ಸತತವಾಗಿ ಬಂಗಾರದ ಬೆಲೆ ಏರಿಕೆ, ಬೆಳ್ಳಿ ಬೆಲೆಯಲ್ಲಿ ಕುಸಿತ

ನವದೆಹಲಿ, ಜನವರಿ 08: ಕಳೆದ ಎರಡು ದಿನಗಳಿಂದ ಬಂಗಾರ ಬೆಲೆಯಲ್ಲಿ ಏರಿಕೆ ಕಾಣಿಸಿಕೊಂಡಿದೆ. ಮಂಗಳವಾರದಂದು 40 ರು ಸೇರಿದಂತೆ ಎರಡು ದಿನಗಳಿಂದ ಬಂಗಾರದ ಬೆಲೆ 190 ರೂಪಾಯಿ ಹೆಚ್ಚಾಗಿದೆ. ಆದರೆ, ಇದೇ ವೇಳೆ ಮಂಗಳವಾರದಂದು ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.

ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 40 ರೂಪಾಯಿ ಏರಿಕೆ ಕಂಡು 10 ಗ್ರಾಂಗೆ 32,690 ರೂಪಾಯಿಯಾಗಿದೆ. ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದ ಚಿನ್ನದ ಬೆಲೆ ಮೇಲ್ಮುಖವಾಗಿ ಚಲಿಸುತ್ತಿದೆ.

ಬೆಳ್ಳಿ ಬೆಲೆಯಲ್ಲಿ ಮಂಗಳವಾರದಂದು 210 ರೂಪಾಯಿ ಇಳಿಕೆಯಾಗಿತ್ತು. ಒಂದು ಕೆ.ಜಿ ಬೆಳ್ಳಿ ಬೆಲೆ 39,800 ರೂಪಾಯಿಯಾಗಿದೆ. ಸವರನ್ ಚಿನ್ನ 8 ಗ್ರಾಂ-ಪ್ರತಿ ತುಂಡಿನ ಬೆಲೆ 25,200ರು ನಷ್ಟಿತ್ತು.

Gold Prices Rise For Second Straight Session: 5 Things To Know

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆ ಇಳಿಕೆಯಾಗಿದೆ. ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಶೇಕಡಾ 0.56 ರಷ್ಟು ಇಳಿಕೆ ಕಂಡು 1282.40 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಬೆಳ್ಳಿ ಬೆಲೆ ಶೇಕಡಾ 0.74 ರಷ್ಟು ಇಳಿಕೆ ಕಂಡು 15.60 ಡಾಲರ್ ಪ್ರತಿ ಔನ್ಸ್ ಆಗಿದೆ.

* ಡಾಲರ್ ಎದುರು ರುಪಾಯಿ ಮೌಲ್ಯ ವ್ಯತ್ಯಾಸದಿಂದ ಚಿನ್ನದ ಆಮದು ದರ ಏರಿಕೆ ಕಂಡಿದೆ. 46ಪೈಸೆ ಕಳೆದುಕೊಂಡ ರುಪಾಯಿ ಡಾಲರ್ ಎದುರು 70.14 ರು ನಂತೆ ವ್ಯವಹಾರ ಕಂಡಿದೆ.
* ಚೀನಾ ಹಾಗೂ ಅಮೆರಿಕ ನಡುವಿನ ಆರ್ಥಿಕ ವ್ಯವಹಾರದ ಸಾಧ್ಯತೆಯ ಹಿನ್ನಲೆಯಲ್ಲಿ ಜಾಗತಿಕವಾಗಿ ಡಾಲರ್ ಮೌಲ್ಯ ಏರಿಕೆ ಕಂಡಿದೆ.
* ಮಕರ ಸಂಕ್ರಾಂತಿ ಹಾಗೂ ಉತ್ತರಾಯಣ ಪುಣ್ಯಕಾಲದ ಹಿನ್ನಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆ ಕೆಲ ಕಾಲ ಏರಿಕೆ ಕಂಡು ಬರಲಿದೆ ಎಂದು ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್ ನ ಗೌರವ್ ಕತಾರಿಯಾ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+