Gold Rate August 12: ಚಿನ್ನದ ಬೆಲೆ 2ನೇ ದಿನವೂ ಭರ್ಜರಿ ಇಳಿಕೆ: ಇಂದಿನ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?

Gold Rate August 12: ಚಿನ್ನ ಪ್ರಿಯರಿಗೆ ಆಗಸ್ಟ್‌ 12ರಂದು ಸಹ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಇಂದೂ ಸಹ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಮುಂದುವರಿದಿದೆ. ವರಮಹಾಲಕ್ಷ್ಮಿ ಹಬ್ಬ ಮುಗಿದಿದ್ದು ಮುಂದಿನ ದಿನಗಳಲ್ಲಿ ಸಾಲು ಸಾಲು ದೊಡ್ಡ ಹಬ್ಬಗಳು ಇವೆ. ಗೌರಿ - ಗಣೇಶ ಹಬ್ಬ ಹಾಗೂ ದೀಪಾವಳಿ ಮತ್ತು ಕ್ರಿಸ್ಮಸ್ ಸೇರಿದಂತೆ ವಿವಿಧ ಹಬ್ಬಗಳು ಬರಲಿವೆ. ಈ ನಡುವೆ ಚಿನ್ನದ ಬೆಲೆ ಕಡಿಮೆ ಆಗಿರುವುದು ಚಿನ್ನ ಪ್ರಿಯರಲ್ಲಿ ಭಾರೀ ಸಂತೋಷವನ್ನುಂಟು ಮಾಡಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯ ವಿವರ ನೋಡೋಣ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಿತ್ತು. ಹಬ್ಬದ ಸೀಸನ್ ಸಹ ಇರುವುದರಿಂದ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಇನ್ನಷ್ಟು ಹೆಚ್ಚಾಗಬಹುದು ಎನ್ನುವ ಆತಂಕ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿರುವವರಲ್ಲಿ ಎದುರಾಗಿತ್ತು. ಇದೀಗ ಕೊನೆಗೂ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದ್ದು. ಈ ವಾರ ಇನ್ನಷ್ಟು ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್‌ 12ರ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ಇಲ್ಲಿದೆ.

Gold Rate Today August 12 Sharp Fall for 2nd Day Check Latest Gold amp amp Silver Prices

18 ಕ್ಯಾರೆಟ್ ಚಿನ್ನದ ಬೆಲೆ: ಮಂಗಳವಾರ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯು 7,605 ರೂಪಾಯಿ ಆಗಿದೆ. ಅದೇ 10 ಗ್ರಾಂಗೆ 76,050 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂನ ಮೇಲೆ 66 ರೂಪಾಯಿ ಹಾಗೂ 10 ಗ್ರಾಂಗೆ 660 ರೂಪಾಯಿ ಕಡಿಮೆಯಾಗಿದೆ. ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ ಅಪರೂಪದ ಬೆಳವಣಿಗೆ ಆಗಿತ್ತು.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು ಮಂಗಳವಾರ 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಇಳಿಕೆ ಆಗಿದೆ. ಪ್ರತಿ ಗ್ರಾಂನ ಚಿನ್ನದ ಬೆಲೆಯು 9,295 ರೂಪಾಯಿ ಹಾಗೂ 10 ಗ್ರಾಂಗೆ 92,950 ರೂಪಾಯಿ ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂನ ಮೇಲೆ 80 ರೂಪಾಯಿ ಹಾಗೂ 10 ಗ್ರಾಂಗೆ 800 ರೂಪಾಯಿ ಕಡಿಮೆ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ ಚಿನ್ನದ ಬೆಲೆ ಆಗಸ್ಟ್‌ 3ರ ಬೆಲೆಗೆ ಮರಳಿದ್ದು. ದರ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 10,140 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ 1,01,400 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂಗೆ 88 ರೂಪಾಯಿ ಹಾಗೂ 10 ಗ್ರಾಂಗೆ 880 ರೂಪಾಯಿ ಕಡಿಮೆಯಾಗಿದೆ.

ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 115 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 1,15,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಬೆಳ್ಳಿ ಬೆಲೆಯು 2 ರೂಪಾಯಿ ಹಾಗೂ ಕೆ.ಜಿ ಬರೋಬ್ಬರಿ 2,000 ಸಾವಿರ ರೂಪಾಯಿ ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+