ಸತತ 4ನೇ ದಿನ ಚಿನ್ನದ ಬೆಲೆ ಏರಿಕೆ: ಆಗಸ್ಟ್‌ ಗರಿಷ್ಠದಿಂದ 7,000 ರೂಪಾಯಿ ಕಡಿಮೆ

ನವದೆಹಲಿ, ಡಿಸೆಂಬರ್ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರತೊಡಗಿದೆ. ಸತತ ನಾಲ್ಕನೇ ದಿನ ಹಳದಿ ಲೋಹದ ಬೆಲೆ ಏರಿಕೆಯಾಗಿದ್ದು, ಇತ್ತೀಚಿನ ಕನಿಷ್ಠ ಮಟ್ಟದಿಂದ ಮತ್ತೆ ಏರುಮುಖ ಸಾಧಿಸಿದೆ.

ಎಂಸಿಎಕ್ಸ್‌ನಲ್ಲಿ ಫೆಬ್ರವರಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.2ರಷ್ಟು ಏರಿಕೆಗೊಂಡು 49,380 ರೂಪಾಯಿಗೆ ತಲುಪಿದ್ದು, ನಾಲ್ಕನೇ ದಿನ ರ್ಯಾಲಿ ಮುಂದುವರಿಸಿದೆ. ನಾಲ್ಕು ದಿನಗಳಲ್ಲಿ ಚಿನ್ನವು 10 ಗ್ರಾಂಗೆ ಸುಮಾರು 1,500 ರೂಪಾಯಿಗೂ ಹೆಚ್ಚಿನ ಏರಿಕೆಯಾಗಿದೆ. ಆದರೆ ಆಗಸ್ಟ್‌ನ ಗರಿಷ್ಠ 56,200 ರೂ. ನಿಂದ 7,000 ರೂಪಾಯಿ ಕಡಿಮೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ಇಂದು ಶೇಕಡಾ 0.2ರಷ್ಟು ಏರಿಕೆಗೊಂಡು ಕೆಜಿಗೆ 63,767 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ 350 ರೂ. ಮತ್ತು ಬೆಳ್ಳಿ ಕೆಜಿಗೆ 300 ರೂಪಾಯಿ ಹೆಚ್ಚಿದೆ.

Gold prices today drop for 4th day in a row: Rs 7000 From Record Highs

'' ಚಿನ್ನವು ಔನ್ಸ್‌ಗೆ 1,780 ಡಾಲರ್ ಹಂತದಲ್ಲಿ ಬೆಂಬಲ ಪಡೆದ ಬಳಿಕ ತೀವ್ರ ಏರಿಕೆ ಕಂಡು ಬರುತ್ತಿದೆ. ಈ ಮೂಲಕ ಇತ್ತೀಚಿನ ಕೆಳಮುಖ ಪ್ರಕ್ರಿಯೆಯನ್ನು ಇದು ನಿಲ್ಲಿಸುವ ಸೂಚನೆಯಾಗಿದ್ದು, ಸತತ ಏರಿಕೆಯು ಸ್ಪಷ್ಟವಾಗಿ ಕಾಣುತ್ತಿದೆ. ಅಮೆರಿಕಾ ಡಾಲರ್ ದೌರ್ಬಲ್ಯದಿಂದ ನಿರಂತರ ಬೆಂಬಲವನ್ನು ಗಳಿಸಲು ಚಿನ್ನವು ಮತ್ತೆ ಏರಿಕೆಯತ್ತ ಮುಖಮಾಡಿದೆ'' ಎಂದು ಕೊಟಕ್ ಸೆಕ್ಯುರಿಟೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕಾ ಡಾಲರ್ ಪ್ರಚೋದನೆಯ ಮೇಲೆ ಹೂಡಿಕೆದಾರರ ಆಶಾವಾದದ ನಡುವೆ ಸ್ಪಾಟ್ ಚಿನ್ನದ ಬೆಲೆ ಇಂದು ಹೆಚ್ಚಾಗಿದೆ. ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,841.90 ಡಾಲರ್‌ಗೆ ತಲುಪಿದೆ. ಈ ವಾರದಲ್ಲಿ ಶೇಕಡಾ 3ರಷ್ಟು ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+