Gold Silver Price: ಗ್ರಾಹಕರಿಗೆ ಮತ್ತೆ ಶಾಕ್, ಚಿನ್ನದ ಬೆಲೆ ರೂ.5.500 ಹೆಚ್ಚಳ, ಬೆಳ್ಳಿ ದರ? ಅಪ್ಡೇಟ್ಸ್
ಬೆಂಗಳೂರು, ಫೆಬ್ರವರಿ 17: ಚಿನ್ನಾಭರಣ ಪ್ರಿಯರಿಗೆ ಬಂಗಾರದ ಬೆಲೆಯು ಮತ್ತೆ ಶಾಕ್ ನೀಡಿದೆ. ಬೆಲೆ ಏರಿಕೆಯ ನಡುವೆ ಚಿನ್ನಾಭರಣಗಳ ಬೇಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಕೆಲವು ದಿನಗಳಿಂದ ಏರಿಳಿತದಲ್ಲಿದ್ದ ಚಿನ್ನದ ದರ ಇದೀಗ ದಿಢೀರನೇ 5.500 ರೂಪಾಯಿಗೆ ಏರಿಕೆ ಕಂಡಿದೆ. ಇದರಿಂದ ಬಂಗಾರ ಖರೀದಿಗೆ ಪ್ಲಾನ್ ಮಾಡಿದ್ದ ಜನರಿಗೆ ಸೋಮವಾರ ಫೆಬ್ರವರಿ 17ರಂದು ಭಾರೀ ಆಘಾತ ಎದುರಾಗಿದೆ.
ಪ್ರಸ್ತುತ ದಿನಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಿವೆ. ಹೀಗಾಗಿ ಜನರಿಗೆ ಬಂಗಾರ ಖರೀದಿಯ ಅಗತ್ಯತೆಯು ತುಂಬಾ ಇದೆ. ಆಗಾಗ ಕೊಂಚ ಇಳಿಕೆ ಆಗುವ ಚಿನ್ನ ಮತ್ತು ಬೆಳ್ಳಿ ದರಗಳು ವಾರದಲ್ಲಿ ಒಮ್ಮೆಯಾದರೂ ದಿಢೀರ್ ಹೆಚ್ಚಿನ ದರಕ್ಕೆ ಏರಿಕೆ ಆಗಿ ಚಿನ್ನಾಭರಣಪ್ರಿಯರ ಜೇಬು ಸುಡುತ್ತಿದೆ.

ಹಾಗಾದರೆ ಇಂದು ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳದ ಪ್ರಮುಖ ಅಪ್ಡೇಟ್ ಇಲ್ಲಿದೆ. ದೇಶದ ನಗರವಾರು ಮಾಹಿತಿಯು ಇಲ್ಲಿದೆ. ಇಂದು ಸೋಮವಾರ ಫೆಬ್ರವರಿ 17ರಂದು 22 ಕ್ಯಾರಟ್ ಚಿನ್ನ ಬೆಲೆ 5000 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ಬೆಲೆ 5,500 ರೂಪಾಯಿಗೆ ಏರಿಕೆ ಆಗಿದೆ.
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 78,900 ಇದ್ದದ್ದು, ಇಂದು 79400 ರೂಪಾಯಿಗೆ ಹೆಚ್ಚಳವಾಗಿದೆ. ಒಟ್ಟು 500 ರೂಪಾಯಿ ಏರಿಕೆ ಆಗಿದೆ. ಇದೇ 100 ಗ್ರಾಂ ಚಿನ್ನಕ್ಕೆ 794000 ರೂ.ನಿಂದ 789000 ರೂ.ಗೆ ಏರಿಕೆ ಆಗಿದೆ. ಈ ಮೂಲಕ ದರದಲ್ಲಿ 5000 ರೂ. ಹೆಚ್ಚಳವಾಗಿದೆ.

24 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ 86,070 ರೂಪಾಯಿಯಿಂದ 86,620 ರೂ.ಗೆ ಏರಿಕೆ ಕಂಡಿದೆ. ಇದೇ ಚಿನ್ನದ 100 ಗ್ರಾಂ ಬೆಲೆ 860700 ರೂ.ನಿಂದ 86,6200 ರೂಪಾಯಿಗೆ ಹೆಚ್ಚಾಗಿದೆ. ಅಂದರೆ ಇದರ ದರದಲ್ಲಿ 5,500 ರೂಪಾಯಿಗೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಇನ್ನೂ ಬೆಳ್ಳಿ ದರ ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದಲ್ಲಿ ನೆನ್ನೆಯ ದರವೇ ಮುಂದುವರಿದಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 100 ಗ್ರಾಂ ಬೆಳ್ಳಿ ದರ 10,050 ರೂಪಾಯಿ ಇದೆ.
ನಗರವಾರು 10 ಗ್ರಾಂ 22 ಕ್ಯಾರಟ್ ಚಿನ್ನದ ದರಪಟ್ಟಿ
ಬೆಂಗಳೂರು: 79,400 ರೂಪಾಯಿ
ದೆಹಲಿ: 79,550 ರೂಪಾಯಿ
ಕೇರಳ: 79,400 ರೂಪಾಯಿ
ಚೆನ್ನೈ: 79,400 ರೂಪಾಯಿ
ಅಹ್ಮದಾಬಾದ್: 79,450 ರೂಪಾಯಿ
ಜೈಪುರ್: 79,550 ರೂಪಾಯಿ
ಮುಂಬೈ: 79,400 ರೂಪಾಯಿ
ಲಕ್ನೋ: 79,550 ರೂಪಾಯಿ
ಕೋಲ್ಕತಾ: 79,400 ರೂಪಾಯಿ












Click it and Unblock the Notifications