Gold Price Today: ಚಿನ್ನದ ದರ ಒಂದೇ ದಿನ ಭರ್ಜರಿ ₹2,730 ಹೆಚ್ಚಳ, ಬೆಳ್ಳಿ ಬೆಲೆ ಇಳಿಕೆ
ಬೆಂಗಳೂರು, ಮೇ 06: ಚಿನ್ನಾಭರಣ ಪ್ರಿಯರಿಗೆ ಇಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಒಂದು ಲಕ್ಷ ರೂಪಾಯಿಗೆ ಏರಿಕೆ ಮತ್ತೆ ಇಳಿಕೆ ಕಂಡಿದ್ದ ಚಿನ್ನವು ಒಂದೇ ದಿನ ಭರ್ಜರಿ ಏರಿಕೆ ಕಂಡಿದೆ. 22 ಚಿನ್ನದ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ ಹೆಚ್ಚಳವಾಗಿದೆ. ಬೆಳ್ಳಿಯ ದರವು ಕೊಂಚ ತಗ್ಗಿದೆ. ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ದರವು ಹೆಚ್ಚಾಗುತ್ತಿದ್ದು, ಬೇಡಿಕೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಚಿನ್ನ ಖರೀದಿದಾರರು ಸದ್ಯ ಚಿನ್ ಖರೀದಿಸಬೇಕೋ ಬೇಡವೋ ಎಂದು ಚಿಂತಿಸುತ್ತಿದ್ದಾರೆ. ನೆನ್ನೆ ಚಿನ್ನದ ದರ 87,750 ರೂಪಾಯಿ ಇದ್ದದ್ದ ಇಂದು (ಮೇ 06) 90,250 ರೂಪಾಯಿಗೆ ಅಂದರೆ ಒಂದೇ ದಿನಕ್ಕೆ ₹2,500 ರೂಪಾಯಿಗೆ ಏರಿಕೆ ಆಗಿದೆ. ಒಂದು ಲಕ್ಷ ತಲುಪಿದ ನಂತರದ ಆದ ಏರಿಳಿತದಲ್ಲಿ ಇದೇ ಮಹಾ ಹೆಚ್ಚಳ ಎಂದು ಹೇಳಲಾಗುತ್ತಿದೆ.

ಒಂದೇ ದಿನಕ್ಕೆ 2,730 ರೂಪಾಯಿ ಹೆಚ್ಚಳ
ಇನ್ನೂ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನೆನ್ನೆ ಸೋಮವಾರ 95,730 ರೂಪಾಯಿಯಿಂದ ಇಂದು 98,460 ರೂಪಾಯಿಗೆ ಏರಿಕೆ ಆಗಿದೆ. ಒಟ್ಟು ಬರೋಬ್ಬರಿ 2,730 ರೂಪಾಯಿ ಹೆಚ್ಚಾದಂತಾಗಿದೆ. ಇತ್ತೀಚೆಗೆ ತಜ್ಞರು ಹೇಳಿದ ಅಭಿಪ್ರಾಯ ನೋಡುವುದಾದರೆ, ಚಿನ್ನದ ಬೆಲೆಯು ಮುಂದಿನ ಕೆಲವು ದಿನಗಳಲ್ಲಿ ಯಾವ ರೀತಿ ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದಿದ್ದರು. ಇನ್ನಷ್ಟು ಹೆಚ್ಚಾಗಬಹುದು. ಇಲ್ಲವೇ ಗರಿಷ್ಠ ಪ್ರಮಾಣದಲ್ಲಿ ಕುಸಿಯಲೂ ಬಹುದು ಎಂದಿದ್ದರು. ಸದ್ಯ ಬಂಗಾರದ ದರ ಗ್ರಾಹಕರ ಜೇಬು ಸುಡುತ್ತಿರುವುದಂತೂ ಸತ್ಯ.
ಬೆಳ್ಳಿಯ ಬೆಲೆ 100 ಗ್ರಾಂಗೆ 9700 ರೂಪಾಯಿ ಇದೆ. ಇದರಲ್ಲಿ ಕೊಂಚ ಬದಲಾವಣೆ ಆಗಿದೆ. 100 ಗ್ರಾಂ ಬೆಳ್ಳಿಗೆ 10 ರೂಪಾಯಿ ಕಡಿಮೆ ಆಗಿದೆ. 1ಕೆಜಿ ಬೆಳ್ಳಿಗೆ 100 ರೂಪಾಯಿ ಇಳಿಕೆ ಆಗಿದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಪ್ರಮುಖ ಬದಲಾವಣೆ ಆಗಿದೆ. 10 ಗ್ರಾಂ ಈ ಚಿನ್ನಕ್ಕೆ ನೆನ್ನೆ 71,800 ರೂಪಾಯಿ ಇತ್ತು ಇಂದು ಅದರ ಬೆಲೆ 73,840 ರೂ.ಗೆ ಹೆಚ್ಚಾಗಿದೆ. ಈ ಮೂಲಕ 2,040 ರೂಪಾಯಿ ಹೆಚ್ಚಿಸಿಕೊಂಡಿದೆ ಎಂದು ವರದಿ ಆಗಿದೆ.
ಆಭರಣ ಚಿನ್ನದ ನಗರವಾರು ದರ ಪಟ್ಟಿ (10 ಗ್ರಾಂ)
ಬೆಂಗಳೂರು: 90,250 ರೂಪಾಯಿ
ದೆಹಲಿ: 90,400 ರೂಪಾಯಿ
ಕೇರಳ: 90,250 ರೂಪಾಯಿ
ಅಹ್ಮದಾಬಾದ್: 90,300 ರೂಪಾಯಿ
ಚೆನ್ನೈ: 90,250 ರೂಪಾಯಿ
ಮುಂಬೈ: 90,250 ರೂಪಾಯಿ
ಕೋಲ್ಕತಾ: 90,250 ರೂಪಾಯಿ
ಜೈಪುರ್: 90,400 ರೂಪಾಯಿ
ಲಕ್ನೋ: 90,400 ರೂಪಾಯಿ












Click it and Unblock the Notifications