Gold Price Today: ದೀಪಾವಳಿಗೂ ಮುನ್ನ ಮತ್ತೆ ಏರಿದ ಚಿನ್ನದ ಬೆಲೆ; ನವೆಂಬರ್ 3ರ ದರ ಎಷ್ಟಿದೆ?
ಬಂಗಾರ ಪ್ರಿಯರಿಗೆ ಮತ್ತೆ ಆತಂಕ ಶುರುವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಕಳೆದ ಎರಡು ದಿನಗಳಿಂದ ಮತ್ತೆ ಭಾರೀ ಹೆಚ್ಚಳವಾಗಿದೆ. ಅಕ್ಟೋಬರ್ ತಿಂಗಳಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿತ್ತು. ಚಿನ್ನ ಮತ್ತು ಬೆಳ್ಳಿ ಬೆಲೆಯು ದೀಪಾವಳಿ ಸಮಯದ ವೇಳೆಗೆ ಇನ್ನಷ್ಟು ಕಡಿಮೆ ಆಗಬಹುದು ಎಂದು ಬಂಗಾರ ಪ್ರಿಯರು ಅಂದಾಜಿಸಿದ್ದರು. ಆದರೆ, ಇದೀಗ ಬಂಗಾರ ಪ್ರಿಯರ ಲೆಕ್ಕಾಚಾರ ತಲೆಕೆಳಗಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನವೆಂಬರ್ 1ರಂದು ಯಾವುದೇ ವ್ಯತ್ಯಾಸವಾಗಿರಲಿಲ್ಲ. ವಾರಾಂತ್ಯವೂ ಆಗಿದ್ದರಿಂದ ಚಿನ್ನದ ಬೆಲೆಯು ಸ್ಥಿರವಾಗಿತ್ತು. ಆದರೆ, ನವೆಂಬರ್ 2 ಹಾಗೂ 3ರಂದು ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಬಂಗಾರದ ಬೆಲೆ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗಿದೆ. ನವೆಂಬರ್ 3ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಹಳದಿ ಲೋಹದ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ನವೆಂಬರ್ 3ರ ಮಂಗಳವಾರ ಒಂದು ಗ್ರಾಂಗೆ 10,473 ರೂಪಾಯಿ ಆಗಿದೆ. ಇನ್ನು ಹತ್ತು ಗ್ರಾಂ ಚಿನ್ನದ ಬೆಲೆಯು 1,04,730 ರೂ. ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಮೇಲೆ 20 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 200 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,800 ರೂಪಾಯಿ ಆಗಿದೆ. ಇನ್ನು ಹತ್ತು ಗ್ರಾಂ ಚಿನ್ನದ ಬೆಲೆಯು 1,28,000 ರೂ. ಆಗಿದೆ. ನವೆಂಬರ್ 2ರ ಸೋಮವಾರಕ್ಕೆ ಹೋಲಿಕೆ ಮಾಡಿದರೆ, 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯ ಮೇಲೆ 25 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 250 ರೂಪಾಯಿ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 18 ಹಾಗೂ 22 ಕ್ಯಾರೆಟ್‌ನಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,964 ರೂಪಾಯಿ ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆಯು 1,39,640 ರೂಪಾಯಿ ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 27 ರೂಪಾಯಿ ಹಾಗೂ ಹತ್ತು ಗ್ರಾಂನ ಬೆಲೆಯು 270 ರೂಪಾಯಿ ಹೆಚ್ಚಳವಾಗಿದೆ.
Gold Price Today: ಬೆಳ್ಳಿಯ ಬೆಲೆ ಎಷ್ಟಾಗಿದೆ ?
ಚಿನ್ನದ ಬೆಲೆ ಹೆಚ್ಚಳವಾದರೂ ಬೆಳ್ಳಿಯ ಬೆಲೆಯು ಸ್ಥಿರವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 200 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆಯು 2 ಲಕ್ಷ ರೂ. ಆಗಿದೆ.


Click it and Unblock the Notifications
