Gold Rate Oct 23: ಚಿನ್ನದ ಬೆಲೆ ಭರ್ಜರಿ ಇಳಿಕೆ: ಚಿನ್ನ ಪ್ರಿಯರಿಗೆ ಬಂಪರ್ ಗುಡ್‌ನ್ಯೂಸ್‌!

Gold Rate Oct 23: ಕಳೆದ ಎರಡು ಮೂರು ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿತ್ತು. ಇದೀಗ ಚಿನ್ನದ ಬೆಲೆಯು ಭರ್ಜರಿ ಇಳಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ಅಮೇರಿಕಾದ ನಡುವೆ ಆರ್ಥಿಕ - ವ್ಯಾಪಾರ ಒಪ್ಪಂದ ಸುಧಾರಿಸುತ್ತಿರುವುದು ಎಂದು ಹೇಳಲಾಗಿದೆ. ಈ ಮಾತುಕತೆ ನಡೆದ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವುದಕ್ಕೆ ಪ್ರಾರಂಭವಾಗಿದ್ದು, ಚಿನ್ನದ ಬೆಲೆಯು ಅಕ್ಟೋಬರ್ 23ರಂದು ಭರ್ಜರಿ ಇಳಿಕೆ ಕಂಡಿದೆ.

ಸಾಮಾನ್ಯವಾಗಿ ಭೌಗೋಳಿಕ ಸಮಸ್ಯೆಗಳು, ದೇಶ - ದೇಶಗಳ ಆರ್ಥಿಕ ಹಾಗೂ ವ್ಯಾಪಾರದಲ್ಲಿ ಗೊಂದಲ ಮತ್ತು ಯುದ್ಧಗಳಂತಹ ಗಂಭೀರ ಸಂದರ್ಭದಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತದೆ. ಇನ್ನು ಈಚೆಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ದೇಶಗಳ ಮೇಲೆ ಭಾರೀ ತೆರಿಗೆ ವಿಧಿಸಿದ್ದರು. ಇದು ಭಾರೀ ಪರಿಣಾಮ ಬೀರಿತ್ತು.

Gold Rate Oct 23 Sharp Drop in Gold Price Brings Relief to Buyers Today s Gold amp amp Silver Rates

ಇದೀಗ ಭಾರತ ಮತ್ತು ಅಮೇರಿಕಾದ ನಡುವಿನ ಒಪ್ಪಂದ ವಿಷಯ ಚರ್ಚೆಯ ಬೆನ್ನಲ್ಲೇ ಅಕ್ಟೋಬರ್ 23ರಂದು ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಇದಕ್ಕೆ ದೀಪಾವಳಿ ಹಬ್ಬದ ಮುಕ್ತಾಯವೂ ಪ್ರಮುಖ ಕಾರಣವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ವಿವರ ನೋಡೋಣ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳು ಹಾಗೂ ಪ್ರದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಭರ್ಜರಿ ಇಳಿಕೆ ಆಗಿದ್ದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 9,381 ರೂಪಾಯಿ ಹಾಗೂ ಹತ್ತು ಗ್ರಾಂಗೆ 93,810 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 61 ರೂಪಾಯಿ ಹಾಗೂ ಹತ್ತು ಗ್ರಾಂಗೆ 610 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,465 ರೂಪಾಯಿ ಹಾಗೂ ಹತ್ತು ಗ್ರಾಂಗೆ 1,14,650 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆ 75 ರೂಪಾಯಿ ಹಾಗೂ ಹತ್ತು ಗ್ರಾಂಗೆ 750 ರೂಪಾಯಿ ಕಡಿಮೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 12,508 ರೂಪಾಯಿ ಹಾಗೂ ಹತ್ತು ಗ್ರಾಂಗೆ 1,25,080 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 81 ರೂಪಾಯಿ ಹಾಗೂ 10 ಗ್ರಾಂನ ಬೆಲೆಯು 810 ರೂಪಾಯಿ ಕಡಿಮೆಯಾಗಿದೆ.

ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲೂ ಇಂದು ಭರ್ಜರಿ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗುತ್ತಿತ್ತು. ಗುರುವಾರ ಬೆಳ್ಳಿ ಬೆಲೆ ಸಹ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 159 ರೂಪಾಯಿ ಹಾಗೂ ಒಂದು ಕೆ.ಜಿಗೆ 1,59,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 4.90 ಪೈಸೆ ಹಾಗೂ ಕೆ.ಜಿಗೆ ಬರೋಬ್ಬರಿ 4, 900 ರೂಪಾಯಿ ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+