ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ದಿಢೀರ್ ಏರಿಕೆ!
ನವದೆಹಲಿ, ಅಕ್ಟೋಬರ್ 23: ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ , ಬೆಳ್ಳಿಯ ಬೇಡಿಕೆ ತಗ್ಗಿದ್ದರಿಂದ ಚಿನ್ನ ಪ್ರಿಯರಿಗೆ ಸೋಮವಾರದಂದು ಶುಭ ಸುದ್ದಿ ಸಿಕ್ಕಿತ್ತು. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, ಮಂಗಳವಾರದಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 130 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ 250 ರೂಪಾಯಿಯಷ್ಟು ದುಬಾರಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗೂ ನಾಣ್ಯ ತಯಾರಿಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಬಂಗಾರದ ಬೆಲೆ ಪ್ರತಿ 10ಗ್ರಾಂಗೆ 130 ರೂಪಾಯಿ ಏರಿಕೆಯಾಗಿ 32,350 ರೂಪಾಯಿಯಂತೆ ಮಾರಾಟವಾಗುತ್ತಿದೆ. ಇನ್ನು 250 ರೂಪಾಯಿ ಏರಿಕೆ ಕಂಡ ಬೆಳ್ಳಿ 1 ಕೆ.ಜಿ. ಗೆ 39,750 ರೂಪಾಯಿಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29, 860 ರು (ಸೋಮವಾರದ ದಾ 29,800 ರು), ಬೆಳ್ಳಿ ಒಂದು ಕೆಜಿಗೆ 41,300 (ನಿನ್ನೆ ದರ41,350) ರು ನಷ್ಟಿದೆ.
ಸೋಮವಾರದಂದು ಬಂಗಾರದ ಬೆಲೆಯಲ್ಲಿ 50 ರೂಪಾಯಿ ಇಳಿಕೆ ಕಂಡು ಬಂದಿತ್ತು. ಕೈಗಾರಿಕಾ ಘಟಕ ಹಾಗೂ ನಾಣ್ಯ ತಯಾರಕರಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿತ್ತು.
ಸಿಂಗಾಪುರದಲ್ಲಿ ಚಿನ್ನವು ಶೇಕಡಾ 0.79 ರಷ್ಟು ಹೆಚ್ಚಳ ಕಂಡು, 1,232.30 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಬೆಳ್ಳಿ ಶೇಕಡಾ 0.89 ರಷ್ಟು ಹೆಚ್ಚಳ ಕಂಡು 14.76 ಡಾಲರ್ ಪ್ರತಿ ಔನ್ಸ್ ಆಗಿದೆ.
ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಆತಂಕದ ವಾತಾವರಣ, ಇಟಲಿಯ ಬಜೆಟ್ ಸಮಸ್ಯೆ, ಬ್ರೆಕ್ಸಿಟ್ ಬೆಳವಣಿಗೆ ಇತ್ಯಾದಿಗಳು ಹೂಡಿಕೆದಾರರು ಹಳದಿ ಲೋಹದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡದಂತೆ ತಡೆ ಹಿಡಿದಿತ್ತು.












Click it and Unblock the Notifications