Gold Prices today: ಅಕ್ಷಯ ತೃತೀಯ ಹತ್ತಿರ ಬಂತು, ಚಿನ್ನ ಕೊಳ್ಳಲು ಮೊದಲು ಬೆಲೆ ತಿಳಿಯಿರಿ
ಬೆಂಗಳೂರು, ಏಪ್ರಿಲ್. 28: ಅಂತರಾಷ್ಟ್ರೀಯ ಅನಿಶ್ಚಿತತೆ ಮತ್ತಿತರ ಕಾರಣಗಳಿಂದಾಗಿ ಕೆಲ ಸಮಯದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಸಾರ್ವಕಾಲಿಕ ಹೆಚ್ಚಳಕ್ಕೆ ತಲುಪಿರುವುದು ಗೊತ್ತೇ ಇದೆ. ವಿಶೇಷವಾಗಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ವಾತಾವರಣದಲ್ಲಿ ಬಹಳಷ್ಟು ಏರಿಕೆಯಾಗಿದ್ದು, ಈಗ ಕೊಂಚ ತಗ್ಗಿದೆ.
ಚಿನ್ನ ಕೊಳ್ಳಲು ಸುಸಮಯ ಎನಿಸಿಕೊಳ್ಳುವ ಅಕ್ಷಯ ತೃತೀಯ ಕೂಡ ಹತ್ತಿರ ಬರುತ್ತಿದ್ದು, ಜನ ಚಿನ್ನ ಕೊಳ್ಳಲು ಅಂಗಡಿಗಳಿಗೆ ಲಗ್ಗೆ ಇಡಲಿದ್ದಾರೆ. ಹೀಗಾಗಿ ಚಿನ್ನ ಕೊಳ್ಳುವ ಮೊದಲು ಬೆಲೆ ತಿಳಿದುಕೊಳ್ಳುವುದು ಕೂಡ ಮುಖ್ಯ. ಸದ್ಯ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಸ್ಥಿರವಾಗಿ ಇರಿಸಿಕೊಂಡಿದ್ದು, ಈ ವರ್ಷ ಕನಿಷ್ಠ 3 ಬಾರಿ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಸೂಚಿಸಿದೆ. ಈ ಕಾರಣಗಳಿಂದ ಚಿನ್ನದ ದರ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ, ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಯುಎಸ್ ಡಾಲರ್‌ಗೆ ಬೇಡಿಕೆ ಮತ್ತು ಬಾಂಡ್ ಇಳುವರಿ ಹೆಚ್ಚಾಗುತ್ತದೆ ಮತ್ತು ಚಿನ್ನದ ಬೆಲೆ ಕಡಿಮೆಯಾಗುತ್ತದೆ.

ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ?
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ, ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಿಂದೆಂದಿಗಿಂತಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಅಕ್ಷಯ ತೃತೀಯದ ಅವಧಿಯಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 6,685 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,293 ರೂಪಾಯಿ ಯಿದೆ. 24 ಕ್ಯಾರೆಟ್ ಚಿನ್ನವನ್ನು 999 ಚಿನ್ನ ಎಂದೂ ಕರೆಯಲಾಗುತ್ತದೆ. ಹತ್ತು ದಿನದಲ್ಲಿ ಒಂದು ಗ್ರಾಮ್‌ಗೆ ಚಿನ್ನದ ಬೆಲೆ 130 ರೂಪಾಯಿಯಷ್ಟು ಬೆಲೆ ತಗ್ಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್‌ಗೆ 836 ರೂಪಾಯಿಯಿದೆ.
ದೇಶದ ಹಲವು ಭಾಗಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಪ್ರಸ್ತುತ ಹೈದರಾಬಾದ್ ನಗರದಲ್ಲಿ 22 ಕ್ಯಾರೆಟ್ ಚಿನ್ನದ ದರ ಹತ್ತು ಗ್ರಾಮ್‌ಗೆ 66,600 ರೂಪಾಯಿಯಾಗಿದೆ. ಇದು 450 ರೂ.ಗೆ ಏರಿಕೆಯಾಗಿದೆ. 24 ಕ್ಯಾರೆಟ್‌ನ ಶುದ್ಧ ಚಿನ್ನದ ದರ ರೂ. 490 ರೂಪಾಯಿಯಾಗಿದ್ದು, ಪ್ರಸ್ತುತ ದರ 72,650 ರೂಪಾಯಿಯಾಗಿದೆ.

ದೆಹಲಿಯಲ್ಲಿ 66,800 ರೂಪಾಯಿ, ಚೆನ್ನೈನಲ್ಲಿ 67,550 ರೂಪಾಯಿ, ಮುಂಬೈನಲ್ಲಿ 66,650 ರೂಪಾಯಿ, ಕೋಲ್ಕತಾದಲ್ಲಿ 66,650 ರೂಪಾಯಿ, ಕೇರಳದಲ್ಲಿ 66,650 ರೂಪಾಯಿ, ಜೈಪುರದಲ್ಲಿ 66,800 ರೂಪಾಯಿ ಮತ್ತು ಲಕ್ನೋದಲ್ಲಿ 66,800 ರೂಪಾಯಿಯಾಗಿದೆ.












Click it and Unblock the Notifications