ಬಂಗಾರ ಮತ್ತಷ್ಟು ದುಬಾರಿ: ₹1,41,220 ತಲುಪಿದ 10 ಗ್ರಾಂ ಚಿನ್ನ, ಇಂದಿನ ದರ ಹೀಗಿದೆ
ಚಿನ್ನದ ದರಗಳು ಈ ವಾರಪೂರ್ತಿ ನಿರಂತರವಾಗಿ ಏರಿಕೆ ಕಾಣುವ ಮೂಲಕ ಬಿರುಸಿನ ಓಟ ಮುಂದುವರಿಸಿದೆ. ಹೊಸ ವರ್ಷಕ್ಕೂ ಮುನ್ನ ಚಿನ್ನ ಮತ್ತಷ್ಟು ದುಬಾರಿಯಾಗಿದೆ. ಶನಿವಾರವೂ ಚಿನ್ನದ ದರಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನವು ಗ್ರಾಂ ಮೇಲೆ 120 ರೂಪಾಯಿವರೆಗೆ, ಹಾಗೂ 22 ಕ್ಯಾರೆಟ್ ಚಿನ್ನ ಗ್ರಾಂ ಮೇಲೆ 110 ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳು ಹೀಗಿವೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹14,122, 22 ಕ್ಯಾರೆಟ್ ಚಿನ್ನಕ್ಕೆ ₹12,945 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,592. ಆಗಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,122, 8 ಗ್ರಾಂ.ಚಿನ್ನದ ದರ ₹1,12,976, 10 ಗ್ರಾಂ ಚಿನ್ನದ ದರ ₹1,41,220, 100 ಗ್ರಾಂ ಚಿನ್ನದ ದರ ₹14,12,200 ಆಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,945, 8 ಗ್ರಾಂ ಚಿನ್ನದ ದರ ₹1,03,560, 10 ಗ್ರಾಂ ಚಿನ್ನದ ದರ ₹1,29,450, 100 ಗ್ರಾಂ ಚಿನ್ನದ ದರ ₹12,94,500 ಆಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ನೋಡುವುದಾದರೆ ಪ್ರತಿ ಗ್ರಾಂ.ಗೆ ₹10,592, 8 ಗ್ರಾಂ ಚಿನ್ನದ ದರ ₹84,736, 10 ಗ್ರಾಂ ಚಿನ್ನದ ದರ ₹1,05,920, 100 ಗ್ರಾಂ ಚಿನ್ನದ ದರ ₹10,59,200 ಆಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ 24 ಕ್ಯಾರೆಟ್ ಚಿನ್ನ (₹) 22 ಕ್ಯಾರೆಟ್ ಚಿನ್ನ (₹)
ಡಿಸೆಂಬರ್ 28: 14,122 ; 12,945
ಡಿಸೆಂಬರ್ 27: 14,122 ; 12,945
ಡಿಸೆಂಬರ್ 26: 14,002 ; 12,835
ಡಿಸೆಂಬರ್ 25: 13,925 ; 12,765
ಡಿಸೆಂಬರ್ 24: 13,893 ; 12,735
ಡಿಸೆಂಬರ್ 23: 13,855 ; 12,700
ಡಿಸೆಂಬರ್ 22: 13,615 ; 12,480
ಡಿಸೆಂಬರ್ 21: 13,418 ; 12,300
ಡಿಸೆಂಬರ್ 20: 13,418 ; 12,300
ಡಿಸೆಂಬರ್ 19: 13,418 ; 12,300
ಡಿಸೆಂಬರ್ 18: 13,484 ; 12,360
ಡಿಸೆಂಬರ್ 17: 13,386 ; 12,270
ಬೆಳ್ಳಿ-ಪ್ಲಾಟಿನಂ ದರ ಮತ್ತೆ ಏರಿಕೆ
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹251 ಮತ್ತು ಪ್ರತಿ ಕಿಲೋಗ್ರಾಂಗೆ ₹2,51,000 ಆಗಿದೆ. ಒಂದು ಕೆ.ಜಿ.ಮೇಲೆ ಶನಿವಾರ ಬರೋಬ್ಬರಿ 11,000 ರೂಪಾಯಿ ಏರಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹6,895 ಮತ್ತು 10 ಗ್ರಾಂಗೆ ₹68,950 ಆಗಿದೆ. ಒಂದು ಗ್ರಾಂ ಮೇಲೆ 432 ರೂಪಾಯಿ ಹೆಚ್ಚಾಗಿದೆ. ಒಟ್ಟಾರೆ ಈ ವಾರ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಸತತವಾಗಿ ಏರುವ ಮೂಲಕ ನಾಗಾಲೋಟ ಮುಂದುವರಿಸಿವೆ.












Click it and Unblock the Notifications