Gold Silver Price: ದಸರಾ ಹಬ್ಬಕ್ಕೆ ಗ್ರಾಹಕರಿಗೆ ಶಾಕ್, ಗಗನದತ್ತ ಚಿನ್ನದ ಬೆಲೆ, ಇಂದಿನ ವಿವರ
ಬೆಂಗಳೂರು, ಅಕ್ಟೋಬರ್ 03: ಸದಾ ಬಹುಬೇಡಿಕೆಯಲ್ಲಿರುವ ಚಿನ್ನಾಭರಣದ ದರದಲ್ಲಿ ಮತ್ತೆ ವ್ಯತ್ಯಾಸವಾಗಿದೆ. ಭಾರತ ಸೇರಿದಂತೆ ಒಂದೆರಡು ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಬುಧವಾರದವರೆಗೆ ನಿರಂತರ ಇಳಿಕೆ ಕಂಡಿದ್ದ ಚಿನ್ನ ನೆನ್ನೆ 50 ರೂ. ಏರಿಕೆ ಆಗಿದ್ದು, ಇಂದು ಮತ್ತೆ 10 ರೂಪಾಯಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ ಯತಾಸ್ಥಿತಿಯಲ್ಲಿದೆ. ಗ್ರಾಹಕರಿಗೆ ಚಿನ್ನದ ಬೆಲೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಚಿನ್ನದ ಬೆಲೆ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಅಂತರದಲ್ಲಿ ಹೆಚ್ಚಾಗುತ್ತಲೇ ಸಾಗಿದೆ. ಹೀಗಿದ್ದರೂ ಅದರ ಬೆಡಿಕೆ ಮಾತ್ರ ಇಳಿಕೆ ಆಗುತ್ತಿಲ್ಲ. ಇಂದಿನ ಬೆಲೆ ನೋಡುವುದಾದರೆ, 22 ಕ್ಯಾರಟ್ ಚಿನ್ನದ ಬೆಲೆ ಭಾರತದಲ್ಲಿ 71,100 ರೂ. ಹಾಗೂ 24 ಕ್ಯಾರಟ್ ಚಿನ್ನದ ದರ 77,560 ರೂಪಾಯಿಯಷ್ಟಿದೆ. ದೇಶದಲ್ಲಿ 100 ಗ್ರಾಂ ಬೆಳ್ಳಿಗೆ 9500 ರೂಪಾಯಿ ಇದೆ. ಬೆಂಗಳೂರಿನಲ್ಲಿ ದೇಶದಲ್ಲಿರುವ ಬೆಲೆ ಚಿನ್ನಕ್ಕೆ ಇದೆ.

ದೇಶದಲ್ಲಿರುವ ವಿವಿಧ ಮಹಾನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ, ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬ ದರ ಪಟ್ಟಿ ಇಲ್ಲಿದೆ.
ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ
ಭಾರತ: 71100 ರೂಪಾಯಿ
ದುಬೈ: 68,150 ರೂಪಾಯಿ
ಕತಾರ್: 69,410 ರೂಪಾಯಿ
ಸೌದಿ ಅರೇಬಿಯಾ: 68,200 ರೂಪಾಯಿ
ಅಮೆರಿಕ: 67,150 ರೂಪಾಯಿ
ಸಿಂಗಾಪುರ: 69,020 ರೂಪಾಯಿ
ಕುವೈತ್: 66,570 ರೂಪಾಯಿ
ಮಲೇಷಿಯಾ: 69,690 ರೂಪಾಯಿ
ಭಾರತ ಹಾಗೂ ಮಲೇಷಿಯಾ ದೇಶ ಸೇರಿದಂತೆ ಒಂದೆರಡು ದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಉಳಿದಂತೆ ಬೇರಾವುದೇ ದೇಶವಾಗಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗಲಿ ಗಣನೀಯ ಬದಲಾವಣೆ ಆಗಿಲ್ಲ ಎಂದು ತಿಳಿದು ಬಂದಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಬಂಗಾರ ದರ
ಬೆಂಗಳೂರು: 71,100 ರೂಪಾಯಿ
ದೆಹಲಿ: 71,250 ರೂಪಾಯಿ
ಕೇರಳ: 71,100 ರೂಪಾಯಿ
ಅಹ್ಮದಾಬಾದ್: 71,150 ರೂಪಾಯಿ
ಕೋಲ್ಕತಾ: 71,100 ರೂಪಾಯಿ
ಜೈಪುರ: 71,250 ರೂಪಾಯಿ
ಲಕ್ನೋ: 71,250 ರೂಪಾಯಿ
ಮುಂಬೈ: 71,100 ರೂಪಾಯಿ
ದೇಶದ ನಗರವಾರು 100 ಗ್ರಾಂ ಬೆಳ್ಳಿ ದರಪಟ್ಟಿ
ಬೆಂಗಳೂರು: 9,000 ರೂಪಾಯಿ
ಮುಂಬೈ: 9,500 ರೂಪಾಯಿ
ದೆಹಲಿ: 9,500 ರೂಪಾಯಿ
ಅಹಮದಾಬಾದ್: 9,500 ರೂಪಾಯಿ
ಚೆನ್ನೈ: 10,100 ರೂಪಾಯಿ
ಜೈಪುರ್: 9,500 ರೂಪಾಯಿ
ಲಕ್ನೋ: 9,500 ರೂಪಾಯಿ
ಕೋಲ್ಕತ್ತ: 9,500 ರೂಪಾಯಿ
ಕೇರಳ: 10,100 ರೂಪಾಯಿ
ಗ್ರಾಹಕರು ಚಿನ್ನ ಬೆಳ್ಳಿ ಖರೀದಿಸುವಾಗ ಬೆಲೆಗಳಲ್ಲಿನ ವ್ಯತ್ಯಾಸ, ಇಂದಿನ ಮಾರುಕಟ್ಟೆ ಬೆಲೆ ತಿಳಿದು ಖರೀದಿಸಬೇಕು. ಅಲ್ಲದೇ ವೇಸ್ಟೇಜ್ ಹಾಗೂ ಮತ್ತಿತರ ಶುಲ್ಕ ಸೇರಿ ಚಿನ್ನಾಭರಣಗಳ ಮೇಲಿನ ಬೆಲೆಯಲ್ಲಿ ತುಸು ವ್ಯತ್ಯಸವಾಗಬಹುದು ಎಂಬ ಸೂಚಿಸಲಾಗಿದೆ.












Click it and Unblock the Notifications