ವಾರಾಂತ್ಯದಲ್ಲಿ 18 ಕ್ಯಾರೆಟ್‌ ಚಿನ್ನದ ಬೆಲೆಯು 1 ಗ್ರಾಂಗೆ 7,176 ರೂಪಾಯಿ ಆಗಿದೆ. 10 ಗ್ರಾಂಗೆ 71,760 ರೂಪಾಯಿ ಆಗಿದೆ.

22 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಭರ್ಜರಿ ಏರಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆಯು ಏಪ್ರಿಲ್‌ 13ರಂದು ಪ್ರತಿ 1 ಗ್ರಾಂಗೆ 8,770 ರೂಪಾಯಿ ಆಗಿದೆ. 10 ಗ್ರಾಂಗೆ 87,700 ರೂಪಾಯಿ ಆಗಿದೆ.

Gold Rate Today Gold Price Hits New Record in History

24 ಕ್ಯಾರೆಟ್‌ ಚಿನ್ನ: 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಸಹ ಏರಿಕೆಯಾಗಿದೆ. 24 ಕ್ಯಾರೆಟ್‌ ಚಿನ್ನ 1 ಗ್ರಾಂಗೆ 9,567 ರೂಪಾಯಿ ಆಗಿದೆ. 10 ಗ್ರಾಂಗೆ 95,670 ರೂಪಾಯಿ ಆಗಿದೆ.

Take a Poll

ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹೊಸ ಆರ್ಥಿಕ ನೀತಿಗಳು ವಿಶ್ವದಾದ್ಯಂತ ಭಾರೀ ಸಂಕಷ್ಟವನ್ನು ತಂದೊಡ್ಡಿವೆ. ಅಮೆರಿಕದ ಆರ್ಥಿಕ ನೀತಿಯಿಂದ ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಆರ್ಥಿಕ ಲೆಕ್ಕಾಚಾರ ತಲೆಕೆಳಗಾಗಿದೆ. ಆದರೆ, 90 ದಿನಗಳ ವಿನಾಯಿತಿಯಿಂದ ಷೇರುಮಾರುಕಟ್ಟೆ ತುಸು ಚೇತರಿಕೆ ಕಂಡು ಬರಬಹುದು ಎಂದು ಹೇಳಲಾಗಿತ್ತು. ಆದರೆ, ಆ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿವೆ. ಚಿನ್ನದ ಬೆಲೆಯು ಇನ್ನೇನು 1 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ.

ಇದೇ ವಾರಾಂತ್ಯ ಅಥವಾ ತಿಂಗಳ ಕೊನೆಗೆ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಮುಟ್ಟುವುದು ಖಚಿತ ಅಂತಲೇ ಹೇಳಲಾಗುತ್ತಿದೆ. ಅಷ್ಟೊಂದು ವೇಗವಾಗಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದೆ.

ಇನ್ನಷ್ಟು ಹೆಚ್ಚಾಗುವ ಸಾಧ್ಯತೆ: ಅಮೆರಿಕದ ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಶೇ 3ರಷ್ಟು ವ್ಯಾಪಾರ ಕುಸಿತವಾಗಿದೆ. ಇದರಿಂದ ವಿಶ್ವದ ವಾಣಿಜ್ಯೋದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದುವರಿದು ಇದರಿಂದ ಕಚ್ಚಾ ತೈಲ ಹಾಗೂ ಚಿನ್ನ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+