Gold Price Today: ಹೊಸ ವರ್ಷಕ್ಕೆ ಇಳಿಯಿತು ಚಿನ್ನದ ಬೆಲೆ, ಇಂದಿನ ದರ ಎಷ್ಟಿದೆ?
ವರ್ಷದ ಕೊನೆಯ ದಿನ ಚಿನ್ನದ ದರಗಳು ಭಾರೀ ಇಳಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರಿಗೆ ನೆಮ್ಮದಿ ನೀಡಿದೆ. ಕಳೆದ ವಾರವಿಡೀ ಚಿನ್ನದ ದರಗಳು ಗಗನಮುಖಿಯಾಗಿದ್ದವು. ನಿರಂತರ ಏರಿಕೆಯಿಂದ ಖರೀದಿದಾರರು ಕೂಡ ಹಿಂದೇಟು ಹಾಕಿದ್ದರು. ಕಳೆದ ಎರಡು ದಿನಗಳಿಂದ ಚಿನ್ನದ ದರಗಳು ಸತತವಾಗಿ ಇಳಿಕೆ ಕಾಣುತ್ತಿವೆ. 24 ಕ್ಯಾರೆಟ್ ಚಿನ್ನದ ಮೇಲೆ ಇಂದು 32 ರೂಪಾಯಿ ಕಡಿಮೆಯಾಗಿದೆ. ಹೊಸ ವರ್ಷಕ್ಕೆ ಚಿನ್ನ ಖರೀದಿಸುವವರಿಗೆ ಇದು ಶುಭದಿನವಾಗಿದೆ. ಇಂದಿನ ಚಿನ್ನ ಹಾಗೂ ಬೆಳ್ಳಿ ದರಗಳ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,588, 22 ಕ್ಯಾರೆಟ್ ಚಿನ್ನಕ್ಕೆ ₹12,455 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,191 ಇದೆ. ನಿನ್ನೆಗಿಂತ ಪ್ರತಿ ಗ್ರಾಂ ಚಿನ್ನದ ಮೇಲೆ 32 ರೂಪಾಯಿವರೆಗೆ ದರ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,588, 8 ಗ್ರಾಂ ಚಿನ್ನದ ದರವು ₹1,08,704, 10 ಗ್ರಾಂ ಚಿನ್ನದ ದರ ₹1,35,880, 100 ಗ್ರಾಂ ಚಿನ್ನದ ದರ ₹13,58,800 ಆಗಿದ್ದು, ನಿನ್ನೆಗಿಂತ ದರ ₹3,200 ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,455 ಆಗಿದ್ದು, ನಿನ್ನೆಗಿಂತ ಗ್ರಾಂ ಮೇಲೆ ₹30 ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ₹99,640, 10 ಗ್ರಾಂ ಚಿನ್ನದ ದರ ₹1,24,550, 100 ಗ್ರಾಂ ಚಿನ್ನದ ದರ ₹12,45,500 ಆಗಿದ್ದು, ₹3,000ವರೆಗೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,191 ಆಗಿದ್ದು, ನಿನ್ನೆಗಿಂತ ಗ್ರಾಂ ಮೇಲೆ ₹24 ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರವು ₹81,528, 10 ಗ್ರಾಂ ಚಿನ್ನದ ದರ ₹1,01,910, 100 ಗ್ರಾಂ ಚಿನ್ನದ ದರ ₹10,19,100 ಆಗಿದ್ದು, ನಿನ್ನೆಗಿಂತ ದರ ₹2,400ರವರೆಗೆ ಕುಸಿದಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
| ದಿನಾಂಕ | 24 ಕ್ಯಾರೆಟ್ ಚಿನ್ನ (₹) | 22 ಕ್ಯಾರೆಟ್ ಚಿನ್ನ (₹) |
|---|---|---|
| ಡಿಸೆಂಬರ್ 31 | 13,588 | 12,455 |
| ಡಿಸೆಂಬರ್ 30 | 13,620 | 12,485 |
| ಡಿಸೆಂಬರ್ 29 | 13,925 | 12,765 |
| ಡಿಸೆಂಬರ್ 28 | 14,242 | 13,055 |
| ಡಿಸೆಂಬರ್ 27 | 14,242 | 13,055 |
| ಡಿಸೆಂಬರ್ 26 | 14,002 | 12,835 |
| ಡಿಸೆಂಬರ್ 25 | 13,925 | 12,765 |
| ಡಿಸೆಂಬರ್ 24 | 13,893 | 12,735 |
| ಡಿಸೆಂಬರ್ 23 | 13,855 | 12,700 |
| ಡಿಸೆಂಬರ್ 22 | 13,615 | 12,480 |
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ದರ ಯತಾಸ್ಥಿತಿ ಕಾಯ್ದುಕೊಂಡಿದ್ದು, ಪ್ರತಿ ಗ್ರಾಂಗೆ ₹240 ಮತ್ತು ಪ್ರತಿ ಕಿಲೋಗ್ರಾಂಗೆ ₹2,40,000 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 5,841 ಮತ್ತು 10 ಗ್ರಾಂಗೆ ₹ 58,410 ಆಗಿದ್ದು ಭಾರೀ ಇಳಿಕೆ ಕಂಡಿದೆ. ಗ್ರಾಂ ಮೇಲೆ 339 ರೂಪಾಯಿವರೆಗೆ ದರ ಇಳಿದಿದೆ. ಈ ಬೆಲೆ ಇಳಿಕೆಯಿಂದ ಹೊಸ ವರ್ಷಕ್ಕೆ ಚಿನ್ನ ಖರೀದಿಸಲು ಜನ ಆಸಕ್ತಿ ತೋರುವ ನಿರೀಕ್ಷೆ ಇದೆ.












Click it and Unblock the Notifications