ನವರಾತ್ರಿ ಹಬ್ಬ ಆರಂಭದಲ್ಲೇ ಚಿನ್ನದ ಬೆಲೆ ತುಸು ಏರಿಕೆ

Recommended Video

      Navaratri 2018 : ನವರಾತ್ರಿಗೆ ಚಿನ್ನದ ದರ ತುಸು ಏರಿಕೆ | Oneindia Kannada

      ಬೆಂಗಳೂರು, ಅಕ್ಟೋಬರ್ 10: ಜಾಗತಿಕವಾಗಿ ಚಿನ್ನದ ದರ ಸ್ಥಿರತೆ ಕಾಯ್ದುಕೊಂಡಿದ್ದರೂ, ಭಾರತದಲ್ಲಿ ನವರಾತ್ರಿ ಹಬ್ಬದ ಆರಂಭದೊಂದಿಗೆ ಚಿನ್ನದ ಬೆಲೆ ಏರಿಳಿತ ಮೊದಲುಗೊಂಡಿದೆ. ಬುಧವಾರದಂದು ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನದ ದರ 200 ರು ಏರಿಕೆ ಕಂಡಿದೆ.

      ದೆಹಲಿ ಮಾರುಕಟ್ಟೆಯಲ್ಲಿ ಬಂಗಾರ 200 ರೂಪಾಯಿ ಏರಿಕೆ ಕಂಡರೆ, ಬೆಳ್ಳಿ ಬೆಲೆಯಲ್ಲಿ 50 ರೂಪಾಯಿ ಇಳಿಕೆಯಾಗಿದೆ.

      ದೆಹಲಿಯಲ್ಲಿ ಶೇ99.9 ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 31,850 ರೂಪಾಯಿ ಹಾಗೂ ಶೇ 99.5ರಷ್ಟು ಶುದ್ಧ ಚಿನ್ನದ ಬೆಲೆ ಪ್ರತಿ 10ಗ್ರಾಂಗೆ 31,700ರು ನಷ್ಟಿದೆ.

      Gold prices surge Rs 200 today, silver rates fall

      50 ರೂಪಾಯಿ ಇಳಿಕೆ ಕಂಡ ಬೆಳ್ಳಿ ಕೆ.ಜಿ. ಗೆ 39,200 ರೂಪಾಯಿಯಂತೆ ಮಾರಾಟವಾಗಿದೆ. ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿದಾರರ ಸಂಖ್ಯೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

      ಜಾಗತಿಕ ಮಾರುಕಟ್ಟೆಯ ದುರ್ಬಲ ಬೆಳವಣಿಗೆಯಿಂದಾಗಿ ಬಂಗಾರದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಏರಿಕೆ ಕಂಡು ಬಂದಿದೆ. ನಾಣ್ಯ ತಯಾರಕರು ಹಾಗೂ ಕಾರ್ಖಾನೆ ಘಟಕಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದು ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ.

      ಜಾಗತಿಕವಾಗಿ ಪ್ರತಿ ಔನ್ಸ್ ಚಿನ್ನದ ಬೆಲೆ 1,189.35 ಡಾಲರ್ ನಷ್ಟಿದೆ. ರುಪಾಯಿ 74.25 ಪ್ರತಿ ಡಾಲರ್ ನಂತೆ ವಹಿವಾಟು ನಡೆಸುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+