Gold Price: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಚಿನ್ನ - ಬೆಳ್ಳಿ, ಡಿಸೆಂಬರ್ 22ರ ಸಂಜೆ ಹೊಸ ದಾಖಲೆ ಸೃಷ್ಟಿ
ಚಿನ್ನ ಮತ್ತು ಬೆಳ್ಳಿ ಬೆಲೆಯು ಸೋಮವಾರ (ಡಿಸೆಂಬರ್ 22)ರಂದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ವರ್ಷದಲ್ಲಿ ಚಿನ್ನದ ಬೆಲೆ ಏಕಾಏಕಿ ಹೆಚ್ಚಳವಾಗುತ್ತಿರುವುದು ಇದು ನಾಲ್ಕನೆ ಬಾರಿಯಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೇರಿಕದ ಮತ್ತಷ್ಟು ಸುಂಕ ಏರಿಕೆ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆಯು ಹೊಸ ಇತಿಹಾಸ ಬರೆದಿದೆ. ಚಿನ್ನ ಮತ್ತು ಬೆಳ್ಳಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಹೆಚ್ಚಳವಾಗಿದೆ ಹಾಗೂ ಬೆಲೆ ಏರಿಕೆಗೆ ಕಾರಣವೇನು ಎನ್ನುವ ವಿವರ ನೋಡೋಣ.
ಚಿನ್ನದ ಬೆಲೆ ಮತ್ತೊಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಮೊದಲ ಬಾರಿಗೆ ಪ್ರತಿ ಔನ್ಸ್ (ತೂಕ ಮಾಡುವ ಮಾನದಂಡ)ಗೆ $4,400 (£3,275) ಗಿಂತ ಹೆಚ್ಚಿದೆ. ಮುಂದಿನ ವರ್ಷ ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಮತ್ತಷ್ಟು ಕಡಿತಗೊಳಿಸುವ ನಿರೀಕ್ಷೆಯ ಮೇರೆಗೆ ಈ ಅಮೂಲ್ಯ ಲೋಹದ ಬೆಲೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

ಚಿನ್ನದೊಂದಿಗೆ ಬೆಳ್ಳಿ ಮತ್ತು ಪ್ಲಾಟಿನಂ ನಂತಹ ಇತರ ಅಮೂಲ್ಯ ಲೋಹಗಳ ಬೆಲೆಗಳು ಸಹ ಏರಿಕೆ ಕಂಡಿದೆ. ಸೋಮವಾರ ಚಿನ್ನದ ಬೆಲೆ $4,420 ರ ಗರಿಷ್ಠ ಮಟ್ಟವನ್ನು ತಲುಪಿದೆ. ಈ ವರ್ಷ ಚಿನ್ನದ ಬೆಲೆ 68% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದು 1979 ರ ನಂತರದ ಅತ್ಯಧಿಕ ಹೆಚ್ಚಳವಾಗಿದೆ ಎಂದು ಚಿನ್ನದ ಬುಲಿಯನ್ ಮಾರುಕಟ್ಟೆ ಬುಲಿಯನ್‌ವಾಲ್ಟ್‌ನ ಸಂಶೋಧನಾ ನಿರ್ದೇಶಕ ಆಡ್ರಿಯನ್ ಆಶ್ ಹೇಳಿದ್ದಾರೆ.
ಅಮೇರಿಕಾದ ಫೆಡರಲ್ ರಿಸರ್ವ್ 2026 ರಲ್ಲಿ ಎರಡು ಬಾರಿ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಸಡಿಲವಾದ ಹಣಕಾಸು ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನ ಮತ್ತು ಬೆಳ್ಳಿಯ ಬೆಲೆಯು ನಿರಂತರ ಹಾಗೂ ಏಕಾಏಕಿ ಹೆಚ್ಚಳಕ್ಕೆ ಕಾರಣವಾಗಿದೆ.
ವೆನೆಜುವೆಲಾ ವಿರುದ್ಧ ಅಮೆರಿಕ ತೈಲ ದಿಗ್ಬಂಧನವನ್ನು ತೀವ್ರಗೊಳಿಸಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಉಕ್ರೇನ್ ಮೊದಲ ಬಾರಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ರಷ್ಯಾದ ನೌಕಾಪಡೆಯ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿದೆ.
ಅಲ್ಲದೇ ಅಮೇರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ಪಾತಾಳಕ್ಕೆ ಕುಸಿತ ಕಂಡಿರುವುದು. ಪದೇ ಪದೇ ಅಮೇರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವುದು ಸಹ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏಕಾಏಕಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಈ ವರ್ಷ ಚಿನ್ನದ ಬೆಲೆ ಸುಮಾರು ಶೇ. 70 ರಷ್ಟು ಹೆಚ್ಚಾಗಿದೆ. ಕೇಂದ್ರೀಯ ಬ್ಯಾಂಕ್ ಖರೀದಿಗಳು ಮತ್ತು ಬೆಳ್ಳಿ ಬೆಂಬಲಿತ ವಿನಿಮಯ ವಹಿವಾಟು ನಿಧಿಗಳ ಒಳಹರಿವು ಹೆಚ್ಚಾಗಿದೆ. ಜಾಗತಿಕ ವ್ಯಾಪಾರವನ್ನು ಮರುರೂಪಿಸುವ ಟ್ರಂಪ್ ಅವರ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೂಡಿಕೆದಾರರಿಗೆ ಚಿನ್ನ ಮತ್ತು ಬೆಳ್ಳಿಯು ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದು ಎನ್ನುವಂತಾಗಿದೆ.
ಡಿಸೆಂಬರ್ 22 ಸಂಜೆ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಹೆಚ್ಚಳವಾಗಿದೆ ?
ಇನ್ನು ಡಿಸೆಂಬರ್ 22ರ ಸಂಜೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ ಭರ್ಜರಿ ಹೆಚ್ಚಳವಾಗಿದೆ. 2025 ಡಿಸೆಂಬರ್ 22ರ ಸಂಜೆ ಭಾರತದಲ್ಲಿ ಚಿನ್ನದ ಬೆಲೆಗಳು ಗಗನಕ್ಕೇರಿದೆ. ವಿವಿಧ ನಗರಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆಯು 1 ಲಕ್ಷದ ಗಡಿಯನ್ನು ದಾಟಿ, ಪ್ರತಿ ಪೌಂಡ್‌ಗೆ (8 ಗ್ರಾಂ) ಸುಮಾರು ₹720 ರಷ್ಟು ಏರಿಕೆ ಆಗಿದೆ. ಆದರೆ ಬೆಳ್ಳಿ ಕೂಡ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಬೆಳ್ಳಿಯು ಪ್ರತಿ ಗ್ರಾಂಗೆ ₹231 (ಅಥವಾ ರೂ. 2,31,000/ಕೆಜಿ) ಗೆ ಜಿಗಿತ ಆಗಿದೆ.












Click it and Unblock the Notifications