Gold Rate on October 05: ವಾರಾಂತ್ಯದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್! ಇಂದಿನ ಚಿನ್ನ & ಬೆಳ್ಳಿ ಬೆಲೆ
Gold Rate on October 05: ಚಿನ್ನ ಪ್ರಿಯರಿಗೆ ವಾರಾಂತ್ಯವೂ ಭರ್ಜರಿ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಅಕ್ಟೋಬರ್ ಮೊದಲ ವಾರ ಬಹುತೇಕ ಚಿನ್ನದ ಬೆಲೆ ಇಳಿಕೆಯಾಗಿದ್ದು ವಾರಾಂತ್ಯದಲ್ಲೂ ಚಿನ್ನದ ಬೆಲೆಯಲ್ಲಿ ಭರ್ಜರಿ ಕಡಿಮೆಯಾಗಿದೆ. ಬೇರೆ ಬೇರೆ ಕಾರಣಗಳಿಗೆ ಚಿನ್ನದ ಬೆಲೆಯು ಏರಿಕೆಯ ಹಾದಿಯಲ್ಲಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಪೂರ್ತಿ ಬಂಗಾರದ ಬೆಲೆ ಕಡಿಮೆಯಾಗಿದೆ. ಅಲ್ಲದೇ ಬೆಳ್ಳಿ ಬೆಲೆಯು ಸಹ ಸ್ಥಿರವಾಗಿದೆ. ಅಕ್ಟೋಬರ್ 05ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.
ಕೇಂದ್ರ ಬಿಜೆಪಿ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ (ವಿವಿಧ ವಸ್ತುಗಳ ಮೇಲೆ ಜಿಎಸ್‌ಟಿ ಇಳಿಕೆ) ಮಾಡಿದ ಮೇಲೆ ಜನರಿಗೆ ಹಣ ಉಳಿತಾಯವಾಗುತ್ತಿದೆ. ವಾಹನ ಖರೀದಿ ಮಾಡಬೇಕು ಎಂದುಕೊಂಡವರು ಹಾಗೂ ವಿವಿಧ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಇದು ಸಹ ಪರೋಕ್ಷವಾಗಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸಂಪೂರ್ಣವಾಗಿ ಚಿನ್ನದ ಬೆಲೆಯು ಏರಿಕೆ ಕಂಡಿತ್ತು. ಆದರೆ ಈ ತಿಂಗಳು ಮೊದಲ ವಾರದಲ್ಲೇ ಚಿನ್ನದ ಬೆಲೆ ಭರ್ಜರಿ ಇಳಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಬಂಗಾರ ಪ್ರಿಯರಿಗೆ ಚಿನ್ನದ ಬೆಲೆಯು ಸಂತೋಷವನ್ನುಂಟು ಮಾಡಿದೆ. ವಾರಾಂತ್ಯದಲ್ಲಿ 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆಯು 11,940 ರೂಪಾಯಿ ಆಗಿದೆ. ಹತ್ತು ಗ್ರಾಂನ ಬೆಲೆಯು 1,19,400 ರೂಪಾಯಿ ಆಗಿದೆ. ಇನ್ನು ಒಟ್ಟಾರೆ ಚಿನ್ನದ ಬೆಲೆ ಇಳಿಕೆಯಾಗಿದ್ದರೂ ಕಳೆದ 10 ದಿನಗಳ ಅವಧಿಯಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 87 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆ ಆಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,945 ರೂಪಾಯಿ ಆಗಿದ್ದರೆ 10 ಗ್ರಾಂ ಚಿನ್ನದ ಬೆಲೆಯು 1,09,450 ರೂಪಾಯಿ ಆಗಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆಯು 80 ರೂಪಾಯಿ ಹೆಚ್ಚಳವಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 8,955 ರೂಪಾಯಿ ಹಾಗೂ ಹತ್ತು ಗ್ರಾಂಗೆ 89,550 ರೂಪಾಯಿ ಆಗಿದೆ. ವಾರಾಂತ್ಯದಲ್ಲಿ ಯಾವುದೇ ಬೆಲೆ ಏರಿಕೆಯಾಗದೆ. ಎಲ್ಲಾ ಕ್ಯಾರೆಟ್‌ಗಳ ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ.
ಬೆಳ್ಳಿ ಬೆಲೆ ಹೇಗಿದೆ ?
ಇನ್ನು ವಾರಾಂತ್ಯದಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 155 ರೂಪಾಯಿ ಹಾಗೂ ಒಂದು ಕೆ.ಜಿಗೆ 1,55,000 ಸಾವಿರ ರೂಪಾಯಿ ಆಗಿದೆ.












Click it and Unblock the Notifications