ಚಿನ್ನದ ದರ ಕುಸಿತ: ಆಭರಣ ಪ್ರಿಯರಿಗೆ ಖುಷಿಯ ಸುದ್ದಿ

ಬೆಂಗಳೂರು, ಡಿಸೆಂಬರ್ 10: ಚಿನ್ನದ ದರ ಸತತ ಐದನೇ ದಿನವೂ ಇಳಿಕೆಯಾಗಿದೆ. ಜಾಗತಿಕ ಆರ್ಥಿಕ ಕುಸಿತ ಮತ್ತು ಬೆಲೆ ಏರಿಕೆಯ ಸಂಕಟದ ನಡುವೆ ಚಿನ್ನದ ಬೆಲೆ ಇಳಿಕೆ ಗ್ರಾಹಕರಿಗೆ ತುಸು ಆಶಾದಾಯಕವಾಗಿ ಗೋಚರಿಸಿದೆ.

ಕಳೆದ ಐದು ದಿನಗಳಲ್ಲಿ ನಿರಂತರ ಇಳಿಕೆಯಾಗಿ 10 ಗ್ರಾಂ ಚಿನ್ನಕ್ಕೆ 750 ರೂ.ದಷ್ಟು ಬೆಲೆ ಇಳಿಕೆಯಾಗಿದೆ. 10 ಗ್ರಾಂಗೆ 40,000 ರೂ. ಗಡಿ ತಲುಪಿದ್ದ ಚಿನ್ನ, ಆಭರಣ ಪ್ರಿಯರಲ್ಲಿ ಕಳವಳ ಹುಟ್ಟಿಸಿತ್ತು. ಅಲ್ಲದೆ, ಈ ಅವಧಿಯಲ್ಲಿ ಮದುವೆಯಂತಹ ಸಮಾರಂಭಗಳು ಹೆಚ್ಚಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚು. ಇದು ಮಧ್ಯಮವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ 0.03ಯಷ್ಟು, ಅಂದರೆ ಸುಮಾರು 2,450 ರೂ.ನಷ್ಟು ಕಡಿಮೆಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಬೆಲೆ ಕುಸಿತದಿಂದ 37,570ಕ್ಕೆ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಬೆಳ್ಳಿ ದರ ಶೇ 0.09ರಷ್ಟು ಕುಸಿದಿದ್ದು, ಕೆ.ಜಿಗೆ 43,465 ರೂ. ಇದೆ.

ಚೀನಾ-ಅಮೆರಿಕ ವಾಣಿಜ್ಯ ಒಪ್ಪಂದ

ಚೀನಾ-ಅಮೆರಿಕ ವಾಣಿಜ್ಯ ಒಪ್ಪಂದ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ದೊಡ್ಡ ಕುಸಿತ ಕಂಡಿದೆ. ಮಂಗಳವಾರ ಔನ್ಸ್‌ಗೆ $1,460.95ಕ್ಕೆ ಇಳಿದಿದೆ. ಡಿ.15ರಂದು ಚೀನಾದ ಆಮದುಗಳ ಮೇಲಿನ ಅಮೆರಿಕದ ಟಾರಿಫ್‌ಗಳ ಹೊಸ ನಿಯಮಗಳು ಹೇರಿಕೆಯಾಗುವುದರಿಂದ ಹಳದಿ ಚಿನ್ನದ ಮೇಲಿನ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ. ಹೀಗಾಗಿ ದೊಡ್ಡ ಮೊತ್ತದ ಹೂಡಿಕೆಗೆ ಅವರು ಮುಂದಾಗುತ್ತಿಲ್ಲ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 3,530 ರೂ ಇದೆ. 10 ಗ್ರಾಂ ಚಿನ್ನದ ಮೌಲ್ಯ 35,300 ರೂ. ಇದೆ. 24 ಕ್ಯಾರಟ್ ಚಿನ್ನದ ಬೆಲೆ 3,851 ರೂ. ಇದ್ದು, ಹತ್ತು ಗ್ರಾಂಗೆ 38,510 ರೂ. ಇದೆ.

ದೆಹಲಿಯಲ್ಲಿ ಬೆಲೆ ಎಷ್ಟು?

ದೆಹಲಿಯಲ್ಲಿ ಬೆಲೆ ಎಷ್ಟು?

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 3,670 ರೂ ಇದೆ. 10 ಗ್ರಾಂ ಚಿನ್ನದ ಮೌಲ್ಯ 36,700 ರೂ. ಇದೆ. 24 ಕ್ಯಾರಟ್ ಚಿನ್ನದ ಬೆಲೆ 3,790 ರೂ. ಇದ್ದು, ಹತ್ತು ಗ್ರಾಂಗೆ 37,900 ರೂ. ಇದೆ.

ಮುಂಬೈನಲ್ಲಿ ಎಷ್ಟು ದರ?

ಮುಂಬೈನಲ್ಲಿ ಎಷ್ಟು ದರ?

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 3,711 ರೂ ಇದೆ. 10 ಗ್ರಾಂ ಚಿನ್ನದ ಮೌಲ್ಯ 37,110 ರೂ. ಇದೆ. 24 ಕ್ಯಾರಟ್ ಚಿನ್ನದ ಬೆಲೆ 3,811 ರೂ. ಇದ್ದು, ಹತ್ತು ಗ್ರಾಂಗೆ 38,110 ರೂ. ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+