Gold: ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿತ; ಆಭರಣ ಖರೀದಿದಾರರಿಗೆ ನೆಮ್ಮದಿ ತಂದ ಹೊಸ ದರ
ಕೊಚ್ಚಿ: ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ನಿರಂತರವಾಗಿ ಗಗನಕ್ಕೇರಿದ್ದ ಚಿನ್ನದ ದರವು ಇಳಿಕೆ ಕಂಡಿದೆ. ಜನವರಿ 26ರ ಸೋಮವಾರದಂದು ಬೆಳಗ್ಗೆಗಿಂತ ಮಧ್ಯಾಹ್ನ ಚಿನ್ನವು ತುಸು ಅಗ್ಗವಾಯಿತು. ಗಂಟೆಯಿಂದ ಗಂಟೆಗೆ ದರದಲ್ಲಿ ವ್ಯತ್ಯಾಸವಾಗಿದ್ದು ಕಂಡು ಬಂತು. ಯಾರೆಲ್ಲ ಹೊಸದಾಗಿ ಚಿನ್ನ ಖರೀದಿಸಲು ಮುಂದಾಗಿದ್ದರೆ ಅಂತವರಿಗೆ ಇಳಿಕೆಯ ಹೊಸ ದರ ತುಸು ನೆಮ್ಮದಿ ನೀಡಿದೆ.
ಕೇರಳದಲ್ಲಿ ಬೆಳಗ್ಗೆ ಮತ್ತು ಮಾಧ್ಯಾಹ್ನದಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂತು. ರಾಜ್ಯದಲ್ಲಿ ಮಧ್ಯಾಹ್ನದ ನಂತರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಆಯಿತು. 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಪವನ್ (8 ಗ್ರಾಂ) ಬೆಲೆಯಲ್ಲಿ ಇಂದು ಮಧ್ಯಾಹ್ನ ಕುಸಿಯಿತು. ಆಭರಣ ಖರೀದಿಸುವ ಗ್ರಾಹಕರು ಈ ಅವಕಾಶ ಬಳಸಿಕೊಳ್ಳಬಹುದು. ಈ ಇಳಿಕೆಯಿಂದಾಗಿ ಸಣ್ಣ ಪ್ರಮಾಣದಲ್ಲಾದರೂ ಚಿನ್ನ ಖರೀದಿಸಲು ಜನರಿಗೆ ಅವಕಾಶ ಸಿಕ್ಕಂತಾಗಿದೆ.

ಜಾಗತಿಕ ಕಾರಣಗಳಿಂದ ಚಿನ್ನದ ಮೌಲ್ಯ ಏರುಗತಿಯಲ್ಲಿ ಸಾಗುತ್ತಿದೆ. ಡಾಲರ್ ಸೂಚ್ಯಂಕ 97.12 ರಷ್ಟಿದ್ದರೆ, ರೂಪಾಯಿ ಮೌಲ್ಯ 91.61.ರಷ್ಟಿದೆ. ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 5090 ಡಾಲರ್ ಇದೆ. ಕೇರಳದ ಆಭರಣಕಾರರು ಡಾಲರ್-ರೂಪಾಯಿ ಮೌಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಹೋಲಿಸುವ ಮೂಲಕ ಚಿನ್ನದ ಬೆಲೆಯನ್ನು ನಿರ್ಧರಿಸುತ್ತಾರೆ. ಇಂದಿನ ಚಿನ್ನದ ಬೆಲೆ ಕುಸಿತವು ಕೇರಳದ ಗ್ರಾಹಕರನ್ನು ಜುವೆಲ್ಲರಿ ಮಳಿಗೆಯತ್ತ ಬರುವಂತೆ ಮಾಡಿತು.
ಇಂದು ಬೆಳಿಗ್ಗೆ ದಾಖಲಾದ ಚಿನ್ನದ ದರ
22 ಕ್ಯಾರಟ್ ಚಿನ್ನದ ಒಂದು ಪವನ್ (8ಗ್ರಾಂ) ಬೆಲೆ : 119320 ರೂಪಾಯಿ
18 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 98040 ರೂಪಾಯಿ
14 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 76320 ರೂಪಾಯಿ
9 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 49200 ರೂಪಾಯಿ
ಮಧ್ಯಾಹ್ನದ ನಂತರ ಕುಸಿತವಾದ ಚಿನ್ನದ ಬೆಲೆ ಪಟ್ಟಿ
22 ಕ್ಯಾರಟ್ ಚಿನ್ನದ 8ಗ್ರಾಂ ದರ 118760 ರೂಪಾಯಿ
18 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 97560 ರೂಪಾಯಿ
14 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 75960 ರೂಪಾಯಿ
9 ಕ್ಯಾರಟ್ ಚಿನ್ನದ 8ಗ್ರಾಂ ಬೆಲೆ 49000 ರೂಪಾಯಿ
ಇಂದು ಬೆಳಗ್ಗೆ ಹಾಗೂ ಮಧ್ಯಾಹ್ನ ದಾಖಲಾದ ಬೆಲೆಗೆ ಹೋಲಿಸಿದರೆ ಮಧ್ಯಾಹ್ನ ಪ್ರತಿ 1 ಗ್ರಾಂ ಮತ್ತು ಪ್ರತಿ 8 ಗ್ರಾಂ ಚಿನ್ನದ ದರದಲ್ಲಿ ಕ್ರಮವಾಗಿ 70 ರೂಪಾಯಿ ಮತ್ತು 560 ರೂಪಾಯಿಯಷ್ಟು ಇಳಿಕೆ ಆಗಿದೆ. ಈ ದರವು ತಾತ್ಕಾಲಿಕ ಎಂದು ಅಂದಾಜಿಸಲಾಗಿದೆ. ಆಭರಣಗಳನ್ನು ಖರೀದಿಸುವಾಗ, ಗ್ರಾಹಕರು ಚಿನ್ನದ ಬೆಲೆಯ ಜೊತೆಗೆ ಐದು ಪ್ರತಿಶತ ಮಜೂರಿ ಶುಲ್ಕ, ಮೂರು ಪ್ರತಿಶತ ಜಿಎಸ್ಟಿ ಮತ್ತು ಹಾಲ್ ಮಾರ್ಕಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನೂ ರಾಜ್ಯದ ವಿವಿಧ ನಗರಗಳಲ್ಲಿ ವೇಸ್ಟೇಜ್ ಸೇರಿ ಇತರ ಶುಲ್ಕಗಳಿಂದಾಗಿ ದರದಲ್ಲಿ ಸಣ್ಣ ಬದಲಾವಣೆಯೂ ಆಗಬಹುದು.












Click it and Unblock the Notifications