Gold Rate on July 30: ಚಿನ್ನದ ಬೆಲೆಯಲ್ಲಿ ಸಕಾರಾತ್ಮಕ ಬದಲಾವಣೆ: ಇಂದು ಬಂಗಾರದ ದರದಲ್ಲಿ ಮತ್ತೆ ಜಿಗಿತ

ಬೆಂಗಳೂರು: ರಾಷ್ಟ್ರ ರಾಜಧಾನಿ ನವದೆಹಲಿ, ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನಕ್ಕೆ ಸಕಾರಾತ್ಮಕ ಬದಲಾವಣೆ ಆಗಿದೆ. ಚಿನ್ನ ಮತ್ತೆ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಿದ್ದು, ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಎರಡು ದಿನಗಳಿಂದ ಇಳಿಕೆ ಕಾಣುತ್ತಿದ್ದ ಬಂಗಾರದ ಬೆಲೆ ಮತ್ತೆ ಏರಿಕೆಯತ್ತ ಸಾಗಿದೆ. ಇಂದು ಜುಲೈ 30ರ ಗುರುವಾರದಂದು 22ಕ್ಯಾರಟ್, 24 ಕ್ಯಾರಟ್ ಚಿನ್ನದ ಬೆಲೆಪಟ್ಟಿ ಇಲ್ಲಿದೆ.

ಯುದ್ಧಗಳು, ಡಾಲರ್ ಮೌಲ್ಯ, ಹಣದುಬ್ಬರ, ರಾಜತಾಂತ್ರಿಕ ಕಾರಣಗಳು ಸೇರಿದಂತೆ ಇನ್ನಿತರ ಜಾಗತಿಕ ಅಂಶಗಳಿಂದ ಚಿನ್ನ-ಬೆಳ್ಳಿ ದರವು ಫೆಬ್ರವರಿ 1ರಿಂದ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದೆ. ಇವತ್ತಿಗೂ ಈ ಎರಡು ಹಳದಿ ಮತ್ತು ಬಿಳಿ ಲೋಹಗಳ ಮೌಲ್ಯದಲ್ಲಿ ನಿತ್ಯವು ಏರುಪೇರಾಗುತ್ತಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಒಂದು ಗ್ರಾಂಗೆ 75 ರೂಪಾಯಿ ಹೆಚ್ಚಾಗಿದೆ.

Gold Rate

ಬಂಗಾರದ ಬೆಲೆ ಏರಿಕೆ

* 24 ಕ್ಯಾರಟ್ ಒಂದು ಗ್ರಾಂ ಚಿನ್ನದ ದರವು 82 ರೂಪಾಯಿಯಂತೆ 10 ಗ್ರಾಂಗೆ 820 ರೂಪಾಯಿ ಹೆಚ್ಚಾಗಿದ್ದು, ಬೆಲೆಯು 1,44,330 ರೂಪಾಯಿ ತಲುಪಿದೆ.

* 22 ಕ್ಯಾರಟ್ ಒಂದು ಗ್ರಾಂ ಚಿನ್ನದ ದರವು 75 ರೂಪಾಯಿಯಂತೆ 10 ಗ್ರಾಂಗೆ 750 ರೂಪಾಯಿ ಹೆಚ್ಚಾಗಿದ್ದು, ಬೆಲೆಯು 1,32,300 ರೂಪಾಯಿ ಮುಟ್ಟಿದೆ.

* ಅದೇ ರೀತಿ 18 ಕ್ಯಾರಟ್ ಒಂದು ಗ್ರಾಂ ಬಂಗಾರವು 62 ರೂಪಾಯಿ ಏರಿಕೆ ಕಾಣುವ ಮೂಲಕ 10 ಗ್ರಾಂಗೆ 620 ರೂಪಾಯಿ ತಲುಪಿದೆ. ಇಂದು ಹತ್ತು ಗ್ರಾಂ ಅದೇ ಚಿನ್ನದ ಬೆಲೆ 1,08, 250 ರೂಪಾಯಿ ಆಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಇಂದು 1ಕೆ.ಜಿ. ಬೆಳ್ಳಿ ದರ ಎಷ್ಟಿದೆ?

ಜುಲೈ 26ರಿಂದ ಐದು ದಿನಗಳಲ್ಲಿ ಬೆಳ್ಳಿ ದರ ಬಹುತೇಕ ದಿನಗಳು ಯಥಾಸ್ಥಿತಿಯಲ್ಲಿದೆ. ಜುಲೈ 28ರಂದು ಒಂದು ದಿನ 5000 ರೂಪಾಯಿ ಕುಸಿತ ಕಂಡಿತ್ತು. ಉಳಿದಂತೆ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದು ಗುರುವಾರ ಸಹ ಒಂದು ಕೆ.ಜಿ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, 2,35,000 ರೂಪಾಯಿಗೆ ಮಾರಾಟವಾಗಿದೆ.

ಚಿನ್ನದ 22 ಕ್ಯಾರಟ್ 1 ಗ್ರಾಂನ ದರ ಮಾಹಿತಿ

ಚೆನ್ನೈ: 13,230 ರೂಪಾಯಿ

ಮುಂಬೈ: 13,230 ರೂಪಾಯಿ

ದೆಹಲಿ: 13,245 ರೂಪಾಯಿ

ಕೊಲ್ಕತ್ತಾ: 13,230 ರೂಪಾಯಿ

ಬೆಂಗಳೂರು: 13,230 ರೂಪಾಯಿ

ಹೈದರಾಬಾದ್: 13,230 ರೂಪಾಯಿ

ಕೇರಳ: 13,230 ರೂಪಾಯಿ

ಪುಣೆ: 13,230 ರೂಪಾಯಿ

ಅದಮದಾಬಾದ್: 13,230 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+