Gold Rate: ಚಿನ್ನದ ಬೆಲೆ ಹೆಚ್ಚಳ; ಬೆಳ್ಳಿ ಬೆಲೆ ಕುಸಿತ
ಚಿನ್ನ ಮತ್ತು ಬೆಳ್ಳಿ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸ್ಥಿತಿಗತಿಗಳಿಗೆ ಅನುಗುಣವಾಗಿ ಪ್ರತಿದಿನ ಏರಿಳಿಕೆ ಕಾಣುತ್ತಲೇ ಇರುತ್ತದೆ. ಮಂಗಳವಾರ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆ ತುಸು ಇಳಿಕೆ ಕಂಡಿದೆ.
ಸೋಮವಾರಕ್ಕೆ ಹೋಲಿಕೆ ಮಾಡಿದಾಗ ಮಂಗಳವಾರ 100 ಗ್ರಾಂ ಚಿನ್ನದ ಬೆಲೆ 1000 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ (ಆಭರಣ) ಚಿನ್ನ ಮತ್ತು 24 ಕ್ಯಾರೆಟ್ (ಶುದ್ಧ) ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂಪಾಯಿ ಹೆಚ್ಚಾಗಿದೆ.

ಸೋಮವಾರ 6,625 ರೂಪಾಯಿ ಇದ್ದ ಆಭರಣ ಚಿನ್ನ ಮಂಗಳವಾರ 6,635 ರೂಪಾಯಿಯಂತೆ ಮಾರಾಟವಾಗುತ್ತಿದೆ. 10 ಗ್ರಾಂ ಒಡವೆ ಚಿನ್ನದ ಬೆಲೆ 66,350 ರೂಪಾಯಿ ಆಗಿದೆ.
ಸೋಮವಾರ 7,228 ರೂಪಾಯಿ ಇದ್ದ 1 ಗ್ರಾಂ ಚಿನ್ನದ ಬೆಲೆ ಮಂಗಳವಾರ 7,238 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಈಗ 72,380 ರೂಪಾಯಿ ಆಗಿದೆ.
ಇನ್ನು 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಗ್ರಾಂಗೆ 8 ರೂಪಾಯಿಯಷ್ಟು ಅಲ್ಪ ಏರಿಕೆ ಕಂಡಿದೆ. ಸೋಮವಾರ 5,421 ರೂಪಾಯಿ ಇದ್ದ 18 ಗ್ರಾಂ ಚಿನ್ನದ ಬೆಲೆ ಮಂಗಳವಾರ 5,429 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆ ಅಲ್ಪ ಕುಸಿತ
ಒಂದು ಕಡೆ ಚಿನ್ನದ ಬೆಲೆ ಏರಿಕೆಯಾದರೆ ಮತ್ತೊಂದೆಡೆ ಬೆಳ್ಳಿ ದರ ಅಲ್ಪ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 100 ರೂಪಾಯಿ ಅಲ್ಪ ಕುಸಿತ ದಾಖಲಿಸಿದೆ. ಸೋಮವಾರ 90,150 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಧಾರಣೆ ಮಂಗಳವಾರ 90,050 ರೂಪಾಯಿಗೆ ಕುಸಿದಿದೆ.
ಚಿನ್ನದ ಬೆಲೆ ಮತ್ತೆ ಏರಿಕೆ?
ಚಿನ್ನದ ಧಾರಣೆ ಪ್ರತಿದಿನ ಏರಿಳಿಕೆ ಕಾಣುತ್ತಲೇ ಇರುತ್ತದೆ. ಡಾಲರ್ ಮೌಲ್ಯ, ಜಾಗತಿಕ ಬೇಡಿಕೆಯಂತಹ ಅಂಶಗಳು ಚಿನ್ನದ ಬೆಲೆಯ ಏರಿಳಿಕೆ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ತುಂಬಾ ಸುರಕ್ಷಿತ ಎಂದೇ ಹೂಡಿಕೆದಾರರ ಭಾವನೆಯಾಗಿದೆ.
ಭಾರತೀಯರು ಕೂಡ ಚಿನ್ನವನ್ನು ಬರೀ ಅಲಂಕಾರ ಆಭರಣವನ್ನಾಗಿ ನೋಡದೆ ಅದನ್ನೊಂದು ಸಂಪತ್ತು ಎಂದು ಭಾವಿಸುತ್ತಾರೆ. ಆಪತ್ಕಾಲದಲ್ಲಿ ಅಡವಿಡಬಹುದು ಎನ್ನುವ ಕಾರಣಕ್ಕೂ ಕೂಡ ಚಿನ್ನವನ್ನು ಖರೀದಿಸುವುದು ಭಾರತೀಯರಿಗೆ ಎಂದಿಗೂ ಮೊದಲ ಆದ್ಯತೆಯಾಗಿರುತ್ತದೆ.












Click it and Unblock the Notifications