Gold Rate Today: ದಾಖಲೆ ಏರಿಕೆ ಕಂಡ ಚಿನ್ನದ ಬೆಲೆ, ಇಲ್ಲಿದೆ ಇಂದಿನ ದರ ವಿವರ
ದಸರಾ ದೀಪಾವಳಿ ಹಬ್ಬಗಳು ಸರಣಿಯಾಗಿ ಬಂದ ಹಿನ್ನೆಲೆ ಚಿನ್ನ ಖರೀದಿಗೆ ಜನ ಆಸಕ್ತಿ ತೋರಿದ್ದಾರೆ. ಸಾಮಾನ್ಯವಾಗಿ ಹಬ್ಬದ ಶುಭಸಂದರ್ಭಗಳಲ್ಲಿ ಚಿನ್ನ ಖರೀದಿಸಲು ಪ್ಲ್ಯಾನ್ ಕೂಡ ಮಾಡಿರುತ್ತಾರೆ. ಆದರೆ ಬೆಲೆ ಕಡಿಮೆ ಇದ್ದಾಗ ಚಿನ್ನ ಖರೀದಿಸಿದರೆ ಒಳ್ಳೆಯದು ಎಂದು ಕೆಲವರು ಕಾದು ಕುಳಿತಿರುತ್ತಾರೆ. ಆದರೆ ಈ ದೀಪಾವಳಿ ಹಬ್ಬಕ್ಕೆ ಚಿನ್ನ ಸಿಕ್ಕಾಪಟ್ಟೆ ದುಬಾರಿಯಾಗುವ ಲಕ್ಷಣಗಳು ಕಂಡುಬಂದಿವೆ. ಕಳೆದ ನಾಲ್ಕೈದು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರಗಳು ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಚಿನ್ನದ ದರ ಒಂದೇ ದಿನದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಇಂದು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ವಿವರ ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,868, 22 ಕ್ಯಾರೆಟ್ ಚಿನ್ನಕ್ಕೆ ₹11,795 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,651 ಇದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,868 ಆಗಿದ್ದು, ನಿನ್ನೆಗಿಂತ ₹328 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹1,02,944, 10 ಗ್ರಾಂ. ಚಿನ್ನದ ದರ ₹1,28,680, 100 ಗ್ರಾಂ. ಚಿನ್ನದ ದರ ₹12,86,800ಕ್ಕೆ ಜಿಗಿದಿದ್ದು, ಬರೋಬ್ಬರಿ ₹32,800 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,795 ಆಗಿದ್ದು, ನಿನ್ನೆಯ ದರಕ್ಕಿಂತ ₹300 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹94,360, 10 ಗ್ರಾಂ. ಚಿನ್ನದ ದರ ₹1,17,950, 100 ಗ್ರಾಂ. ಚಿನ್ನದ ದರ ₹11,79,500 ಆಗಿದ್ದು, ₹30,000ವರೆಗೆ ಏರಿದೆ.
ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,795 ಆಗಿದ್ದು, ₹300 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹94,360, 10 ಗ್ರಾಂ. ಚಿನ್ನದ ದರ ₹1,17,950, 100 ಗ್ರಾಂ. ಚಿನ್ನದ ದರ ₹11,79,500ರ ಹೆಚ್ಚಳ ಕಂಡಿದ್ದು, ₹30,000 ಹೆಚ್ಚಾಗಿದೆ. ಈ ವಾರಾಂತ್ಯದ ವೇಳೆ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಅಕ್ಟೋಬರ್ 14: ₹12,868 ; ₹11,795
ಅಕ್ಟೋಬರ್ 13: ₹12,540 ; ₹11,495
ಅಕ್ಟೋಬರ್ 12: ₹12,508 ; ₹11,465
ಅಕ್ಟೋಬರ್ 11: ₹12,508 ; ₹11,465
ಅಕ್ಟೋಬರ್ 10: ₹12,371 ; ₹11,340
ಅಕ್ಟೋಬರ್ 9: ₹12,415 ; ₹11,380
ಅಕ್ಟೋಬರ್ 8: ₹12,393 ; ₹11,360
ಅಕ್ಟೋಬರ್ 7: ₹12,202 ; ₹11,185
ಅಕ್ಟೋಬರ್ 6: ₹12,077 ; ₹11,070
ಅಕ್ಟೋಬರ್ 5: ₹11,940 ; ₹10,945
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹193.60 ಆಗಿದ್ದು, ನಿನ್ನೆಯ ದರ ₹185 ಇತ್ತು. ಇಂದು ಪ್ರತಿ ಕಿಲೋಗ್ರಾಂಗೆ ₹1,93,600 ಆಗಿದೆ. ನಿನ್ನೆಗಿಂತ ಇಂದು ದರ ₹8,600 ರೂ ಏರಿಕೆ ಕಂಡಿದೆ. ಇಂದು ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,760 ಮತ್ತು 10 ಗ್ರಾಂಗೆ ₹47,600 ಆಗಿದೆ. ದೀಪಾವಳಿ ಹಬ್ಬಕ್ಕೆ ಇನ್ನೊಂದು ವಾರವಷ್ಟೇ ಇರುವ ಕಾರಣ ಈ ವಾರಾಂತ್ಯದ ವೇಳೆ ಚಿನ್ನ ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications